ಅಖಿಲ ಭಾರತ ಮುಷ್ಕರ: ರಾಜ್ಯದ ಹಲವಡೆ   ಕಾರ್ಮಿಕ ಜನ ವಿರೋಧಿ ನೀತಿಗಾಗಿ  ಪ್ರತಿಭಟನೆ

JANANUDI.COM NETWORK

ಬೆಂಗಳೂರು: ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನ ವಿರೋಧಿ ನೀತಿ, ಕಾರ್ಪೊರೇಟ್ ಪರ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಮತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಷ್ಟ್ರವ್ಯಾಪಿ ಮುಷ್ಕರದ ಕರೆಯ ಭಾಗವಾಗಿ ಇಂದು(ಮಾ.29) ರಾಜ್ಯಾದ್ಯಂತ ಎರಡನೇ ದಿನದಂದು ಹಲವಡೆ ಪ್ರತಿಭಟನಾ ಪ್ರದರ್ಶನಗಳು ನಡೆದವು. ಕಾರ್ಮಿಕ ಸಂಘಗಳ‌‌ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ‌ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ನೆರದಿದ್ದ ಸಂಘಟಿತ, ಅಸಂಘಟಿತ, ಸ್ಕಿಂ‌ ಕಾರ್ಮಿಕರು ಹಾಗೂ ಬ್ಯಾಂಕ್, ವಿಮಾ, ಬಿಎಸ್ ಎನ್‌ಎಲ್,‌ ಸಂಘಗಳ ಸಾವಿರಾರು‌ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು. ಉಡುಪಿಯಲ್ಲಿ ನಿನ್ನೆ  ಅಖಿಲ ಭಾರತ ಮುಷ್ಕರ ಮಾರ್ಚ್ 29 ಭಾಗವಾಗಿ ಮಣಿಪಾಲದ ಟೈಗರ್ ಸರ್ಕಲ್‌ ನಿಂದ ಸಾವಿರಾರು ಕಾರ್ಮಿಕರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಬಂದು ಪ್ರತಿಭಟನೆ ನಡೆಸಿ ಅಪಾರ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಅದೇ ರೀತಿ ರಾಜ್ಯದಲ್ಲೆಡೆ ಕೋಲಾರ, ಚಿಕ್ಕಮಗಳೂರು ಮಡಿಕೇರಿ, ಕಲಬುರಗಿ, ಶಿವಮೊಗ್ಗ ಧಾರವಾಡ ಮಂಡ್ಯ ಹಾಸನ ತುಮಕೂರು , ವಿಜಯನಗರ ರಾಯಚೂರು ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಇತರ ಜಿಲ್ಲೆ ಮತ್ತು ವಿವಿಧ ತಾಲೂಕು ಕೇಂದ್ರಗಳಲ್ಲಿ ಈ ಪ್ರತಿಭಟನೆ ನಡೆಯಿತು.