ಕುಂದಾಪುರ. ಅ.16:ನಮ್ಮ ದೇಶದ ಸ್ವಾತಂತ್ರ್ಯ ಸಂಭ್ರಮದ ಅಮ್ರತ ಮಹೋತ್ಸವದ ಪ್ರಯುಕ್ತ ಕುಂದಾಪುರ ಮತ್ತು ಕೋಟ ಬ್ಲಾಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ 10 ಸಾವಿರ ಲಡ್ಡುಗಳ ವಿತರಣೆಯನ್ನು ಅಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗ ವಿತರಣೆ ಮಾಡಿತು. ಮಾಜಿ ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿಯವರು ತಮ್ಮ ನಿವಾಸದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇದಕ್ಕೆ ಸಹಕಾರ ನೀಡಿದ ಅಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದಲ್ಲಿ ರೊನಾಲ್ಡ್ ಮನೋಹರ್ ಕರ್ಕಡ, ಮಂಜೀತ್ ನಾಗರಾಜ್, ಮಹ್ಮಮದ್ ಶೀಸ್, ಕಿಶನ್ ಖಾರ್ವಿ, ಪವನ ಬಂಗೇರ. ಕುಂದಾಪುರ ಭಾಗದಲ್ಲಿ 5 ಸಾವಿರ ಲಡ್ಡುಗಳವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡ ಸಮಾಜ ಸೇವಕ ಬರ್ನಾಡ್ ಡಿಕೋಸ್ತಾ,ಅವರಿಗೆ ಸಹಕಾರ ನೀಡಿದವರು ಮಂಜೀತ್ ನಾಗರಾಜ್, ವಿನೋದ್ ಕ್ರಾಸ್ಟೊ,ಮತ್ತು ಆಶಾ ಕರ್ವಾಲ್ಲೊ.
ಅರ್.ಎನ್.ಶೆಟ್ಟಿ ಪ.ಪೂ.ಕಾಲೇಜ್ ಮತ್ತು ಪ್ರೌಢ ಶಾಲೆಗಳಿಗೆ ಸಿಹಿ ತಿಂಡಿ ಹಸ್ತಾಂತರದ ಕಾರ್ಯಕ್ರಮ. ಸಿಹಿ ತಿಂಡಿ ಸ್ವೀಕರಿಸಿದವರು ಕಾಲೇಜಿನ ಉಪ ಪ್ರಾಂಶುಪಾಲರು ಬಿ.ಕ್ರಷ್ಣಮೂರ್ತಿ, ಉಪನ್ಯಾಸಕಿ ಜಯಶೀಲ ಪೈ
ಸಂತ ಮೇರಿಸ್ ಹಿ.ಪ್ರಾ ಶಾಲೆಗೆ ಹಸ್ತಾಂತರದ ಕಾರ್ಯಕ್ರಮ, ಮುಖ್ಯೋಪಾಧ್ಯಾಯಿನಿ ಡೋರಾ ಡಿಸೋಜಾ,ಶಿಕ್ಷಕಿ ಶಾಂತಿ ರಾಣಿ ಬರೆಟ್ಟೊ ಮತ್ತು ಶಾಲಾ ನಾಯಕ
ಕುಂದಾಪುರ ಸರ್ಕಾರಿ ಪ.ಪೂ.ಕಾಲೇಜ್ ಮತ್ತು ಸರ್ಕಾರಿ ಬೋರ್ಡ್ ಪ್ರೌಢ ಶಾಲೆಗೆ ಹಸ್ತಾಂತರದ ಕಾರ್ಯಕ್ರಮ, ಸ್ವೀಕರಿಸಿದವರು ಪ.ಪೂ.ಕಾಲೇಜಿನ ಪ್ರಾಂಶುಪಾಲರು ರಾಮಕ್ರಷ್ಣ, ಪ್ರಕಾಶಚಂದ್ರ ಶೆಟ್ಟಿ ಉಪನ್ಯಾಸಕರು, ಕಿರಣ್ ಹೆಗ್ಡೆ ಸರ್ಕಾರಿ ಬೋರ್ಡ್ ಪ್ರೌಢ ಶಾಲೆಯ ಮುಖ್ಯೋಪಾಧ್ಯರು
ಸಂತ ಮೇರಿ ಪಿ.ಯು. ಕಾಲೇಜಿಗೆ ಹಸ್ತಾಂತರದ ಕಾರ್ಯಕ್ರಮ, ಸ್ವೀಕರಿಸಿದವರು ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಉಪ ಪ್ರಾಂಶುಪಾಲೆ ಮಂಜುಳಾ ನಾಯರ್,ಉಪನ್ಯಾಸಕರಾದ ನಾಗರಾಜ್ ಶೆಟ್ಟಿ, ವಸಂತ ಶೆಟ್ಟಿ ಮತ್ತು ಶಾಲಾ ನಾಯಕ ನಾಯಕಿಯರು
ಸಂತಮೇರಿಸ್ ಪ್ರೌಢ ಶಾಲೆಗೆ ಹಸ್ತಾಂತರದ ಕಾರ್ಯಕ್ರಮ. ಸ್ವೀಕರಿಸಿದವರು ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಮಚಾದೊ, ಶಿಕ್ಷಕ ಭಾಸ್ಕರ್ ಗಾಣಿಗ, ಮತ್ತು ಶಾಲಾ ನಾಯಕರು
ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಗೆ ಹಸ್ತಾಂತರದ ಕಾರ್ಯಕ್ರಮ. ಸ್ವೀಕರಿಸಿದವರು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಶಿಕ್ಷಕರಾದ ಸಿಸ್ಟರ್ ಸುನೀತಾ, ರತ್ನಾಕರ ಶೆಟ್ಟಿ,
ಸಂತ ಜೋಸೆಫ್ ಪ್ರೌಢ ಶಾಲೆಗೆ ಹಸ್ತಾಂತರದ ಕಾರ್ಯಕ್ರಮ. ಸ್ವೀಕರಿಸಿದವರು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ, ಶಿಕ್ಷರಾದ ಅಶೋಕ್ ದೇವಾಡಿಗ, ಶಿಕ್ಷಕಿಯರಾದ ಶ್ರೀಲತಾ ಮತ್ತು ಸ್ವಾತಿ
ಸಂತ ಜೋಸೆಫ್ ಹಿ. ಪ್ರಾ. ಶಾಲೆಗೆ ಹಸ್ತಾಂತರದ ಕಾರ್ಯಕ್ರಮ. ಸ್ವೀಕರಿಸಿದವರು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಂತಿಯಾ ಡಿಆಲ್ಮೇಡಾ ಶಿಕ್ಷಕ ಅನಿಲ್ ಪಾಯ್ಸ್, ಶಿಕ್ಷಕಿಯರಾದ, ಮರಿಯಾ ಮೆಂಡೊನ್ಸಾ, ವೈಲೆಟ್ ಡಿಸೋಜಾ, ವನೀತಾ ಬರೆಟ್ಟೊ
ಮೂಡು ಬೀಜಾಡಿ ಸರ್ಕಾರಿ ಶಾಲೆಗೆ ಹಸ್ತಾಂತರದ ಕಾರ್ಯಕ್ರಮ, ಶಾಲೆಯ ಪರವಾಗಿ ಶಿಕ್ಷಕ ಚಂದ್ರಶೇಖರ ಬೀಜಾಡಿ
ಸರಕಾರಿ ಕಿರಿಯ ಪ್ರಾಥಮಿಕ ಮದ್ದುಗುಡ್ಡೆ ಶಾಲೆಗೆ ದಾನ ಮಾಡಿದವರು ಆಶಾ ಕರ್ವಾಲ್ಲೊ, ಸ್ವೀಕರಿಸಿದವರು ಮುಖ್ಯೋಪಾಧ್ಯಾಯರಾದ ರಾಜೀವ್ ಶೆಟ್ಟಿ ಮತ್ತು ಅಧ್ಯಾಪಕ ವ್ರಂದ