ಮನೆ ಮಗನ ಶವ ಬಿಟ್ಟು ರೋಗಿಯ ಬದುಕಿಸಲು ಕರ್ತವ್ಯಕ್ಕೆ ಧಾವಿಸಿದ ಆಂಬುಲೆನ್ಸ್ ಚಾಲಕ – ಚಾಲಕನಿಗೆ ಜನರಿಂದ ಬಾರೀ ಪ್ರಶಂಸೆ

JANANUDI.COM NETWORK

(ಮನುಷತ್ವ ಎಂಬುದು ಕೆಲವರಿಗೆ ಜಾತಿ ಮತ ಕ್ಕೆ ಸೀಮಿತವಲ್ಲ, ಕಾಲ ಸಂದರ್ಭ ಅವರಿಗೆ ಸೀಮಿತವಲ್ಲ, ಅದೇ ಮಾನವತ್ವ, ಇಂತಹದೊಂದು ಘಟನೆ  ತನ್ನ ಮಗ ಮನೆಯಲ್ಲಿ ಸತ್ತು  ಬಿದ್ದಿದ್ದರು, ಬೇರೆಯವರ ಜೀವ ಉಳಿಸಲು ತನ್ನ ಕರ್ತವ್ಯಕ್ಕೆ ಧಾವಿಸಿದ ಚಾಲಕ, ಅತನ ಈ ಕರ್ತವ್ಯಕ್ಕೆ ಜನ ಮೆಚ್ಚಿ ಸಲಾಂ ಮಾಡಿದ್ದಾರೆ)   

ಮೈಸೂರು: ಮನೆಯಲ್ಲಿ ತನ್ನ  ಮಗ ಮೃತಪಟ್ಟಿದ್ದಾನೆ, ಆದರೆ ಅಂಬೆಲೆನ್ಸ್ ಚಾಲಕನಿಗೆ ಬೇರೊಬ್ಬ ರೋಗಿಗೆ ಆಸ್ಪತ್ರೆಗೆ ಕೊಂಡಯ್ಯಲು ತುರ್ತು  ಕರೆಯೊಂದು ಬರುತ್ತೆ, ಚಾಲಕ ಅದಕ್ಕೆ ಸ್ಪಂದಿಸಿ, ಮಗನ ಶವವನ್ನು ಮನೆಯಲ್ಲಿಯೇ ಬಿಟ್ಟು ಕರ್ತವ್ಯ ಕರೆಗೆ ಓಗೊಟ್ಟು ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಸಹಾಯವಾಣಿ ಕೇಂದ್ರದ ಆಯಂಬುಲೆನ್ಸ್‌ ಡ್ರೈವರ್‌ ಆಗಿರುವ ಮುಬಾರಕ್ ಅವರಿಗೆ ಎಲ್ಲೆಡೆಯಿಂದ ಜನರು ಕೊಂಡಾಡುತ್ತಿದ್ದಾರೆ. ಮೈಮೇಲೆ ಬಿಸಿನೀರು ಬಿದ್ದ ಕಾರಣ ಇವರ ಮಗುವು ಮೃತಪಟ್ಟ ದಾರುಣ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಮಗುವಿನ ಸಾವಿನಿಂದ ಪರಿತಪಿಸುತಿದ್ದ  ನಡುವೆಯೇ ಸಹಾಯವಾಣಿಯಿಂದ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವಂತೆ ಕರೆ ಬಂದಿದೆ.   

ಜಾತಿ ಧರ್ಮ ಎಂದು ಗುದ್ದಾಡುತ್ತಿರುವಾಗ ಒರ್ವ ಚಾಲಕ ತನ್ನ ಒಡಲ ಉರಿ ಲೆಕ್ಕಿಸದೆ, ಇತರ ಪ್ರಾಣ ಉಳಿಸಲು ಹೋರಾಡಿದ ಈ ಚಾಲಕನಿಂದ, ದೊಡ್ಡವರು, ಚಾಣಾಕ್ಷರು, ಪಾಂಡಿತ್ಯ ಉಳ್ಳವರು ಕಲಿಯುವುದು ಬಹಳಷ್ಟಿದೆ.