

ಬೈಂದೂರು, 7; ಬೈಂದೂರಿನ ರೈನ್ ಬೋ ಬುಡಾಕೊನ್ ಕರಾಟೆ ಅಕಾಡೆಮಿ, ಕರ್ನಾಟಕ, ಇಂಡಿಯಾ ಬೈಂದೂರಿನಲ್ಲಿ ಜನವರಿ 4 ಮತ್ತು 5 ರಂದು ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ -2025 ಇದರಲ್ಲಿ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾಳೆ. ಈಕೆ ಓಕ್ ವುಡ್ ಇಂಡಿಯನ್ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಇವಳು ಹೆಮ್ಮಾಡಿಯ ಯಾಸೀನ್ ಸೋಲಾಪುರ ಮತ್ತು ರಝಿಯಾ ಸುಲ್ತಾನ ದಂಪತಿಯ ಪುತ್ರಿಯಗಿರುತ್ತಾಳೆ
ಈಕೆಗೆ ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿ.ಕೆ. ಶಿಹಾನ್ ಕೀರ್ತಿ ಜಿ.ಕೆ., ಸೇನ್ ಸಾಯಿ ಶಿಹಾನ್ ಶೇಖ್, ಬಸ್ರೂರು, ಇವರು ತರಬೇತಿ ನೀಡಿದ್ದರು.

