

ಶ್ರೀನಿವಾಸಪುರ : ಸರ್ಕಾರಿ ಸೌಲಭ್ಯಗಳ ಜೊತೆಗೆ ದಾನಿಗಳು ನೀಡುವ ಶೈಕ್ಷಣಿಕ ಸಾಮಾಗ್ರಿಗಳನ್ನು ಬಳಿಸಿಕೊಂಡು ಶೈಕ್ಷಣಿಕ ಪ್ರಗತಿ ಕಾಣುವಂತೆ ವಿದ್ಯಾರ್ಥಿಗಳಿಗೆ ಬಿಇಒ ವಿ.ಉಮಾದೇವಿ ಕರೆ ನೀಡಿದರು.
ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸಮೀಪ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶನಿವಾರ ಮಣಿಪುರಂ ರಿತಿ ಜ್ಯೂಲರೀಸ್ ವತಿಯಿಂದ ೨೫೦ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾದ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರವು ಪ್ರತಿಯೊಬ್ಬ ಮಗುವು ಶಿಕ್ಷಣವನ್ನು ಪಡೆಯಲೇ ಬೇಕೆಂಬ ನಿಟ್ಟಿನಲ್ಲಿ ಅನೇಕ ಯೋಜನೆಗಳ ಮುಖಾಂತರ ಶಿಕ್ಷಣ ಪಡೆಯಲು ಪ್ರೋತ್ಸಾಹ ಮಾಡುತ್ತಿದೆ. ವಸತಿ ಶಾಲೆಯಲ್ಲಿ ಅನೇಕ ಮೂಲಭೂತ ಸೌಲಭ್ಯಗಳನ್ನು ಒದಿಗಿಸಿದೆ. ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು. ಶಿಸ್ತು, ಗುರಿಯೊಂದಿಗೆ ತಮ್ಮ ಜೀವನದ ಗುರಿಯನ್ನು ಮುಟ್ಟುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳಲ್ಲಿ ಕಲಿಕೆ ನಿರಂತರವಾಗಿ ಇರಬೇಕು ಇದರೊಂದಿಗೆ ಉತ್ತಮ ಪರಿಶ್ರಮದೊಂದಿಗೆ ತಮ್ಮ ಗುರಿಯನ್ನು ಸಾಧಿಸುವಂತೆ ತಿಳಿಸಿದರು.
ಹೆಣ್ಣು ಮಗುವೊಂದು ಕಲಿತರೆ ಶಾಲೆಯೊಂದು ತೆರದಂತೆ ಅದರಂತೆ ಹೆಣ್ಣುಮಕ್ಕಳು ಉತ್ತಮ ರೀತಿಯಲ್ಲಿ ಓದಿ ಉನ್ನತ ಮಟ್ಟವನ್ನೇರಬೇಕು ಎಂದರು. ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತವಾಗಿ ೪ ವರ್ಷಗಳಿಂದ ಪ್ರಥಮ ಸ್ಥಾನವನ್ನು ಪಡೆಯುತ್ತಾ ಬಂದಿದೆ. ಆ ನಿಟ್ಟಿನಲ್ಲಿ ೬೮ ಪ್ರೌಡಶಾಲೆಗಳು ಇದ್ದು, ದಾನಿಗಳು ಮೂಲಭೂತ ಸೌಲಭ್ಯಗಳ ಕೊರತೆ ಇರುವ ಶಾಲೆಗಳಿಗೆ ತಮ್ಮಿಂದಾಗುವ ಸಹಕಾರ ನೀಡಬೇಕು ಎಂದು ದಾನಿಗಳ ಬಳಿ ಮನವಿ ಮಾಡಿದರು.
ಮಣಿಪುರಂ ರೀತಿ ಜ್ಯೂಲರೀಸ್ ಸೌತ್ ಇಂಡಿಯಾ ಮಾರಕಟ್ಟೆ ಮುಖ್ಯಸ್ಥ ಪೆರುಮಾಳ್ ಮಾತನಾಡಿ ನಮ್ಮ ಕಂಪನಿಯು ೧೯೪೯ರಲ್ಲಿ ಚಿಕ್ಕ ಸಂಸ್ಥೆಯಾಗಿ ಪ್ರಾರಂಭವಾಗಿ ಇಂದು ಐದು ಸಾವಿರ ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಂತೆ ವಿದ್ಯಾರ್ಥಿಗಳು ಸಹ ತಮ್ಮ ಗುರಿಯನ್ನು ಸಾಧಿಸಿಸಲು ಹಂತ ಹಂತವಾಗಿ ಗುರಿಯನ್ನು ಮುಟ್ಟುವಂತೆ ಸಲಹೆ ನೀಡಿದರು.
ಪ್ರಾಂಶುಪಾಲ ವೆಂಕಟೇಶಪ್ಪ ಮಾತನಾಡಿ ಇಂದಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರಿ ಕರಣವಾಗಿದೆ. ಖಾಸಗಿ ಶಾಲೆಗಳು ನೀಡುವ ಆಸೆ, ಆಮೀಷಗಳಿಗೆ ಒಳಪಟ್ಟು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ ಆದರೆ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ಮೌಲ್ಯಯುತ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾರೆ ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿ ಸರ್ಕಾರ ನೀಡುವ ಉಚಿತ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾವಂತರಾಗುವAತೆ ತಿಳಿಸಿದರು.
ಮಣಿಪುಂ ರಿತಿ ಜ್ಯೂಲರೀಸ್ ಜಿಲ್ಲಾ ಶಾಖೆ ವ್ಯವಸ್ಥಾಪಕ ಫವಾಸ್, ಫೈನಾನ್ಸ್ ಏರಿಯಾ ಮುಖ್ಯಸ್ಥ ಸುರೇಶ್, ಮಣಿಪುರಂ ಬಾರಿಕೋಟ್ ವ್ಯವಸ್ಥಾಪಕ ಪಾಳ್ಯ ಆನಂದ್‌ನಾಯಕ್, ಸಿಬ್ಬಂದಿಗಳಾದ ನಾರಾಯಣಸ್ವಾಮಿ, ಎಂ.ಎನ್. ಆನಂದ್, ಇಸಿಒ ಕೋದಂಡಪ್ಪ, ಶಿಕ್ಷಕರಾದ ರೆಡ್ಡಪ್ಪ, ಪ್ರತಿಮಾ, ಟಿ.ವಿ.ಮುನಿರಾಜು ಇದ್ದರು.