

ಶ್ರೀನಿವಾಸಪುರ : ತಾಲ್ಲೂಕಿನ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಅಕ್ರಮ್ ಪಾಷ ತಮ್ಮ ಅಸಮದಾನ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿಗಳಾದ ಅಕ್ರಮ್ ಪಾಷ ರವರು ಕಳೆದ ಕೆಲ ದಿನಗಳಿಂದ ಜಿಲ್ಲೆಗೆ ಒಳಪಡುವ ತಾಲ್ಲೂಕುವಾರು ಕೇಂದ್ರಗಳಿಂದ ದಿಢೀರ್ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.
ಇದೆ ನಿಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ಶ್ರೀನಿವಾಸಪುರ ತಾಲ್ಲೂಕು ಕಛೇರಿಗೆ ಡಿ ಸಿ ಅಕ್ರಮ್ ಪಾಷ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನೆ ವೇಳೆ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡು ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಕಛೇರಿಯ ಒಳಾoಗಣ ಹಾಗೂ ಹೋರಾoಗಣ ಸುಮಾರು ವರ್ಷಗಳಿಂದ ಅವ್ಯವಸ್ಥೆಯ ಗೂಡಿಗೆ ನಿದರ್ಶನವಾಗಿದೆ. ಯಾರೇ ದಂಡಾಧಿಕಾರಿಗಳು ಇಲ್ಲಿಗೆ ಬಂದ್ರು ರಾಜಕೀಯ ಪುಡಾರಿಗಳ ದೌರ್ಜನ್ಯಕ್ಕೆ ಅಥವಾ ಇಲ್ಲಿನ ಸಂಪನ್ಮೂಲಗಳ ದುರಾಸೆಗೆ ಇಚ್ಛಿಸಿ ತಾಲ್ಲೂಕಿನ ಅಭಿವೃದ್ಧಿಯ ಕಿನ್ನತೆಗೆ ಕಾರಣವಾಗುತ್ತಿದ್ದಾರೆ. ಅದೇ ರೀತಿ ಸದ್ಯ ಈಗಿರುವ ಅಧಿಕಾರಿಯಿಂದಲೂ ಅಭಿವೃದ್ಧಿಗೆ ದೂರ ಉಳಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ ತಾಲ್ಲೂಕು ಕಛೇರಿಯ ಅವ್ಯವಸ್ಥೆ.
ಇದೆ ವೇಳೆ ನೂತನ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿಯಿಂದ ಅಧಿಕಾರಿಗಳು ಕಂಗಲಾದರಾದರೂ ವ್ಯವಸ್ಥಿತವಾದ ವಾತಾವರಣ ಇದೆಯೆಂಬ ಭ್ರಮೆ ಮೂಡಿಸಲು ಯತ್ನಿಸಿ ವಿಫಲರಾದರು.
ತಾಲ್ಲೂಕು ಕಛೇರಿಯ ಎಲ್ಲಾ ವಿಭಾಗಗಳನ್ನು ಪರಿಶೀಲಿಸುತ್ತಿರುವ ವೇಳೆ ಸಾರ್ವಜನಿಕರು ಇಲ್ಲಿನ ಅವ್ಯವಸ್ಥೆಯ ಬಗ್ಗೆ ಹಾಗೂ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು. ಎಲ್ಲವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚು ನೀಡುವ ಭರವಸೆ ನೀಡಿದರು.






