ಎಲ್ಲಾ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಬೇಕು : ಜಿಲ್ಲಾಅಧ್ಯಕ್ಷಎನ್.ಬಿ. ವೇಣುಗೋಪಾಲ್‍ಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಎಲ್ಲಾಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಶಾಲೆಗಳ ನಡೆಗೆಕೊರೆದೊಯ್ದುಜಿಲ್ಲೆಯಎಲ್ಲಾ ತಾಲ್ಲೂಕುಗಳಲ್ಲಿ ಜಿಲ್ಲಾ ಸಮ್ಮೇಳನವನ್ನು ನಡೆಸುವ ವಿನೂತನ ಹೆಜ್ಜೆಯನ್ನುಎಲ್ಲರೂಒಗ್ಗಟ್ಟಾಗಿಕಾರ್ಯನಿರ್ವಹಿಸೋಣಎಂದು ಕ.ಸಾ.ಪ. ಜಿಲ್ಲಾಅಧ್ಯಕ್ಷಎನ್.ಬಿ. ವೇಣುಗೋಪಾಲ್‍ಗೌಡ ತಿಳಿಸಿದರು.
ಪಟ್ಟಣದಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯರಂಗಮಂದಿರದಲ್ಲಿಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿದಜಿಲ್ಲಾಧ್ಯಕ್ಷ, ಜಿಲ್ಲೆಯಕನ್ನಡ ಅಭಿಮಾನಿಗಳು ನನ್ನ ಮೇಲೆ ಭರವಸೆಇಟ್ಟುಹಾರೈಸಿದ್ದು, ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತಿನ ನುಡಿತೇರನ್ನು ಮುಂದೆ ಎಳೆಯಲು ಎಲ್ಲರ ಸಹಕಾರದಿಂದಒಂದು ಹೆಜ್ಜೆ ಮುಂದೆ ಹಾಕುತ್ತಾ ವಿಶೇಷವಾಗಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಉಳಿವಿಗಾಗಿ ಗ್ರಾಮೀಣ ಭಾಗದ ಶಾಲೆಗಳಿಗೆ ಸಾಹಿತ್ಯ ಪರಿಷತ್ತಿನ ಹಿರಿಮೆ ಮಹತ್ವವನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಪುಸ್ತಕಗಳನ್ನು ಓದುವಅವ್ಯಾಸಮಾಡಿಸಿ ಅವರಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ಕೆಲಸಕ್ಕೆ ಚಾಲನೆ ನೀಡೋಣಎಂದರು.
ಸಾಹಿತ್ಯ ಪರಿಷÀತ್ತಿನ ಸದಸ್ಯತ್ವ 500 ರೂಗಳಿಂದ 250 ರೂಗಳಿಗೆ ಕಡಿಮೆ ಗೊಳಿಸಿ ಸಾಮಾನ್ಯಜನರಿಗೆದುಪ್ಪಟವಾಗದಂತೆ ಈಗಾಗಲೆ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿಚರ್ಚಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಚಾಲ್ತಿಗೆ ಬರುವ ಅವಕಾಶಗಳು ಹೆಚ್ಚಾಗಿವೆ. ಈ 5 ವರ್ಷಗಳ ಕಾಲಾವಧಿಯಲ್ಲಿಜಿಲ್ಲಾ ಸಮ್ಮೇಳನಗಳನ್ನು ವರ್ಷಕ್ಕೆಒಂದುತಾಲ್ಲೂಕಿನಲ್ಲಿ ಸಮ್ಮೇಳನಗಳನ್ನು ಆಯೋಜಿಸುವಚಿಂತನೆ ಮಾಡಲಾಗಿದ್ದು, ಇದರಜೊತೆಗೆ ಅಖಿಲ ಭಾರತ ಸಮ್ಮೇಳನವನ್ನು ಸಹ ನಮ್ಮಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗುವುದು. ನಿಕಟಪೂರ್ವಅಧ್ಯಕ್ಷರ ಬೇಡಿಕೆ ಮತ್ತು ಆಶಯಗಳನ್ನು ಈಡೇರಿಸಲು ಈ ತಾಲ್ಲೂಕಿನಲ್ಲಿಕನ್ನಡ ಭವನ ನಿರ್ಮಾಣಕ್ಕೆಯಾವುದೆ ಗುಂಪು ಬಣಗಳಿಲ್ಲದೆ ಎಲ್ಲಕನ್ನಡ ಅಭಿಮಾನಿಗಳು ಒಮ್ಮತದಿಂದಕನ್ನಡದ ಕೆಲಸ ಮಾಡಿ ಸಾಹಿತ್ಯ ಪರಿಷತ್ತನ್ನುಉನ್ನತ ಮಟ್ಟಕ್ಕೆ ಬೆಳೆಸಲು ಶ್ರಮಿಸೋಣಎಂದರು.
ನೂತನತಾಲ್ಲೂಕುಅಧ್ಯಕ್ಷಿಣಿ ಮಂಜುಳ ಮಾತನಾಡಿ, ಈ ಬಾರಿತಾಲ್ಲೂಕುಅಧ್ಯಕ್ಷರಾಗಿ ಮಹಿಳೆಯರಿಗೆ ಪ್ರಾದಾನ್ಯತೆ ನೀಡಿದಜಿಲ್ಲಾಧ್ಯಕ್ಷರುಆದಿಯಾಗಿತಾಲ್ಲೂಕಿನಎಲ್ಲಕನ್ನಡ ಮನಸ್ಸುಗಳಿಗೆ ಕೃತಜ್ನತೆಗಳನ್ನು ಸಲ್ಲಿಸಿ ನಾಲ್ವಡಿಕೃಷ್ಣರಾಜಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯರವರು ಸಾಹಿತ್ಯ ಪರಿಷತ್ತಿಗೆ ಶ್ರಮಿಸಿ ನೀಡಿರುವ ಕೊಡುಗೆಗಳು ಇತಿಹಾಸ ಸೃಷ್ಟಿ ಮಾಡಿದ್ದು, ಅವರ ಆಶಯÀಗಳ ತಕ್ಕಂತೆತಾಲ್ಲೂಕಿನಲ್ಲಿಕನ್ನಡ ನುಡಿತೇರನ್ನು ಮುಂದೆ ಎಳೆಯಲು ಎಲ್ಲರ ಸಹಕಾರದಿಂದ ನನಗೆ ಸಿಕ್ಕ ಈ ಅವಕಾಶವನ್ನು ಮನ: ಪೂರ್ವಕವಾಗಿ ಕೆಲಸ ಮಾಡಲು ಸಿದ್ದನಾಗಿದ್ದೇನೆಂದು ತಿಳಿಸಿದರು.
ನಿಕಟಪೂರ್ವಅಧ್ಯಕ್ಷಕುಬೇರಗೌಡಕನ್ನಡದದ್ವಜವನ್ನು ನೂತನತಾಲ್ಲೂಕುಅಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿ, ಹಿಂದೆ ನನಗೆ ನೀಡಿದಅವಕಾಶದಲ್ಲಿ ಮನ: ಪೂರ್ವಕವಾಗಿ ಏಳು-ಬೀಳುಗಳ ಮಧ್ಯೆಕನ್ನಡದ ಪರಿಷತ್ತಿನ ಸಮ್ಮೇಳನಗಳು, ಕನ್ನಡ ಪರ ಕೆಲಸಗಳನ್ನು ತೃಪ್ತಿಕರವಾಗಿ ಮಾಡಿದ್ದು, ಕನ್ನಡ ಭವನ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈಗಾಗಲೆ ಚರ್ಚಿಸಿದ್ದು ಅಖಿಲ ಭಾರತ ಸಮ್ಮೇಳನ ಈ ಗಡಿಜಿಲ್ಲೆಗೆಕರೆತರುವುದರಜೊತೆಗೆಜಿಲ್ಲಾಕೇಂದ್ರದಲ್ಲಿಕನ್ನಡ ಭವನ ನಿರ್ಮಾಣಕ್ಕೆ ನಾಗಾನಂದಕೆಂಪರಾಜು ಶ್ರಮವಹಿಸಿ ಸ್ಥಳವನ್ನು ದಾಖಲೆಗಳ ಸಮೇತ ಗುರ್ತಿಸಿದ್ದು, ಮುಂದಿನ ದಿನಗಳಲ್ಲಿ ನೂತನಜಿಲ್ಲಾಧ್ಯಕ್ಷರು ಈ ಜವಾಬ್ದಾರಿಗಳನ್ನು ತೆಗೆದುಕೊಂಡು ಕೆಲಸಗಳನ್ನು ಪೂರ್ಣ ಮಾಡಲು ಮುಂದಾಗಬೇಕು, ಇವರಿಗೆ ನಮ್ಮ ಸಹಕಾರ ಸದಾಇರುತ್ತದೆಎಂದು ತಿಳಿಸಿದರು.
ಇದೆ ವೇಳೆಯಲ್ಲಿ ಡಾ: ಪಿ. ಶಂಕರಪ್ಪ, ಜಿ.ಜಿ. ನಾಗರಾಜ್, ಕೆ.ಎಸ್. ಗಣೇಶ್, ನಿವೃತ್ತ ಪ್ರಾಂಶುಪಾಲರಾದ ಎ.ವಿ.. ರೆಡ್ಡಿ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿತಾಲ್ಲೂಕು ನೂತನ ಕ.ಸಾ.ಪ. ಪದಾಧಿಕಾರಿಗಳಾದ ಗೌ. ಅಧ್ಯಕ್ಷ ಲಕ್ಷ್ಮಣರೆಡ್ಡಿಎನ್. ಅಧ್ಯಕ್ಷಿಣಿ ಪಿ.ಎಸ್. ಮಂಜುಳ, ಗೌ. ಕಾರ್ಯದರ್ಶಿಗಳಾಗಿ ಎಂ. ಬೈರೇಗೌಡ, ಶ್ರೀರಾಮೇಗೌಡ, ಸಂಘಟನಾ ಕಾರ್ಯದರ್ಶಿಗಳಾಗಿ ಎನ್. ಕೃಷ್ಣಮೂರ್ತಿ, ನಂದಿನಿ, ಗೌ. ಕೋಶಾಧ್ಯಕ್ಷರಾಗಿ ಮುರಳಿ ಬಾಬು, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಪ್ರಸನ್ನಕುಮಾರ್, ಚಂದ್ರಪ್ಪ ಜಿ.ವಿ. ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ಸುರೇಂದ್ರ ನಾಯಕ್, ಮಹಿಳಾ ಸಾಹಿತಿಗಳಾಗಿ ಚಿಕ್ಕರೆಡ್ಡೆಮ್ಮ, ಲಕ್ಷ್ಮಿ, ಸಂಘ ಸಂಸ್ಥೆಗಳ ಪ್ರತಿನಿಧಿಗಳಾಗಿ ಶಂಕರೇಗೌಡ, ಎಲ್. ನಾರಾಯಣಸ್ವಾಮಿ, ಟಿ.ವಿ. ನಟರಾಜ್, ಮೋಹನ್ ಗುಪ್ತ, ನಂಬಿಹಳ್ಳಿ ವೆಂಕಟೇಶ್, ವೀಣಾ ಬ್ಯಾಂಗಲ್ಸ್‍ರಮೇಶ್, ಎಂ.ಎನ್. ಚಂದ್ರಶೇಕರ್, ತಾಲ್ಲೂಕು ಸಂಚಾಲಕರಾಗಿಆರ್. ಮುನೇಗೌಡ, ರಾಧಾಕೃಷ್ಣ, ಪತ್ರಿಕಾ ಪ್ರತಿನಿಧಿಯಾಗಿಆರ್. ಬಾಬು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಕಲಾ ಶಂಕರ್, ರಾಮಕೃಷ್ಣೇಗೌಡ, ಸಾಹಿತ್ಯ ಸಂಚಾಲಕರಾಗಿ ಪ್ರಕಾಶಯ್ಯ, ಸಂಪನ್ಮೂಲ ವ್ಯಕ್ತಿಗಳಾಗಿರವಿಕುಮಾರ್, ತಾಲ್ಲೂಕುಉಸ್ತುವಾರಿರಾಮಚಂದ್ರೇಗೌಡ, ಇತರೆ ಕ್ಷೇತ್ರಗಳ ಪ್ರತಿನಿಧಿಗಳಾಗಿ ತಾಜ್ ಪಾಷ ಇವರನ್ನುಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ3190 ರೋಟರಿ ಉಪರಾಜ್ಯಪಾಲರಾದಎಸ್. ಶಿವಮೂರ್ತಿ, ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ಅಧ್ಯಕ್ಷರಾದಡಾ: ವೆಂಕಟಾಚಲ, ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾ ಸಂಚಾಲಕರಾದಮುನಿವೆಂಕಟೇಗೌಡ,ಜಾನಪದ ಸಾಹಿತ್ಯ ಪರಿಷತ್‍ಅಧ್ಯಕ್ಷಜಾಮಕಾಯಲ ವೆಂಕಟೇಶ್, ಕನ್ನಡಾಭಿಮಾನಿಗಳಾದ ಮಾಯಾ ಬಾಲಚಂದರ್, ರವಿಕುಮಾರ್,ಗೋವಿಂದಗೌಡ ಮುಂತಾದವರು ಹಾಜರಿದ್ದರು.