ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಮತ್ತು ಡಾಕ್ಟರ್ ಸ್ವಾಮಿನಾಥನ್ ಶಿಪಾರಸ್ಸುಗಳನ್ನು ಜಾರಿ ಮಾಡಲು ಒತ್ತಾಯ

ರಾಯಲ್ಪಾಡು 1 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಮತ್ತು ಡಾಕ್ಟರ್ ಸ್ವಾಮಿನಾಥನ್ ಶಿಪಾರಸ್ಸುಗಳನ್ನು ಜಾರಿ ಮಾಡಲು ಒತ್ತಾಯಿಸಿ ಹೋರಾಟಗಳನ್ನು ಬಲಿಷ್ಠವಾಗಿ ಮಾಡಲು ಸಂಘಟಿತರಾಗಬೇಕು ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಾತಕೋಟ ನವೀನ್ ತಿಳಿಸಿದರು.
ಗೌನಿಪಲ್ಲಿಯ ಗಣಪತಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘವತಿಯಿಂದ ನೂತನ ಸಂಘ ರಚನೆ ಹಾಗೂ ರೈತ ಕೃಷಿ ಉಳಿವಿಗಾಗಿ , ರೈತರ ಕೃಷಿ ಕೂಲಿಕಾರರ ರಕ್ಷಣೆಗಾಗಿ ಪ್ರದೇಶವಾರು ಸಮಾವೇಶದಲ್ಲಿ ಮಾತನಾಡಿದರು.
ತಾಲ್ಲೂಕು ಉಪಾಧ್ಯಕ್ಷ ಆರ್.ವೆಂಕಟೇಶ್, ನೂತನ ಸಮಿತಿ ಅಧ್ಯಕ್ಷರಾಗಿ ವೈ.ಆರ್.ರಘುನಾಥರೆಡ್ಡಿ, ಕಾರ್ಯದರ್ಶಿ ಎಸ್.ಶಿವಾರೆಡ್ಡಿ, ಮಂಗಮ್ಮ, ಸಹ ಕಾರ್ಯದರ್ಶಿ ನಾಗರಾಜ್, ಬೈರೆಡ್ಡಿ, ಸದಸ್ಯರಾಗಿ ವೆಂಕಟನರಸಪ್ಪ, ಶಂಕರರೆಡ್ಡಿ, ಸರಸ್ವತಮ್ಮ, ಉತ್ತನ್ನ, ವೆಂಕಟರಮಣರೆಡ್ಡಿ, ಮಂಜುನಾಥ್, ಜೆ.ಶ್ರೀನವಾಸ್, ಮುನಿರೆಡ್ಡಿ ಆಯ್ಕೆಯಾದಾರು.