

ಮಂಗಳೂರು ; ಕಿರುಪುಷ್ಪ ಎಎ ಕೂಟ ಬಿಕ್ಕರ್ನಕಟ್ಟೆ ಮಂಗಳೂರು ದಕ ಇವರ ವತಿಯಿಂದ ನಡೆಸಲಾಗುವುದು -ಇಂದು ಸಮಾಜದಲ್ಲಿ ಹಲವಾರು ಮಂದಿ ಅಮಲು ತನದಿಂದ ಬಳಲುತ್ತಿದ್ದಾರೆ. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ಅಮಲು ರೋಗ ಎಂದು ವಿಶ್ವ ಆರೋಗ್ಯಸಂಸ್ಥೆ ಗುರುತಿಸಿದೆ. ಅಮಲು ರೋಗವನ್ನು ಆಧ್ಯಾತ್ಮಿಕ ಜಾಗೃತಿಯಿಂದ ಪರಿಹರಿಸಿಕೊಳ್ಳಬಹುದು.ಅಧ್ಯಾತ್ಮಿಕ ಜಾಗೃತಿಗೆ ಸಂಬಂಧಪಟ್ಟ 12 ಮೆಟ್ಟಿಲುಗಳ ಕಾರ್ಯಕ್ರಮ ಹೊಂದಿಕೊಂಡಿದೆ. ಮೊದಲನೇ ಮೆಟ್ಟಿಲು ಅವರಿಗೆ ದೇವರ ಬಗ್ಗೆ ತಿಳಿಸದಿದ್ದರೂ ಅವರು ತಮ್ಮನ್ನು ಶರಣಾಗತಿಯ ಮೂಲಕ ಆಧ್ಯಾತ್ಮಿಕ ಜಗತ್ತಿಗೆ ತೆರೆದು ಕೊಳ್ಳಬಹುದು .ಆಧ್ಯಾತ್ಮಿಕ ಜಾಗೃತಿ ಲಭಿಸಲು ಇದೊಂದು ಕಠಿಣ ಹೆಜ್ಜೆ ಆದರೂ ಅವರಿಗೆ ಅದು ಅತ್ಯಗತ್ಯವಾಗಿದೆ .ಅದರ ಬಗ್ಗೆ ಸೂಕ್ತ ಮಾಹಿತಿ ಹಾಗೂ ತಿಳುವಳಿಕೆಯನ್ನು ಪಡೆದು ತಮ್ಮನ್ನು ಅಧ್ಯಾತ್ಮಿಕ ಜಾಗೃತಿ ಪಡೆದು ಕೊಳ್ಳಲು ಕಾರ್ಯೋನ್ಮುಖರಾಗಬೇಕಾಗುತ್ತದೆ. ಎರಡನೇ ಮೆಟ್ಟಿಲು ಅವರಿಗೆ ದೇವರ ಬಗ್ಗೆ ತಿಳಿಸದಿದ್ದರೂ ಅವರು ಒಂದು ಉನ್ನತ ಶಕ್ತಿಯ ಮೇಲೆ ನಂಬಿಕೆ ಇಟ್ಟರೆ ಖಂಡಿತ ತಾವು ಮಾನಸಿಕವಾಗಿ ವಿವೇಕವನ್ನು ಪಡೆಯಲು ಹಾಗೂ ಜೀವನವನ್ನು ವ್ಯವಸ್ಥಿತವಾಗಿ ನಡೆಸಲು ಉನ್ನತ ಶಕ್ತಿಯ ಸಹಾಯ ಪಡೆದುಕೊಳ್ಳುವುದಕ್ಕೆ ಸುಲಭವಾಗುತ್ತದೆ. ಮೂರನೇ ಮೆಟ್ಟಿಲು ಅವರವರು ಅರ್ಥೈಸಿಕೊಂಡ ಭಗವಂತನೊಡನೆ ತಮ್ಮ ಇಚ್ಚೆ ಮತ್ತು ಜೀವನವನ್ನು ಆತನೊಡನೆ ತಿರುಗಿಸುತ್ತಾರೆ.ಹಾಗೂ ಇದರಿಂದ ಸಂಪೂರ್ಣ ಸ್ವತಂತ್ರಗುತ್ತಾರೆ ಇದರ ಬಗ್ಗೆ ಪರಿಪೂರ್ಣ ಮಾಹಿತಿ ಹಾಗೂ ವಿಚಾರಗಳನ್ನು ತಿಳಿಯಲು ಈ ಕಾರ್ಯಕ್ರಮ ಸಹಾಯ ಮಾಡುತ್ತದೆ. ತಮ್ಮನ್ನೇ ನಾವು ಪರೀಕ್ಷಿಸಲು ಹಾಗೂ ತಮ್ಮನ್ನು ನಾವು ಅರಿತುಕೊಳ್ಳಲು ನಾಲ್ಕನೆ ಮೆಟ್ಟಿಲಿನಲ್ಲಿ ಹಾಗೂ ತಮ್ಮ ವಿಚಾರಗಳನ್ನು ತಿಳಿಯಲು ಅವರಿಗೆ ಸಾಧ್ಯವಾಗುತ್ತದೆ. ಇದು ತಮಗೆ ಮುಂದಿನ ಜೀವನಕ್ಕೆ ತಮ್ಮನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡುತ್ತದೆ. ಈ ಬಗ್ಗೆ ಕಾರ್ಯಗಾರವನ್ನು ಇದೆ ಏಪ್ರಿಲ್ 12 ಶನಿವಾರ ಮಧ್ಯಾಹ್ನ 3 ರಿಂದ ಬಿಕರ್ನಕಟ್ಟೆ ಬಾಲಯೇಸು ಮಂದಿರದ ಸಭಾಂಗಣದಲ್ಲಿ ಎಪ್ರಿಲ್ 13 ಭಾನುವಾರ ಬೆಳಿಗ್ಗೆ 6.00 ರಿಂದ ಮಧ್ಯಾಹ್ನ 12-30 ತನಕ ಮುಡಿಪು ಕಷ್ಣ ಧ್ಯಾನ ಕೇಂದ್ರ ಮತ್ತು ಸಂತ ಜೋಸೆಫ್ ವಾಜ್ ವರ ಪುಣ್ಯಕ್ಷೇತ್ರದ ಸಭಾಂಗಣದಲ್ಲಿ ನಡೆಸಲಿದ್ದಾರೆ’ ಬನ್ನಿ, ಜತೆ ಸೇರಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆಯೋಣ. ಸಹಾಯ ಪಡೆಯಿರಿ ಇತರರಿಗೆ ಸಹಾಯ ಮಾಡಿರಿ.ಒಬ್ಬರಿಗೊಬ್ಬರು ಪೂರಕರಾಗೋಣ ನಿರಂತರವಾಗಿ ಪಾಲಿಸಲು ಬೇಕಾದ ಕಾರ್ಯಕ್ರಮದ ಹೆಜ್ಜೆಗಳನ್ನು ಅರಿತುಕೊಳ್ಳೋಣಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
ಕೆನರಾ ಉಡುಪಿ ಎಎ ಅಂತರ ಪಂಗಡ*9664280840
9663740555