ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ : ಆದಿಕವಿ ಮಹರ್ಷಿ ವಾಲ್ಮೀಕಿ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ವಾಲ್ಮೀಕಿ ಸೇರಿದಂತೆ ಮಹಾನುಪುರುಷರ ಜಯಂತಿ ಆಚರಣೆ ಸಾರ್ಥಕತೆ ಪಡೆಯುತ್ತದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗೋವಿಂದಸ್ವಾಮಿ ತಿಳಿಸಿದರು . ಪಟ್ಟಣದ ತಹಶೀಲ್ದಾರ್‌ರ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋವಿಂದಸ್ವಾಮಿ ಭಗವಂತ ಶ್ರೀರಾಮನನ್ನ ರಾಮಾಯಣದ ಮಹಾಕಾವ್ಯದ ಮೂಲಕ ಜಗತ್ತಿಗೆ ದರ್ಶನ ಮಾಡಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ರವರಿಗೆ ಸಲ್ಲುತ್ತದೆ . ಇಂತಹ ಮಹಾನ್ ವ್ಯಕ್ತಿಯ ಆಚಾರ ವಿಚಾರದಾರೆಗಳು ಇಂದಿನ ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು . ತಾಲ್ಲೂಕು ದಂಡಾಧಿಕಾರಿ ಎಸ್ ಎಂ ಶ್ರೀನಿವಾಸ್ ಮಾತನಾಡಿ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ಕೇವಲ ಮಹಾಕಾವ್ಯವಲ್ಲ ಅವುಗಳು ವಿಶ್ವಮಟ್ಟದಲ್ಲಿ ಭಾರತದ ಮಹತ್ವ ಸಾರುವ ಶ್ರೇಷ್ಠ ಗ್ರಂಥ ಎಂದು ಬಣ್ಣಿಸಿದರಲ್ಲದೆ 24 ಸಾವಿರ ಶ್ಲೋಕಗಳನ್ನು ಹೊಂದಿರುವ ರಾಮಾಯಣ ಮಹಾ ಕಾವ್ಯ ಶ್ರೀರಾಮನ ಜೀವನ ಕುರಿತು ಸಂಪೂರ್ಣ ಬೆಳಕು ಚೆಲ್ಲುತ್ತದೆ ಎಂದರು . ಇದೇ ಸಮಯದಲ್ಲಿ ಎಸ್.ಸಿ. ಎಸ್.ಟಿ. ವಿದ್ಯಾರ್ಥಿನಿಯರಿಗೆ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು . ಇದೇ ಸಂದರ್ಭದಲ್ಲಿ ಇ.ಒ. ಎಸ್ . ಆನಂದ್ , ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಶಿವಕುಮಾರ್ , ಬಿ.ಇ.ಒ , ಉಮಾದೇವಿ , ಸಿ.ಪಿ.ಐ. ರವಿಕುಮಾರ್ , ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ , ಎ.ಇ.ಇ ಎಂ ಕೆ ಹುಸೇನ್ ಸಾಬ್ , ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದನಂಜಯ್ , ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ರಾಜೇಶ್ , ವಾಲ್ಮೀಕಿ ನಾಯಕ ಸ್ವಾಭಿಮಾನ ಚಳುವಳಿಯ ಜಿಲ್ಲಾಧ್ಯಕ್ಷ ಗುಮ್ಮರೆಡ್ಡಿಪುರ ಹರೀಶ್ ನಾಯಕ್ , ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ಹೊಗಳೆಗೆರೆ ಆಂಜನೇಯಪ್ಪ , ವಾಲ್ಮೀಕಿ ಸಮುದಾಯದ ಮುಖಂಡರಾದ ಕೃಷ್ಣಪ್ಪ ಗೊಲ್ಲಪಲ್ಲಿ ಪ್ರಸನ್ನ , ರಾಮಚಂದ್ರ , ನಾಗರಾಜ್ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಜರಿದ್ದರು .