

ಶ್ರೀನಿವಾಸಪುರ : ಬದುಕು ಒಂದೇ ದಿನದಲ್ಲಿ ಬದಲಾಗುತ್ತದೆ ಎನ್ನಲು ಸಾಧ್ಯವಿಲ್ಲ ಆದರೆ ಒಂದು ಒಳ್ಳೇಯ ನಿರ್ಧಾರ ಬದಕನ್ನೇ ಬದಲಾಯಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನ ದೃಡ ನಿರ್ಧಾರವೇ ಪ್ರೇರಕ ಶಕ್ತಿಯಾಗಿದ್ದು , ಈ ಮಾರ್ಗದಲ್ಲಿ ಗಟ್ಟಿ ಹೆಜ್ಜೆಗಳನ್ನಿಟ್ಟಾಗಲೇ ಯಶಸ್ಸು ದೊರೆಯುತ್ತದೆ ಎಂದು ಶಾಸಕ ಕೆ.ಆರ್.ರಮೇಶ್ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿ. ವತಿಯಿಂದ ರೈತರಿಗೆ ಕೆಸಿಸಿ ಸಾಲ ಮತ್ತು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಬುಧವಾರ 1ಕೋಟಿ 15 ಲಕ್ಷ ಸಾಲದ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಸ್ವಾವಲಂಬಿ ಬದುಕಿಗಾಗಿ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಅಲೆದಾಡಿದರು ಸಾಲವನ್ನು ಪಡೆಯುಲು ಸಾಧ್ಯವಾಗುತ್ತಿಲ್ಲ . ಇದಕ್ಕೆ ಅಪವಾದವೆಂಬತೆ ಹಣ ಕೊರತೆ ನಿವಾರಿಸುವ ಸಲುವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ವತಿಯಿಂದ ಅವಳಿ ಜಿಲ್ಲೆಗಳ ನೂರಾರು ಮಹಿಳಾ ಸಂಘಗಳಿಗೆ ಹಾಗು ಬೀದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರದ ಸಾಲವನ್ನು ವಿತರಿಸಲಾಗುತ್ತಿದ್ದು ಹಣವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು .
ತಾಲೂಕು ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಸೊಸೈಟಿ ಅಧ್ಯಕ್ಷ ತೂಪಲ್ಲಿ ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಜಮೀಲ್ಪಾಷ, ನಿರ್ದೇಶಕರಾದ ಮುನಯ್ಯ, ಪೇಪರ್ ವೆಂಕಟೇಶ್, ತಾ.ಪಂ.ಮಾಜಿ ಸದಸ್ಯ ಕೆ.ಕೆ.ಮಂಜುನಾಥ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ, ಮುಖಂಡ ಟಿ.ವಿ.ನಾರಾಯಣಸ್ವಾಮಿ, ಗ್ರಾ.ಪಂ.ಉಪಾಧ್ಯಕ್ಷೆ ಮಂಗಮ್ಮ ನಡುಪನ್ನ ಇದ್ದರು.
ಪೋಟು 1 : ಲಕ್ಷ್ಮೀಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿ. ವತಿಯಿಂದ ರೈತರಿಗೆ ಕೆಸಿಸಿ ಸಾಲ ಮತ್ತು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ 1ಕೋಟಿ 15 ಲಕ್ಷ ಸಾಲದ ಚೆಕ್ಗಳನ್ನು ಶಾಸಕ ಕೆ.ಆರ್.ರಮೇಶ್ಕುಮಾರ್ ವಿತರಣೆ ಮಾತನಾಡಿದರು.