ಎ.ಜಿ.ಕೊಡ್ಗಿಯವರಿಗೆ ಕೋ.ಮ.ಕಾರಂತ ಪ್ರಶಸ್ತಿ

JANANUDI.COM NETWORK


ಕುಂದಪ್ರಭ ಸಂಸ್ಥೆಯ ವತಿಯಿಂದ ನೀಡಲಾಗುತ್ತಿರುವ ಕೋ.ಮ.ಕಾರಂತ ಪ್ರಶಸ್ತಿಯನ್ನು ಹಿರಿಯ ಸಾಮಾಜಿಕ ಧುರೀಣ, ಮಾಜಿ ಶಾಸಕ, ಕರ್ನಾಟಕ ಮೂರನೇ ರಾಜ್ಯ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ (ರಿ) ನ ಅಧ್ಯಕ್ಷ ಎ.ಗೋಪಾಲಕೃಷ್ಣ ಕೊಡ್ಗಿ ಇವರಿಗೆ ಪ್ರದಾನ ಮಾಡಲು ನಿರ್ಧರಿಸಲಾಗಿದೆ.
ಹಿರಿಯ ಪತ್ರಕರ್ತ, ತರಬೇತುದಾರ, ಬ್ಯಾಂಕರ್, ವಾಗ್ಮಿ, ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ಪ್ರತಿವರ್ಷ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಅಂಕಣಗಾರ ಕೋಣಿ ಶಿವಾನಂದ ಕಾರಂತರ ನೇತೃತ್ವದಲ್ಲಿ ಆಯ್ಕೆ ಸಮಿತಿ ಈ ವರ್ಷ ಎ.ಜಿ.ಕೊಡ್ಗಿಯವರನ್ನು ಆಯ್ಕೆ ಮಾಡಿದೆ.
ಸಮಾರಂಭ ಜನವರಿ ೨೩ ರಂದು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷಿö್ಮÃ ನರಸಿಂಹ ಕಲಾಮಂದಿರದಲ್ಲಿ ಸಂಜೆ ೪.೩೦ ಕ್ಕೆ ನಡೆಯಲಿದೆ.
ಕುಂದಾಪುರ ತಾಲ್ಲೂಕು ಅಮಾಸೆಬೈಲು ಕೃಷಿಕ ಕುಟುಂಬದ, ಸ್ವಾತಂತ್ರö್ಯ ಹೋರಾಟ ಗಾರ ಕೃಷ್ಣರಾಯ ಕೊಡ್ಗಿಯವರ ಪುತ್ರರಾದ ಎ.ಜಿ.ಕೊಡ್ಗಿಯವರು ಕಾನೂನು ಪದವೀಧ sÀರರು. ತನ್ನ ಸುಮಾರು ಆರು ದಶಕಗಳ ಸಾಮಾಜಿಕ ಜೀವನದಲ್ಲಿ ಹತ್ತಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ “ಕನಸುಗಾರ” ಕೊಡ್ಗಿ ಎಂದೇ ಕರೆಯಲ್ಪಟ್ಟ ವರು. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಕ್ಷೇತ್ರಗಳಲ್ಲಿ ಹಲವು ಪ್ರಯೋಗಗಳನ್ನು ನಡೆ ಸಿರುವ ಇವರು ಸಹಕಾರಿ ಕ್ಷೇತ್ರಗಳಲ್ಲಿ ಶ್ರಮ ವಹಿಸಿದವರು. ಕರ್ಣಾಟಕ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಶಾಸಕ ರಾಗಿ ಹಾಗೂ ಹಲವು ರಾಜಕೀಯ ಹುದ್ದೆ ಗಳಲ್ಲಿ ಖ್ಯಾತರಾದ ಇವರು ಅವಿಭಜಿತ ದ.ಕ. ಜಿಲ್ಲೆಯ ಆಮೂಲಾಗ್ರ ಅಭಿವೃದ್ಧಿಗಾಗಿ ಹಲವಾರು ಚಿಂತನೆಗಳನ್ನು ಮಾಡಿದವರು.
ರಾಜಕೀಯವಾಗಿ ನಿವೃತ್ತರಾದ ಮೇಲೂ ಯುವಕರಂತೆ ಉತ್ಸಾಹದಿಂದ ಚಟುವಟಿಕೆ ಯಿಂದ ಇರುತ್ತಾ, ಅಮಾಸೆಬೈಲು ಗ್ರಾಮ ರಾಷ್ಟçಮಟ್ಟದಲ್ಲಿ ಹೆಸರು ಮಾಡುವಂತೆ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಮೂಲಕ, ಹತ್ತು ಹಲವು ಯೋಜನೆಗಳೊಂ ದಿಗೆ ಊರಿನ ಸಂಪೂರ್ಣ ಅಭಿವೃದ್ದಿಗೆ ತನ್ನ ಸಮಯವನ್ನು ಮುಡುಪಾಗಿಟ್ಟವರು.