ರವಿ ಡಿ ಚೆನ್ನಣ್ಣನವರ್ ವಿರುದ್ಧ ಆರೋಪ ಸುಳ್ಳು:ಶ್ರೀ ಬ್ರಹ್ಮಾನಂದ ಸ್ವಾಮೀಜಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ರವಿ  ಡಿ ಚೆನ್ನಣ್ಣನವರ್ ವಿರುದ್ಧ ಆರೋಪ ಸುಳ್ಳು ವಾಲ್ಮೀಕಿ ಸಮುದಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿಯೂ ಸಹ ಹೆಚ್ಚು ವಾಲ್ಮೀಕಿ ಸಮುದಾಯದ ಜನರಿದ್ದು ಸರ್ಕಾರದಿಂದ ವಾಲ್ಮೀಕಿ ಸಮುದಾಯಕ್ಕೆ ಸಿಗುವಂತಹ ಸೌಲಭ್ಯಗಳು ಸರಿಯಾಗಿ ಬಳಕೆಯಾಗುತ್ತಿಲ್ಲ ಹಾಗೂ ವಾಲ್ಮೀಕಿ ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ತಾಲೂಕಿಗೆ ಆಗಮಿಸಿದಂತಹ ಚಿಕ್ಕಬಳ್ಳಾಪುರ ಜಿಲ್ಲೆಯ ವಾಲ್ಮೀಕಿ ಸಮುದಾಯದ  ಗುರುಪೀಠ ಶಾಖಾಮಠದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಿಷ್ಠಾವಂತ ಪ್ರಾಮಾಣಿಕ ದಕ್ಷ ಅಧಿಕಾರಿಯೆಂದು ಹೆಸರುವಾಸಿಯಾಗಿರುವ ರವಿ ಡಿ ಚೆನ್ನಣ್ಣನವರ್ ಸಣ್ಣ ಪುಟ್ಟ ವಿಚಾರಗಳಿಗೆ ಪೊಲೀಸ್ ಠಾಣೆಗಳಿಗೆ ದೂರು ತಂದವರಿಗೆ ಬುದ್ಧಿವಾದ ಹೇಳಿ ಕಳಿಸಿಕೊಡುತ್ತಾರೆ ಬಡಭಗ್ನರಿಗೆ ಕೈಲಾದ ಸಹಾಯವನ್ನು  ಮಾಡಿ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅವರ ಹೆಸರನ್ನು ಹಾಳು ಮಾಡುವ ನಿಟ್ಟಿನಲ್ಲಿ ಕೆಳ ಕಾಣದ ಕೈಗಳು ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಮಾಡುತ್ತಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು  ಎಚ್ ಡಿ ಕೋಟೆಯಲ್ಲಿ  ಅಕ್ರಮವಾಗಿ ಆಸ್ತಿ ಖರೀದಿ ಹಾಗೂ ಲಂಚ ಪಡೆದಿದ್ದಾರೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿದ್ದು ರವಿ ಡಿ ಚೆನ್ನಣ್ಣನವರ್ ಪರವಾಗಿ ನಾವಿದ್ದೇವೆ ನಮ್ಮ ಸಮುದಾಯವಿದೆಯೆಂದು ಶ್ರೀಶ್ರೀಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ. ಜಿಲ್ಲಾ ಅಧ್ಯಕ್ಷ ಹರೀಶ್ ನಾಯಕ್, ತಾಲೂಕು ಅಧ್ಯಕ್ಷ ನಾಗರಾಜ್,ಮುಖಂಡಕೃಷ್ಣಪ್ಪ,ಜಿ .ಎನ್.ವೆಂಕಟರವಣ,ಪ್ರದೀಪ್,ಎಂ.ಅಂಜಪ್ಪ,ಬಾಬು, ಶ್ರೀರಾಮ ನಾಯಕ್, ರಾಜಖೇಖರ್,ಅನಂದ್,ವೆಂಕಟೇಶ್ ನಾಯಕ್,ಇದ್ರರು.