ಬೆಳಗಾವಿ ಇಪ್ಪತ್ತು ಲಕ್ಷ ರೂ ಮೌಲ್ಯದ ಆಫೀಮು ವಶ ಮೂವರ ಬಂಧನ

JANANUDI.COM NETWORK


ಬೆಳಗಾವಿ; ಬೆಳಗಾವಿ ಪೋಲೀಸರು ಇಂದು ಮಹತ್ವದ ದಾಳಿ ಮಾಡುವ ಮೂಲಕ ಅಪಾರ ಪ್ರಮಾಣದ ಆಫೀಮು ವಶಪಡಿಸಿಕೊಂಡಿದ್ದಾರೆ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯಲ್ಲಿ ನಿರಂತರವಾಗಿ ಮಟಕಾ ಜೂಜಾಟ,ಮತ್ತು ಗಾಂಜಾ ಮಾರಾಟದ ಅಡ್ಡೆಗಳ ಮೇಲೆ ದಾಳಿ ನಡೆಯುತ್ತಿದೆ. ಗಾಂಜಾ,ಮಟಕಾ,ಜೂಜಾಟದ ವಿರುದ್ಧ ಸಮರವನ್ನೇ ಸಾರಿರುವ ಬೆಳಗಾವಿ ಪೋಲೀಸರು ಇಂದು
ಇವತ್ತು ಸೈಬರ್ ಕ್ರೈಂ ವಿಭಾಗದ ಪೋಲೀಸರು ದಾಳಿ ಮಾಡಿ ಒಂದು ಕೆ.ಜಿಗೂ ಹೆಚ್ಚು ಆಫೀಮು ಜಪ್ತು ಮಾಡಿದ್ದು ಇದರ ಮೌಲ್ಯ ಅಂದಾಜು ಇಪ್ಪತ್ತು ಲಕ್ಷಕ್ಕೂ ಹೆಚ್ಚಾಗುತ್ತದೆ.ಈ ದಾಳಿಯ ಮೂಲಕ ಈಗ ಪೋಲೀಸರು ಮಾದಕ ವಸ್ತುಗಳ ಮಾರಾಟದ ವಿರುದ್ಧವೂ ಸಮರ ಸಾರಿದ್ದಾರೆ.
ಬೆಳಗಾವಿಯಲ್ಲಿ ಹೇಳಿಕೆ ನೀಡಿದ ಡಿಸಿಪಿ ವಿಕ್ರಂ ಅಮಟೆ ಬೆಳಗಾವಿಯ ಹೊನಗಾ ಮತ್ತು ಚನ್ನಮ್ಮ ನಗರ ಪ್ರದೇಶಗಳಲ್ಲಿ ದಾಳಿ ಮಾಡಿ ಒಂದು ಕೆ.ಜಿಗೂ ಹೆಚ್ವು ಆಫೀಮು ವಶಪಡಿಸಿಕೊಳ್ಳಲಾಗಿದ್ದು,ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬರಕತ್‌ಖಾನ್ ತಂದೆ ಎಲ್ಲಾಖಾನ್ ವಯಸ್ಸು 30 ವರ್ಷ ವೃತ್ತಿ ಪಾನ್ ಶಾಪ್ ಹಾಲಿ ರಾಜಸ್ತಾನ ದಾಭಾ
ಹತ್ತಿರ ಇರುವ ಜೋಗಾನಟ್ಟಿ ಗ್ರಾಮ್ ತಾ: ಬೆಳಗಾವಿ, ಕಮಲೇಶ ಸುರಜನರಾಮ್ ಬೆನಿವಾಲಾ ವಯಸ್ಸು 25 ವರ್ಷ ಸಾ: ಗೋಕುಲ ರೋಡ ಮುರಾರ್ಜಿ ನಗರ ಹುಬ್ಬಳ್ಳಿ, ಸರವನ್ ಸಾವರಾರಾಮ ತಂದೆ ಅಶುರಾಮ್ ಅಸನೊಣ ವಯಸ್ಸು 21 ವರ್ಷ, ಹಾಲಿ ಚೆನ್ನಮ್ಮಾ ನಗರ ಇವರನ್ನು ಬಂಧಿಸಿ ಆರೋಪಿತರ ವಶದಲ್ಲಿಂದ ಒಟ್ಟು 1 ಕೆ.ಜಿ 15 ಗ್ರಾಂ ತೂಕದ ಅಫಿಮು ಮಾದಕ ವಸ್ತುವನ್ನು ವಶಪಡಿಸಿಕೊಳಲಾಗಿದ್ದು, ಈ ಅಫೀಮು ಮಾದಕ ವಸ್ತುವಿನ ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಸುಮಾರು ರೂ 20,00,000/-( 20 ಲಕ್ಷ ರೂ) ಆಗುತ್ತದೆಎಂದು ತಿಳಿದು ಬಂದಿದೆ
ಈ ಕುರಿತು ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.ಕಾರ್ಯಾಚರಣೆಯಲ್ಲಿ ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ಇ ನ್ಸಪೆಕ್ಟರ್ ಬಿ.ಆರ್.ಗಡ್ಡೇಕರ ಮತ್ತು ಅವರ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.
ಈ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿ ತಂಡಕ್ಕೆ ಬಹುಮಾನವನ್ನು ಘೊಷಿಸಿರುತ್ತಾರೆ: