

ಕೋಟೇಶ್ವರದ ಸಂತ ಅಂತೋನಿಯವರ ದೇವಾಲಯದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆಯ ಭಾಗವಾಗಿ 06 ಬುಧವಾರ, 2024 ರಂದು ಸಂಜೆ 6.30ಗೆ ಕಟ್ಕೆರೆಯ ಕಾರ್ಮೆಲ್ ಆಶ್ರಮದಲ್ಲಿ ’ಅಮರ್ ಅಂತೋಣಿ’ ಎಂಬ ನೂತನ ಕೊಂಕಣಿ ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಜೊ.ಸಿ.ಸಿದ್ದಕಟ್ಟೆ ವಿರಚಿತ ಹಾಗೂ ನಿರ್ದೇಶನದ ಈ ನಾಟಕ ಸಂತ ಅಂತೋಣಿ ದೇವಾಲಯದ ಕಲಾವಿದರಿಂದ ಪ್ರಸ್ತುತಗೊಳಿಸಲಾಯಿತು. ಸಂತೋಷ್ ಮಾರ್ಟಿಸ್, ಕೋಟೇಶ್ವರ ಸಹನಿರ್ದೇಶನ ಮಾಡಿದ್ದು ಪಾತ್ರಧಾರಿಯೂ ಆಗಿದ್ದರು. ಅವರೊಂದಿಗೆ ಸಹಕಲಾವಿದರಾದ ವಂ. ಪ್ರವೀಣ್ ಪಿಂಟೊ, ಉಲ್ಲಾಸ್ ಫೆರ್ನಾಂಡಿಸ್, ವಿಜಯ್ ಬಾರೆಟ್ಟೊ, ಲೀನಾ ಡಿ ಮೆಲ್ಲೊ, ಫ್ರೆಡ್ಡಿ ಕ್ರಾಸ್ತಾ, ಎಡ್ವರ್ಡ್ ಕ್ಯಾಸ್ತೆಲಿನೊ, ಮನಿಶಾ ಡಿ ಮೆಲ್ಲೊ, ನ್ಯೂಟನ್ ಕ್ರಾಸ್ತಾ, ಜಿ.ಎಮ್ ಕ್ರಾಸ್ತಾ, ಎವಿಟಾ ಗೊನ್ಸಾಲ್ವಿಸ್ ಪಾತ್ರವಹಿಸಿದ್ದರು. ವಂ. ಪ್ರೀತೇಶ್ ಕ್ರಾಸ್ತ ಹಾಗೂ ಆಲ್ವಿನ್ ಬಾರೆಟ್ಟೊ ಸಂಗೀತ ನೀಡಿದರು.




