ಶ್ರೀನಿವಾಸಪುರ : ಎಲ್ಲಾ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಬೇಕು. ರಾಸು ವಿಮಾ ಪರಿಹಾರ ಚೆಕ್ ಪಡೆದಿರುವ ಫಲಾನುಭವಿಗಳು ಕಡ್ಡಯಾವಾಗಿ ರಾಸುಗಳನ್ನು ಖರೀದಿಸಿ , ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಬೇಕೆಂದು ಮತ್ತು ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಲು ಕೋಮುಲ್ ಒಕ್ಕೂಟದ ನಿರ್ದೇಶಕ ಎನ್.ಹನುಮೇಶ್ ತಿಳಿಸಿದರು.
ಪಟ್ಟಣದ ಕೋಮುಲ್ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ರಾಸುಗಳ ವಿಮಾ ಪರಿಹಾರ 9 ಚೆಕ್‍ಗಳು ಮೊತ್ತ 4.60, 000 ರೂಗಳ ಚೆಕ್‍ಗಳನ್ನು ವಿತರಿಸಿ ಮಾತನಾಡಿದರು.
ಪ್ರಬಾರೆ ಉಪ ವ್ಯವಸ್ಥಾಪಕರಾದ ಕೆ.ಎಂ.ಮುನಿರಾಜು ಮಾತನಾಡಿ ಹಾಲಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಹಸಿರು ಮತ್ತು ಒಣ ಮೇವಿನ ಜೊತೆಗೆ ಪಶು ಆಹಾರ, ಖನಿಜ, ಮಿಶ್ರಣ, ಗೋಧಾರ ಶಕ್ತಿ ಪುಡಿಗಳನ್ನು ಬಳಸುವ ವಿಧಾನ ಮತ್ತು ಅಗೋಚರ ಕೆಚ್ಚಲು ಬಾವು ನಿಯಂತ್ರಣ ಕಾರ್ಯಕ್ರಮ ಹಾಗೂ ಸಾಫ್ ಕಿಟ್ ಬಳಕೆ ಮತ್ತು ಕಾಲುಬಾಯಿ ಜ್ವರ ಹರಡದಂತೆ ನಿಯಂತ್ರಣ ಮಾಡುವ ಬಗ್ಗೆ ತಿಳಿಸಿದರು.
ಉಪ ಕಚೇರಿಯ ವಿಸ್ತರಣಾಧಿಕಾರಿಗಳಾದ ಎಂ.ಜಿ. ಶ್ರೀನಿವಾಸ್, ಎನ್.ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ ಜಿ.ಎನ್.ಗೋಪಾಲಕೃಷ್ಣ , ಸಿಬ್ಬಂದಿಗಳು, ಮುಖ್ಯ ಕಾರ್ಯನಿರ್ವಾಹಕರು, ಫಲಾನುಭವಿಗಳು ಇದ್ದರು.