ಶ್ರೀನಿವಾಸಪುರ : ಆದಿ ಕವಿಯಂದೇ ಖ್ಯಾತರಾದ ಮಹರ್ಷಿ ವಾಲ್ಮೀಕಿ ರಾಮಾಯಣ ಕಾವ್ಯದ ಮೂಲಕ ಮನಕುಲಕ್ಕೆ ಬದುಕಿನ ಸಂದೇಶವನ್ನು ಸಾರಿದ ಸರ್ವತೋಮುಖ ಚಿಂತಕ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಬುಧವಾರ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜೋತ್ಸವ ಆಚರಣೆಗಾಗಿ ನಡೆದ ಪೂರ್ವ ಬಾವಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲಾ ಪಂಚಾಯಿತಿ ಕೇಂದ್ರಗಳಿಂದ ವಾಲ್ಮೀಕಿ ಸ್ತಬ್ದ ಚಿತ್ರವನ್ನು ಹೊತ್ತು ತಾಲೂಕಿನ ಕೇಂದ್ರಕ್ಕೆ ಬರವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿ, ಮುಂದಿನ ತಿಂಗಳು ನವಂಬರ್ ೧ ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಬೇಕಾದ ವ್ಯವಸ್ಥೆ ಮಾಡುವಂತೆಯೂ ತಹಶೀಲ್ದಾರ್ ಶರೀನ್ತಾಜ್ ರವರಿಗೆ ಸೂಚನೆ ನೀಡಿದರು. ಹಾಗು ಎಲ್ಲಾ ಇಲಾಖೆಗಳ ಕಛೇರಿಗಳಲ್ಲಿ ವಾಲ್ಮೀಕಿ ಜಯಂತಿ ಹಾಗು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಶರೀನ್ತಾಜ್, ಉಪ ತಹಶೀಲ್ದಾರ್ ಕೆ. ಎಲ್ .ಜಯರಾಮ್ ,ಶಿಸ್ತೇದಾರ್ ಬಲರಾಮಚಂದ್ರಗೌಡ ,ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್ ಆರ್ಐ ಮುನಿರೆಡ್ಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ ವಾಲ್ಮೀಕಿ ಸಮುದಾಯದ ಮುಖಂಡರಾದ ಗೌನಿಪಲ್ಲಿ ರಾಮಮೋಹನ್, ಯಮ್ಮನೂರು ನಾಗರಾಜ್, ಗುಮ್ಮರೆಡ್ಡಿ ಪುರ. ಹರೀಶ್ ನಾಯಕ್ ಹೊಗಳಗರೆ ಆಂಜಿ, ಕರ್ನಹಳ್ಳಿ ಆಂಜಿ, ಪಾತಬಲ್ಲಪಲ್ಲಿ ಅಪ್ಪಯ್ಯ ಇದ್ದರು.