ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕು, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಗಲಘಟ್ಟ ಬಿ.ವಿ. ಶ್ರೀನಿವಾಸರೆಡ್ಡಿ ಉಪಾಧ್ಯಕ್ಷರಾಗಿ ಶಿವಪುರ ಬಿ. ಗುರ್ರಪ್ಪ ಅವಿರೋದವಾಗಿ ಅಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಬಿ.ಆರ್. ಶಿವಶಂಕರ್ ತಿಳಿಸಿದ್ದಾರೆ.
ತಾಲ್ಲೂಕು, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿಗೆ ಈಗಾಗಲೇ 13 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಈ ಅಧ್ಯಕ್ಷ ಸ್ಥಾನಕ್ಕೆ ಮುದಿಮುಡಗು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ನಾಮಪತ್ರ ಸಲ್ಲಿಸಿದ್ದು. ಅದೇ ರೀತಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದಿಂದ ಬಿ. ಗುರ್ರಪ್ಪ ನಾಮಪತ್ರ ಸಲ್ಲಿಸಿದ್ದರು. ಈ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ ಬೇರೆ ಯಾರು ಸ್ಪರ್ದೆ ಮಾಡದೆರುವುದರಿಂದ ಇವರನ್ನು ಅವಿರೋದವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಬಗಲಘಟ್ಟ ಬಿ.ವಿ. ಶ್ರೀನಿವಾಸರೆಡ್ಡಿ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿ ನನ್ನ ಆಯ್ಕೆಗೆ ಸಹಕರಿಸಿದ ಮಾಜಿ ವಿಧಾನ ಸಭಾ ಅಧ್ಯಕ್ಷರು, ಹಾಗೂ ಹಾಲಿ ಶಾಸಕ ಕೆ. ರಮೇಶ್ ಕುಮಾರ್, ಈ ಭಾಗದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್, ಜೊತೆಗೆ ಈ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರಿಗೆ ಹಾಗೂ ಕಾಂಗ್ರೇಸ್‍ನ ಹಿರಿಯ ಮುಖಂಡಿರಿಗೆ ನನ್ನ ಕೃತಜ್ಞೆತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿ ಈ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿಯ ಸರ್ವತೋಮುಖ ಅಭಿವೃದ್ದಿಗೆ ಹಗಲಿರಳು ಶ್ರಮಿಸುತ್ತೇನೆ. ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತೇನೆ. ಸಾಲ-ಸೌಲಭ್ಯ ದೊರಕಿಸಿ ಸರ್ಕಾರದಿಂದ ಬರುವ ರಿಯಾಯಿತಿ ಧರದಲ್ಲಿ ರಸಗೊಬ್ಬರಗಳು, ಬಿತ್ತನೆ ಬೀಜಗಳನ್ನು ವಿತರಿಸುವ ಪ್ರಮಾಣೀಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಾದ ನಂತರ ಪಟಾಕಿಯನ್ನು ಸಿಡಿಸಿ ವಿಜಿಯೋತ್ಸವ ಆಚರಿಸಿದರು.
ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬೈರಪಲ್ಲಿ ವೆಂಕಟರೆಡ್ಡಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ನಿರ್ದೇಶಕರಾದ ಕೋಡಿಪಲ್ಲಿ ಕೆ.ಬಿ. ಸುಬ್ಬರೆಡ್ಡಿ ಬೋರವೆಲ್ ಕೃಷ್ಣಾರೆಡ್ಡಿ, ಸಿ. ನಾರಾಯಣಸ್ವಾಮಿ, ಕೆ. ಶ್ರೀನಿವಾಸರೆಡ್ಡಿ, ಲಕ್ಷ್ಮಣರೆಡ್ಡಿ, ಪಾರ್ವತಮ್ಮ ಶ್ರೀರಾಮರೆಡ್ಡಿ, ಟಿ.ವಿ. ಬೈರೆಡ್ಡಿ, ವಿ.ವೆಂಕಟರೆಡ್ಡಿ, ರೋಣೂರು ಗ್ರಾಮ ಪಂಚಾಯಿತಿ ಮಜಿ ಉಪಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ದ್ವಾರಸಂದ್ರ ಮುನಿವೆಂಕಟರೆಡ್ಡಿ, ಶಿವಪುರ ಜಿ. ಮಂಜುನಾಥ್, ಜಿ. ವೆಂಕಟೇಶ್, ಶ್ರೀನಿವಾಸ್, ಶ್ರೀನಾಥ್, ಶೆಟ್ಟಿಹಳ್ಳಿ ಮುನಿಶಾಮಿ, ಬಂಡಪಲ್ಲಿ ಸುರೇಶ್, ಗಣೇಶ್, ಸಹಕಾರ ಸಂಘದ ಕಾರ್ಯದರ್ಶಿ ನಾಗರಾಜ್, ಸಿಬ್ಬಂದಿ ಭರತ್, ಇನ್ನೀತರರು ಹಾಜರಿದ್ದರು.