ಶ್ರೀನಿವಾಸಪುರ : ಆದಿ ಜಾಂಬವ ಸಮಾಜ ತನ್ನದೇ ಆದ ಇತಿಹಾಸ, ಪರಂಪರೆ ಹಿನ್ನೆಲೆ ಇರುವಂತಹ ಸಮಾಜ. ಇಂದಿನ ಆಧುನಿಕ ಯುಗದಲ್ಲಿ ಸಾಂಸ್ಕøತಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕವಾಗಿ ಬೆಳವಣಿಗೆ ಹೊಂದುವುದು ತುಂಬಾ ಅವಶ್ಯವಿದೆ ಎಂದು ಸಮಾಜ ಸೇವಕ ಹೂವಳ್ಳಿ ಕೆ.ಅಂಬರೀಶ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಸೋಮವಾರ ಆದಿ ಜಾಂಬವ ಜಯಂತ್ಸೋವ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಮಾಲೆ ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಾದಿಗ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಪೋತ್ಸಾಹ ನೀಡಬೇಕು. ಶಿಕ್ಷಣ ಇಲ್ಲದೆ ಸಂಘಟನೆ ಹಾಗೂ ಹೋರಾಟ ಸಾಧ್ಯವಾಗುವುದಿಲ್ಲ. ಇದನ್ನು ಸಮುದಾಯದ ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.
ತಾಲೂಕಿನಲ್ಲಿನ ಸಮುದಾಯದ ಮುಖಂಡರು ಎಲ್ಲರೂ ಸಮುದಾಯದ ಏಳಿಗೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು.ಆದಿ ಜಯಂತ್ಸೋವನ್ನು ಒಗ್ಗಟ್ಟಾಗಿ ವಿಜೃಭಣೆಯಿಂದ ಆಚರಣೆ ಮಾಡೋಣ ನನ್ನ ಸಹಕಾರವು ಇರುತ್ತದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಮುಳಬಾಗಿಲು ತಾಲೂಕಿನ ಆವನಿ ಗ್ರಾಮದಲ್ಲಿನ ಆದಿ ಜಾಂಬವ ದೇವಸ್ಥಾನಕ್ಕೆ ತರೆಳಲು ಆದಿ ಜಾಂಬವ ಬಾವಚಿತ್ರವನ್ನು ಹೊತ್ತ ಬೆಳ್ಳಿರಥವು ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೆಳ್ಳಿರಥಕ್ಕೆ ಚಾಲನೆ ನೀಡಿದರು. ಆದಿ ಜಾಂಬವ ಬಾವಚಿತ್ರವನ್ನು ಹೊತ್ತ ಬೆಳ್ಳಿರಥವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ತಂಡಗಳೊಂದಿಗೆ ಆದಿ ಜಾಂಬವ ಸೇವ ಟ್ರಸ್ಟ್ ಅಧ್ಯಕ್ಷ ಸಿ.ಮುನಿಯಪ್ಪ, ಹೂಹಳ್ಳಿ ಕೃಷ್ಣಪ್ಪ ಸಮ್ಮುಖದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಆದಿ ಜಾಂಬವ ಸೇವ ಟ್ರಸ್ಟ್ನ ಗೌರವಾಧ್ಯಕ್ಷ ಡಿ.ಎಂ.ರಾಮಪ್ಪ, ಪ್ರದಾನಕಾರ್ಯದರ್ಶಿ ವೆಂಕಟರಮಣಪ್ಪ, ಖಜಾಂಚಿ ವೆಂಕಟೇಶ್, ಸುಮುದಾಯದ ಮುಖಂಡರಾದ ನಾರಾಯಣಪುರ ವೆಂಕಟೇಶ್, ಶ್ರೀನಿವಾಸ್, ಸೀತಪ್ಪ, ಸತ್ಯಣ್ಣ, ಕೊಸ್ಸಂದ್ರ ರೆಡ್ಡಪ್ಪ, ಗೋವಿಂದ , ನರಸಿಂಹ, ಪಣಸಮಾಕಲಪಲ್ಲಿ ವೆಂಕಟೇಶ್ ಇದ್ದರು.