ಶ್ರೀನಿವಾಸಪುರ : ಗೌನಿಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಸ್ಥಾನಕ್ಕೆ ಜನವರಿ 2 ಗುರುವಾರ ರಂದು ಚುನಾವಣೆ ನಡೆದಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಕ್ಕಯ್ಯಮ್ಮನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ನಾಗರತ್ನಮ್ಮ ರಾಮ್ ಮೋಹನ್ ರವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರವಾಗಿದ್ದಂತಹ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದ್ದು ಅಧ್ಯಕ್ಷರ ಸ್ಥಾನಕ್ಕೆ ಅಕ್ಕಯ್ಯಮ್ಮ ನವರು ಒಂದೇ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದ ಕಾರಣ ಚುನಾವಣಾ ಅಧಿಕಾರಿ ರವಿಚಂದನ್ ರವರು ನಾಮಪತ್ರ ಸಲ್ಲಿಕೆ ಸಮಯ ಮುಕ್ತಾಯವಾಗುತ್ತಿದ್ದಂತೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಅಕ್ಕಯ್ಯಮ್ಮ ರವರನ್ನು ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಸದಸ್ಯರಾದ ಶೇಷಾದ್ರಿ,ಬಕ್ಷುಸಾಬ್ ಮಾತನಾಡಿ ಗೌನಿಪಲ್ಲಿ ಇತಿಹಾಸದಲ್ಲಿಯೇ ಮೊದಲಬಾರಿಗೆ ಅಧ್ಯಕ್ಷಗಾದೆ ಚುನವಾಣೆ ನಡಿಸದೆ ಅವಿರೋಧ ಪ್ರಕ್ರಿಯೆಯು ನಡೆದಿದ್ದು, ನಮ್ಮ ಗ್ರಾಮಪಂಚಾಯತಿಯನ್ನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಕ್ಕಯ್ಯಮ್ಮ ವೆಂಕಟರಮಣಪ್ಪರವರನ್ನ ಎರಡು ಪಕ್ಷದ ಸದಸ್ಯರು ಸೇರಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪಿಡಿಒ ಶಂಕರಪ್ಪ, ಮುಖಂಡರಾದ ಜಾಮಕಾಯಿಲ ವೆಂಕಟೇಶ್, ಮುನಿರಾಜು, ಅಶ್ವಥ್,ಅನಿಲ್ಕುಮಾರ್, ಎನ್.ಶ್ರೀನಿವಾಸ್, ಅಪ್ಪಲ್ಲ,ರಾಘವೇಂದ್ರನಾಯಕ್, ಶೋಕತ್ಖಾನ್, ಅಬ್ಬು, ಪಾಪಶೆಟ್ಟಿಪಲ್ಲಿ ವಿನೋಧ, ಕಾರ್ತಿಕ್, ಕರುಕೋನಪಲ್ಲಿ ಗಣ, ಅಶೋಖ್, ಎಫ್ಡಿಎ ಈಶ್ವರ್, ಗಣಕಯಂತ್ರ ಸಹಾಯಕ ಮಂಜುನಾಥ್, ಕರವಸೂಲಿಗಾರರಾದ ಗಂಗಪ್ಪ, ಮಲ್ಲಕಾ, ಕಾಯಕಮಿತ್ರರಾದ ನಾಗಲಕ್ಷಿö್ಮ, ಜ್ಯೋತಿ ಇದ್ದರು.