ತೀರ್ಥಹಳ್ಳಿ – ಜೂನ್ 23. ಅಂಬೇಡ್ಕರ್ ಈ ದೇಶದ ಎಲ್ಲಾ ಮೂಲ ನಿವಾಸಿಗಳ ನಾಯಕರು, ಮಹಿಳೆಯರ ಮತ್ತು ಸಕಲ ಬಹುಜನರ ನಾಯಕರು. ಆದರೆ ಬಾಬಾ ಸಾಹೇಬರನ್ನ ಈ ಎಲ್ಲಾ ಸಮುದಾಯಗಳಿಂದ ದೂರ ಮಾಡಿ, ಅವರ ವಿಚಾರಗಳನ್ನು ಸಾಮಾನ್ಯರಿಗೆ ತಲುಪದಂತೆ ಈ ವ್ಯವಸ್ಥೆ ಷಡ್ಯಂತ್ರ ನಡೆಸಿತ್ತು ಅದು ಸಾಧ್ಯವಾಗದಿದ್ದಾಗ ವರನ್ನ ದಲಿತ ನಾಯಕ ಎಂದು ಬಿಂಬಿಸಲಾಯಿತು’ ಎಂದು ಚಿಂತಕ ಮತ್ತು ಹಿಂದುಳಿದ ವರ್ಗದ ಯುವ ಹೋರಾಟಗಾರ ಲೋಹಿತ್ ನಾಯ್ಕ ತೀರ್ಥಹಳ್ಳಿಯಲ್ಲಿ ನಡೆದ BAMCEF ನ south india half yearly national convention ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು “ಬಾಬಾ ಸಾಹೇಬರನ್ನು ಓಬಿಸಿ ಸಮುದಾಯ ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಬಾಬಾ ಸಾಹೇಬರು ನೆಹರು ಅವರ ಕ್ಯಾಬಿನೆಟ್ ಗೆ ರಾಜೀನಾಮೆ ಕೊಟ್ಟಿದ್ದು ಹಿಂದೂ ಕೋಡ್ ಬಿಲ್ ಒಂದು ಕಾರಣ ವಾದರೆ ಎರಡನೆಯ ಕಾರಣ OBC ಕಮಿಷನ್ ನ ಅನುಷ್ಠಾನ ಆಗದ ಕಾರಣಕ್ಕೆ. ಬಾಬಾ ಸಾಹೇಬರು ಆರ್ಟಿಕಲ್ 15 /4, 16/4 ಮತ್ತು 340 ನ್ನು ಸಂವಿಧಾನದಲ್ಲಿ ಕಾರಣಕ್ಕೆ ಮತ್ತು ಬಾಬಾ ಸಾಹೇಬರು ಕಟ್ಟಿದ ಚಳುವಳಿಯನ್ನು ಮುನ್ನಡೆಸಿದ ಮಾನ್ಯವರ್ ಕಾಂಶಿರಾಂ ಅವರ ಕಾರಣಕ್ಕೆ ಇಂದು ಓಬಿಸಿ ಸಮಾಜ 27% ಮೀಸಲಾತಿಯನ್ನು ಅನುಭವಿಸುತ್ತಿದೆ. ಆದರೆ ಓಬಿಸಿ ಸಮಾಜ ಸಂವಿಧಾನ ಉಳಿಸುವ ಅಥವಾ ಮೀಸಲಾತಿ ಉಳಿಸುವ ಹೋರಾಟಕ್ಕೆ ಕೈ ಜೋಡಿಸುವುದು ವಿರಳ. ಇದು ನಮ್ಮ ಸಮಾಜದ ವಿಪರ್ಯಾಸ ತಿಳಿಸಿ Bamcef ನಂತಹ ಚಳುವಳಿ ಬಾಬಾ ಸಾಹೆಬರ ವಿಚಾರ ಮತ್ತು ಹೋರಾಟವನ್ನ ಸರ್ವರಿಗೂ ತಲುಪಿಸುವ ಕೆಲಸ ಮಾಡುವ ಜೊತೆಗೆ ಈ ನೆಲದ ಮೂಲ ನಿವಾಸಿಗಳ ಹಕ್ಕಿನ ಹೋರಾಟ ಕಟ್ಟುತ್ತಿದೆ. ಬಹುಜನರ ಹಕ್ಕುಗಳ ಬಗ್ಗೆ ಮತ್ತು ಸಮಗ್ರ ಅಭಿವೃದ್ಧಿಯ ಬಗ್ಗೆ ದ್ವನಿ ಎತ್ತುವ ಇಂಥಹ ಸಂಘಟನೆಗಳಿಗೆ ಶಕ್ತಿ ತುಂಬುವ ಅಗತ್ಯವಿದೆ. ಎಂದು ಹೇಳಿದ ಅವರು ಬಹುಜನ ಚಳುವಳಿ ನಾರಾಯಣ ಗುರುಗಳ ಸಂದೇಶವನ್ನು ಅಳವಡಿಸಿಕೊಂಡು ಮುನ್ನೆಡೆದರೆ ಯಶಸ್ಸು ಸಾಧ್ಯ ಹುಚ್ಚಾಸ್ಪತ್ರೆಗೆ ಯಂತಿದ್ದ ಕೆರಳವನ್ನು ಸರಿದಾರಿಗೆ ತಂದ ಸಂತನ ಸಂದೇಶ ನಮಗೆ ಮಾರ್ಗದರ್ಶವಾಗಲಿ ಎಂದರು.
IMPA ಮುಖ್ಯಸ್ಥರಾದ ಡಾ. ಭಾನುಪ್ರಕಾಶ್ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ BAMCEF ನ ಮುಖ್ಯಸ್ಥ ವಿಲಾಸ್ ಕಾರತ್, ಕೇರಳದ ವಸ್ತುವಾರಿ ತೆಲಂಗಾಣದ ವಸ್ತುವಾರಿ,ಶಿವಮೊಗ್ಗ ವಕೀಲ ಸಂಘದ ಅಧ್ಯಕ್ಷರಾದ
ಬಿ ಗಿ ಶಿವಮೂರ್ತಿ, ಸುಧೀರ್ ನಾಗ್, ಅಬ್ದುಲ್ ಅಜೀಜ್ ಮುಂತಾದ ಸಂಘಟನೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.