ಸಮಾನತೆ ಕಾಣಬೇಕಾದರೆ ಸರ್ಕಾರದ ಎಲ್ಲಾ ಕಚೇರಿಗಳಲ್ಲಿರುವ ದೇವರ ಫೋಟೋಗಳನ್ನು ಕೂಡ ತೆಗೆಯಿರಿ: ನಟ ಚೇತನ್

JANANUDI.COM NETWORK

ಬೆಂಗಳೂರು: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ನಾವು ಎಣಿಸಿಕೊಂಡಂತ್ತೆ ಸಾಮಾನ್ಯ ಸಮಸ್ಯೆಗೆ ತಿರುಗದೆ, ಗಂಭೀರ ಸಮಸ್ಯೆಗೆ ದಾರಿಯಾದಂತ್ತೆ ಕಾಣುತ್ತದೆ. ಇದೀಗ ಈ ಸಮಸ್ಯೆ ಹಲವು ಸ್ತರಗಳನ್ನು ಮುಟ್ಟಿದೆ. ಶಾಲೆಗಳಲ್ಲಿ ಧಾರ್ಮಿಕ ವಿಚಾರ ಯಾಕೆ ಎಂದು ಪ್ರಶ್ನೆ ಬಂದಿದ್ದು, ಸಮವಸ್ತ್ರದಲ್ಲಿ ಸಮವಸ್ತ್ರದಲ್ಲಿ ಸಮಾನತೆ ಕಾಣಬೇಕು ಎಂಬ ಒತ್ತಾಯ ಕಂಡು ಬಂದಿರುವ ಹಿನ್ನೆಲೆಯಲ್ಲಿ, ಕನ್ನಡದ ನಟ ಚೇತನ್ ಜಾತ್ಯತೀತ ಪ್ರಶ್ನೆ ಎತ್ತಿ, ಗಂಭೀರವಾದ ಸಂದೇಶ ನೀಡಿದ್ದಾರೆ.
“ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಿಂದ ದೇವರ ಚಿತ್ರಗಳನ್ನು ತೆಗೆದು ತಮ್ಮ ತಮ್ಮ ಮನೆಗೆ ವರ್ಗಾಯಿಸಿಕೊಳ್ಳಿ ಎಂದು” ಹೇಳುತ್ತಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸರ್ಕಾರಿ ಶಾಲಾ ಸಮವಸ್ತ್ರದಲ್ಲಿ ಹಿಜಾಬ್ , ಟರ್ಬನ್ ಅಥವಾ ಯಾವುದೇ ಧಾರ್ಮಿಕ ಗುರುತುಗಳನ್ನು ತೆಗೆದುಹಾಕುವುದರ ಜೊತೆಗೆ, ಕನ್ನಡಿಗರಾದ ಜಾತ್ಯಾತಿತರಾಗಿ ಸರ್ಕಾರಿ ಶಾಲೆಗಳಲ್ಲಿ , ಕಚೇರಿಗಳಲ್ಲಿ , ಬ್ಯಾಂಕುಗಳಲ್ಲಿ , ಪೊಲೀಸ್ ಠಾಣೆಗಳಲ್ಲಿ , ಆಸ್ಪತ್ರೆಗಳಲ್ಲಿ , ಇತ್ಯಾದಿಗಳಿಂದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ , ಧಾರ್ಮಿಕ ಭಾವಚಿತ್ರಗಳನ್ನು, ದೇವರ ಫೋಟೋಗಳನ್ನು ತೆಗೆಯಬೇಕೆಂದು ಹೇಳ ಬಯಸುತ್ತೇವೆ’ ಎಂದಿದ್ದಾರೆ.