ಕೋಲಾರ : ಲೋಕಸಭೆಗೆ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ದಿನಾಂಕ : 16/03/2024 ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆಗಳನ್ನು ನಿರ್ಭೀತವಾಗಿ, ಮುಕ್ತವಾಗಿ, ಶಾಂತಿಯುತವಾಗಿ ನಡೆಸಲು ಮತ್ತು ಈ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಕಾಪಾಡುವ ಸಲುವಾಗಿ, ಜಿಲ್ಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.
1) ಚುನಾವಣೆಯು ಘೋಷಣೆಯಾದ ದಿನಾಂಕದಿಂದ ಮತಗಳ ಎಣಿಕೆ ದಿನಾಂಕದವರೆಗೆ ಪರವಾನಗಿ ಹೊಂದಿರುವ ಆಯುಧಗಳ ಬಳಕೆಯನ್ನು ನಿಷೇಧಿಸಿ ಸಿಆರ್ಪಿಸಿ 1973 ರ ಪ್ರಕರಣ 144 ರಂತೆ ಸಾರ್ವಜನಿಕರು ಆಯುಧಗಳನ್ನು ಉಪಯೋಗಿಸುವುದನ್ನು/ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ದಿನಾಂಕ : 16/3/2024 ರಂದು ಆದೇಶ ಹೊರಡಿಸಲಾಗಿರುತ್ತದೆ.
2) ಮೇಲ್ಕಂಡ ಅವಧಿಯಲ್ಲಿ ಯಾವುದ ಆಯುಧ ಪರವಾನಗಿ ನೀಡುವುದು ನಿಷೇಧಿಸಿದೆ.
3) ಸಾರ್ವಜನಿಕರು ಪರವಾನಗಿ ವಶಪಡಿಸಿಕೊಳ್ಳಲಾಗುವುದು. ರಹಿತ ಆಯುಧಗಳನ್ನು ಹೊಂದಿದ್ದಲ್ಲಿ ಕೂಡಲೇ
4) ದಿನಾಂಕ : 16/3/2024 ರಿಂದ 6/6/2024 ರವರೆಗೆ ಸಾರ್ವಜನಿಕರ ಬಳಿ ಇರುವ ಪರವಾನಗಿಯುಕ್ತ ಆಯುಧಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಕೂಡಲೇ ಠೇವಣಿ ಮಾಡತಕ್ಕದ್ದು. ಇಲ್ಲವಾದಲ್ಲಿ ಅಂತಹ ಆಯುಧಗಳನ್ನು ವಶಪಡಿಸಿಕೊಂಡು ಪರವಾನಗಿಯನ್ನು ರದ್ದುಗೊಳಿಸಲಾಗುವುದು.
5) ಪರವಾನಗಿ ಹೊಂದಿರುವ ಆಯುಧಗಳ ಠೇವಣಿಯಿಂದ ವಿನಾಯ್ತಿ ಪಡೆಯಲು ಸಂಬಂಧಪಟ್ಟ ಪೊಲೀಸ್ ಇಲಾಖೆ ಅಥವಾ ಈ ಕಛೇರಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯತಕ್ಕದ್ದು.
6) ಭಾರತ ಚುನಾವಣಾ ಆಯೋಗವು ಸಾರ್ವಜನಿಕರು ನೇರವಾಗಿ ದೂರುಗಳನ್ನು ಸಲ್ಲಿಸಲು ಸಿ ವಿಜಿಲ್ ಆಪ್ನ್ನು ಪರಿಚಯಿಸಿದ್ದು, ಈ ಆಪ್ ಮೂಲಕ ಸಾರ್ವಜನಿಕರು ದೂರುಗಳನ್ನು ನೇರವಾಗಿ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿರುತ್ತದೆ.
7) ಯಾವುದೇ ದೂರುಗಳ ಸಂಬಂಧ ಸಾರ್ವಜನಿಕರು 24/7 1950 ಟಾಲ್ ಫ್ರೀ ನಂ. ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿರುತ್ತದೆ.
8) ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ/ ವಿಧಾನಸಭಾ ಕ್ಷೇತ್ರಗಳಲ್ಲಿನ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಸಂಚರಿಸಲು ಫೈಯಿಂಗ್ ಸ್ವಾಡ್ಗಳನ್ನು ನೇಮಿಸಲಾಗಿರುತ್ತದೆ.
9) ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಗಡಿ ಪ್ರದೇಶಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಸ್ಥಿರ ಕಣ್ಣಾವಲು ತಂಡಗಳನ್ನು ನೇಮಿಸಲಾಗಿರುತ್ತದೆ.
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯು ಉಲ್ಲಂಘನೆಯಾಗದಂತೆ ನಿಗಾ ವಹಿಸಲು ಜಾರಿಗೆ ತಂದಿರುವ ಮೇಲ್ಕಂಡ ಕ್ರಮಗಳನ್ನು ಪಾಲಿಸುವಲ್ಲಿ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ತಮ್ಮ ಸಹಕಾರವನ್ನು ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಕೋರಿದ್ದಾರೆ.