ಕುಂದಾಪುರ(ಜ.11): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬೈಂದೂರಿನಲ್ಲಿ ಜರುಗಿದ ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್-2025 ರಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುತ್ತಾರೆ.
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಆರ್ಯನ್ ಕೆ.ಪೂಜಾರಿ ಮತ್ತು ಅಥರ್ವ ಖಾರ್ವಿ ಕಟಾ ಮತ್ತು ಕುಮಿಟೆಯಲ್ಲಿ ಚಿನ್ನದ ಪದಕವನ್ನು, ದಕ್ಷ ಆರ್ ಖಾರ್ವಿ ಕಟಾ-ಪ್ರಥಮ, ಕುಮಿಟೆ-ದ್ವಿತೀಯ, ಅರ್ನೋನ್ ಡಿ.ಅಲ್ಮೆಡಾ ಕಟಾ-ದ್ವಿತೀಯ ಕುಮಿಟೆ-ಪ್ರಥಮ, ಪ್ರತೀಕ್ ಕಟಾ- ದ್ವಿತೀಯ ಕುಮಿಟೆ-ಪ್ರಥಮ, ಅಕ್ಷ ಎಸ್. ಶೇಟ್ ಕಟಾ-ದ್ವಿತೀಯ, ಕುಮಿಟೆ-ತ್ತತೀಯ, ರಿಮಿತಾ ಆರ್ ಕಟಾ- ಮತ್ತು ಕುಮಿಟೆಯಲ್ಲಿ ತ್ರತೀಯ, ವಿಶ್ರುತ್.ವಿ.ಕುಮಾರ್ ಕುಮಿಟೆ ದ್ವಿತೀಯ, ಕಟಾ-ದ್ವಿತೀಯ ಮತ್ತು ಭುವನ್.ಎಸ್.ಪೂಜಾರಿ ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ ಸ್ಥಾನಗಳನ್ನು ಪಡೆದು, ಅನೇಕ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದಿರುತ್ತಾರೆ.
ವಿಜೇತ ಬಾಲ ಕರಾಟೆ ಪಟುಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.