ಓದಿನ ಜತೆ ವಿದ್ಯಾರ್ಥಿ ಜೀವನದಿಂದ ಮೌಲ್ಯಯುತ ಗುಣಗಳೊಂದಿಗೆ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು:ಪ್ರಾಂಶುಪಾಲ ಪ್ರಾಣೇಶ್

ಶ್ರೀನಿವಾಸಪುರ: ಓದಿನ ಜತೆ ವಿದ್ಯಾರ್ಥಿ ಜೀವನದಿಂದ ಮೌಲ್ಯಯುತ ಗುಣಗಳೊಂದಿಗೆ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಶ್ರೀನಿವಾಸಪುರ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್ ಹೇಳಿದರು.
ಗೊರವಿಮಾಕಲಪಲ್ಲಿ ಸಫಲಮ್ಮ ಸಮುದಾಯ ಭವನದಲ್ಲಿ ಬೆಂಗಳೂರಿನ ಋಷಿ ಪ್ರಭಾಕರ್ ವಿದ್ಯಾಕೇಂದ್ರದ ಸಹಯೋಗದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ದಿನದ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಬೆಳವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳಿಗೆ ವಿದ್ಯಾರ್ಥಿಗಳ ಸೃಜನಶೀಲ ಅಭಿವೃದ್ಧಿ ಆಧುನಿಕ ಶಿಕ್ಷಣದ ಅತ್ಯಂತ ತುರ್ತು ಕಾರ್ಯಾಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾದ ಪ್ರಸ್ತುತ ದಿನಗಳನ್ನು ಅರ್ಥೈಸಿಕೊಂಡು ಶಿಕ್ಷಣವನ್ನು ಪಡೆಯಬೇಕು ಸಲಹೆ ನೀಡಿದರು .
ಸಿದ್ಧಿಸಮಾಜ ಯೋಗದ ಗುರುಗಳಾದ ಗೋಪಾಲ ಗುರೂಜಿ ಮಾತನಾಡಿ ವಿದ್ಯೆ ಎಂದರೆ ಕೇವಲ ಪದವಿ ಸಂಪಾದನೆ ಮಾತ್ರವಲ್ಲ. ವಿದ್ಯೆಗೆ ವಿನಯವೇ ಭೂಷಣವಾಗಿದ್ದು ತಾನು ಮಾತ್ರವೇ ಬದುಕಬೇಕೆಂಬ ಸ್ವಾರ್ಥ ಬಿಟ್ಟು ಎಲ್ಲರೂ ಬದುಕಬೇಕೆಂಬುದನ್ನು ಅಳವಡಿಸಿಕೊಂಡಾಗ ಮಾತ್ರ ಅದು ವಿದ್ಯೆಯಾಗುತ್ತದೆ. ವಿದ್ಯಾರ್ಥಿಗಳು ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಕನಸುಗಳನ್ನು ಕಟ್ಟಿಕೊಂಡು ಶಿಕ್ಷಣ ಕೊಡಿಸುವ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು . ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಚುಟುಕ ಸಾಹಿತ್ಯ ತಾಲೂಕು ಅಧ್ಯಕ್ಷ ವೆಂಕಟಾಚಲಪತಿಗೌಡ ಮಾತನಾಡಿ ಒಬ್ಬ ಮನಷ್ಯನಿಗೆ ಕೇವಲ ವಿದ್ಯೆ ನೀಡಿದರಷ್ಟೇ ಸಾಲದು .ಅದಕ್ಕೆ ಪೂರಕವಾಗಿ ತೀರಾ ಅಗತ್ಯವಿರುವ ಜೀವನಧರ್ಮವನ್ನು ಕಲಿಸುವುದು ಹಾಗೂ ತಲಾತಲಾಂತರದಿಂದ ಉಳಿಸಿಕೊಂಡು ಬೆಳಸಿಕೊಂಡು ಬಂದಿರುವ ನಮ್ಮ ಸನಾತನ ಸಂಸ್ಕøತಿ-ಪರಂಪರೆಯ ಅರಿವು ಮೂಡಿಸುವುದು ಅತ್ಯವಶ್ಯಕ. ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತನ್ನು ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯಿರಬೇಕು .
ಈ ಕಾರ್ಯಕ್ರಮದಲ್ಲಿ ಲಕ್ಷ್ಮೀಪುರ, ರಾಯಲ್ಪಾಡು, ಶ್ರೀನಿವಾಸಪುರ ಸರ್ಕಾರಿ ಬಾಲಕೀಯರ ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಪತಾಂಜಲಿ ಯೋಗ ಗುರು ಸುದರ್ಶನ್‍ರವರಿಂದ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನವನ್ನ ಮಾಡಿಸಲಾಯಿತು. ಚಿಂತನಕಾರಕರಾದ ಜಗದೀಶ್, ಶ್ರೀನಿವಾಸ್, ಸಿ.ಆರ್.ರಾಜಗೋಪಾಲ್ ಮಾತನಾಡಿದರು. ಮುಖ್ಯ ಶಿಕ್ಷಕರಾದ ಪಿ.ಮಾರಣ್ಣ, ಶ್ರೀನಿವಾಸಗುಪ್ತ, ಉಪನ್ಯಾಸಕ ಎಂ.ಜಿ.ಗಿರೀಶ್, ಎಸ್‍ಡಿಎಂಸಿ ಅಧ್ಯಕ್ಷರಾದ ರೆಡ್ಡಿಶ್ರೀನಿವಾಸ್, ಚಂದ್ರಶೇಖರ್, ಗೊರವಿಮಾಕಲಪಲ್ಲಿ ಸಫಲಮ್ಮ ದೇವಾಲಯದ ಆಡಳಿತ ಮಂಡಲಿ ಸದಸ್ಯರಾದ ಕಾಳಾಚಾರಿ, ಮಂಜುನಾಥರೆಡ್ಡಿ, ನಾಗೇಂದ್ರ, ರಾಜ, ಎಸ್‍ಎಸ್‍ವೈ ಯೋಗ ಸಮಿತಿಯ ಸದಸ್ಯರಾದ ಸತ್ಯೇಂದ್ರಬಾಬು, ವೆಂಕಟರಮಣಪ್ಪ, ಜಿ.ಎಸ್.ನಾರಾಯಣಸ್ವಾಮಿ, ಆಂಜನಪ್ಪ , ವಿರೇಶ್‍ಕೊಮ್ಮನೂರು ಇದ್ದರು.