ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
ಕೋಲಾರ : ಶಿಕ್ಷಕರು ಶಿಸ್ತು ಸಮಯ ಪಾಲನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಆದರ್ಶ ರಾಗಬೇಕು. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ ರೇವಣ ಸಿದ್ದಪ್ಪ ತಿಳಿಸಿದರು.
ತಾಲ್ಲೂಕಿನ ಹರಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಸಿ ನೆಡುವ, ಸಮವಸ್ತ್ರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸರ್ಕಾರವು ಶೈಕ್ಷಣಿಕ ಪ್ರಗತಿಗಾಗಿ 100 ದಿನಗಳ ಓದುವ ಅಭಿಯಾನ , ತರಗತಿಯಲ್ಲಿ ಇಂಗ್ಲೀಷ್ ಮಾದ್ಯಮ ಬೋದನೆ , ವಿದ್ಯಾರ್ಥಿಗಳ ಲಸಿಕೆ ಸೇರಿದಂತೆ ಕಾಲಕಾಲಕ್ಕೆ ನೀಡುವ ಯೋಜನೆಗಳ ಅನುಷ್ಠಾನಕ್ಕಾಗಿ ಶಿಕ್ಷಕರು , ಪೋಷಕರು ಶ್ರಮಿಸಬೇಕು. ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೇ ಶಿಕ್ಷಣದ ಜತೆಗೆ ಪರಿಸರ ಕಾಳಜಿಯನ್ನು ಮೈಗೂಡಿಸಿಕೊಂಡು ಸಸಿಗಳನ್ನು ನೆಟ್ಟು ಘೋಷಿಸುವಂತಾಗಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ವಿಶ್ವ ತನ್ನತ್ತ ತಿರುಗಿ ನೋಡುವಂತೆ ಸಾಧನೆ ಮಾಡಿದ ಹಲವಾರು ವಿಷಯಗಳು ನಮ್ಮ ದೇಶದಲ್ಲಿದ್ದು ಈಗಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಪಾಠ ಮಾಡಿದ ಶಿಕ್ಷಕರು ಹಾಗೂ ಪೋಷಕರು ಹೆಮ್ಮೆ ಪಡುವ ರೀತಿಯಲ್ಲಿ ಸಾಧನೆ ಮಾಡಬೇಕು ಎಂದರು.
ಶಾಲೆಯ ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡಿದ ಅವರು ನಲಿ ಕಲಿ ತರಗತಿ ಯಲ್ಲಿ ವುಡನ್ ಕಿಟ್ ಕಾರ್ಡ್ ಜೋಡಣೆ ವ್ಯವಸ್ಥೆಯನ್ನು ಇಂಗ್ಲಿಷ್ ತರಗತಿಯಲ್ಲಿ ಒಂದನೇ ತರಗತಿಗಾಗಿ ಸೃಷ್ಟಿಸಿರುವ ಉಪಯುಕ್ತ ಮಾಹಿತಿ , ಅಕ್ಷರ ದಾಸೋಹದಲ್ಲಿ ಶುಚಿ ಮತ್ತು ರುಚಿಯಾದ ಊಟದ ವ್ಯವಸ್ಥೆಯನ್ನು ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ . ನಾಗರಾಜ್ , ಉಪ ನಿರ್ದೇಶಕರ ಕಛೇರಿಯ ಅಧೀಕ್ಷಕ ಗೋವಿಂದಗೌಡ , ಶಾಲಾ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ , ಸಹ ಶಿಕ್ಷಕರುಗಳಾದ ಪಿ.ಎಂ.ಗೋವಿಂದಪ್ಪ ಕೆ.ಆರ್.ಸೋಣೇಗೌಡ , ಹೆಚ್ ಮುನಿಯಪ ,ಎಂ.ಆರ್.ಮೀನ , ಕೆ.ಮಮತ ಮತಿತರರು ಉಪಸ್ಥಿತರಿದರು.