

ಮಂಗಳೂರು: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷರಾದ ಆಲ್ವಿನ್ ಡಿಸೋಜ ರವರು ಅಖಿಲ ಭಾರತ ಕ್ರಿಶ್ಚಿಯನ್ ಯುನಿಯನ್ ಇದರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದಿನಾಂಕ 25-08-2024 ಊಟಿಯಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಚುನಾವಣೆಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷರಾದ ಆಲ್ವಿನ್ ಡಿಸೋಜ ರವರು ಬಹುಮತದಿಂದ ರಾಜ್ಯಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಅವರ್ ಲೇಡಿ ಆಫ್ ಚರ್ಚಿನ ಅಡಳಿತ ಮಂಡಳಿಯ ಉಪಾಧ್ಯಕ್ಷರಾಗಿ,ಕೋಳಿ ಸಾಕಣಿಕೆ ಸಂಘದ ನಿರ್ದೇಶಕರಾಗಿ, ಕೋಟೆಕಾರ್ ಪಂಚಾಯತ್ ನ ಸದಸ್ಯರಾಗಿ, ಕೋಟೆಕಾರ್ ಗ್ರಾಮದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಕೆಡಿಪಿ ಸದಸ್ಯರಾಗಿ ಹಾಗೂ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮೈನೋರಿಟಿ ಘಟಕದ ಅಧ್ಯಕ್ಷರಾಗಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಘಟಕ, ವಲಯ ಮತ್ತು ಕೇಂದ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸದ, ಇವರ ಮುಕುಟಕ್ಕೆ ಮತ್ತೊಂದು ಗರಿಯಂತೆ ರಾಜ್ಯಮಟ್ಟದ ಅಧ್ಯಕ್ಷಾಗಿ ಆಯ್ಕೆಯಾದ ಅವರಿಗೆ ನಿಮ್ಮಿಂದ ಸಮಾಜದ ಅಭಿವೃದ್ಧಿ ಆಗಲಿ ಎಂದು ಹಾರೈಸಿ ಅವರ ಸ್ನೇಹಿತರು, ಅಭಿಮಾನಿಗಳು ಶುಭ ಕೋರಿದ್ದಾರೆ.