

ಶಿರೂರು; ಶಿರೂರು ಟೋಲ್ಗೇಟ್ ಎ1 ಲೈನ್ ಗೆ ಅಂಬುಲೈನ್ಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟೋಲ್ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಟೋಲ್ ಗೇಟ್ ಸಿಬ್ಬಂದಿ ಮಹಾರಾಷ್ಟ್ರ ಮೂಲದ ಸಂದೀಪ್ ಚಾಲಸೇ ಸೂರ್ಯವಂಶಿ (35) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಅತೀ ವೇಗದಿಂದ ಹೋಗುತಿದ್ದ ಅಂಬುಲೈನ್ಸ್ ಚಾಲಕನ ಅಜಾಗರೂಕತೆಯಿಂದ ಟೋಲ್ ಗೇಟನ ಎ1 ಲೈನ್ ಬದಿಯಲ್ಲಿ ನಿಂತಿದ್ದ ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸಂದೀಪ್ ಚಾಲಸೇ ಸೂರ್ಯವಂಶಿ ಗಂಭೀರವಾಗಿ ಗಾಯಗೊಂಡಿದ್ದ, ಕೂಡಲೇ ಆತನನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರರಕ್ತಸ್ರಾವ ಮತ್ತು ಗಂಭೀರ ಗಾಯಗೊಂಡಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ..
ಸಂದೀಪ್ 10 ದಿನಗಳ ರಜೆ ಪಡೆದು ರವಿವಾರ ಹುಟ್ಟೂರಿಗೆ ತೆರಳಲು ಸಿದ್ಧತೆ ನಡೆಸಿದ್ದರು.ಪತ್ನಿಯನ್ನು ಮೊದಲೇ ಊರಿಗೆ ಕಳಿಸಿದ್ದರು ಎಂದು ತಿಳಿದು ಬಂದಿದೆ.