

ಡಿಸೆಂಬರ್ 15 ರಂದು ದೆಹಲಿಯ ಕಿಯೋದಲ್ಲಿ ನಡೆದ ಅಖಿಲ ಭಾರತ ಸಬ್ ಜೂನಿಯರ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ .ಝಾರ, ಸಬ್ ಜೂನಿಯರ್ 13 ವಯೋಮಿತಿಯ 52 ಕೆಜಿ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಪಡೆದರೆ, ಏಳನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಸಂತೋಷ್ ನಾಯ್ಕ್, ಸಬ್ ಜೂನಿಯರ್ 11 ವಯೋಮಿತಿಯ 45 ಕೆಜಿ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ಇವರಿಬ್ಬರೂ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳು ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ ಮತ್ತು ಶಿಹಾನ್ ಸಂದೀಪ್ ವಿ.ಕೆ. ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಪ್ರಶಂಸಿಸಿದ್ದಾರೆ.