ಥಲಸ್ಸೆಮಿಯಾ ದಿಂದ ಮುಕ್ತವಾಗಿ ಪುನರ್ ಜನ್ಮ ಪಡೆದ ಹೆಣ್ಣು ಮಗುಶ್ರೀ ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ವೈಸಿ ಬೀರೇಗೌಡರ ಸಾಧನೆ

ಕೋಲಾರ,ಜೂ,3: ಥಲಸ್ಸೆಮಿಯಾ ರೋಗದಿಂದ ಬಳಲುತ್ತಿದ್ದ 11 ವರ್ಷದ ಹೆಣ್ಣು ಮಗು ಸಂಪೂರ್ಣ ಗುಣಮುಖವಾದ ಸಾಧನೆಯ ಸುದ್ದಿ ಡಾ. ವೈ ಸಿ ಬೀರೇಗೌಡ ರವರ ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ದೊರಕಿದೆ.
ಈ ಹೆಣ್ಣು ಮಗು ಜನನವಾಗಿದ್ದು ಇದೇ ಆಸ್ಪತ್ರೆಯಲ್ಲಿ. ಜನಿಸಿದಾಗಲೇ ಈ ಕಂದನಲ್ಲಿ ಥೆಲಸೆಮಿಯ ಖಾಯಿಲೆಯು ಪತ್ತೆಯಾಗಿತ್ತು. ತದನಂತರ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ಬದಲಾವಣೆ ಕಾರ್ಯ ಸಹ ನಡೆಯುತ್ತಿತ್ತು. ಇದರಿಂದ ಮುಕ್ತಿ ಹೊಂದಲು ಪೋಷಕರು ಪರಿತಪಿಸುತ್ತಿದ್ದರು. ಆಗ ಡಾ.ವೈ.ಸಿ ಬೀರೇಗೌಡರವರ ಸಲಹೆಯಂತೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ (Bone marrow transplant) ಮಾಡಲಾಯಿತು. ಇದನ್ನು ಬೆಂಗಳೂರಿನ ಯಶವಂತ ಪುರದಲ್ಲಿ ಇರುವ ಪೀಪಲ್ಸ್ ಟ್ರಿ ಆಸ್ಪತ್ರೆಯ ತಜ್ಞ ವೈದ್ಯರುಗಳು ನೀಡಿದ ಚಿಕಿತ್ಸೆಯಿಂದ 11 ವರ್ಷದ ಹೆಣ್ಣುಮಗಳು ಸಂಪೂರ್ಣವಾಗಿ ಗುಣಮುಖವಾದ ಮಗು ಎಲ್ಲರಂತೆ ಆಗಿದೆ. ಪೋಷಕರು ಇದರಿಂದ ಬಹಳ ಸಂತೋಷಗೊಂಡಿದ್ದಾರೆ.
ಈ ರೀತಿಯ ಘಟನೆಗಳು ಜರುಗಿದಾಗ ಮಕ್ಕಳಲ್ಲಿ ಈ ರೀತಿಯ ನ್ಯೂನತೆಗಳು ಕಂಡು ಬಂದಾಗ ಪೆÇೀಷಕರು ಕುಗ್ಗದೆ ಸರಿಯಾದ ಚಿಕಿತ್ಸಾ ಕ್ರಮದಿಂದ ಪುನರ್ ಜೀವನ ಪಡೆಯಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಈ ಕಾಯಿಲೆಗೆ ಒಳಪಡುವ ಯಾವುದೇ ವ್ಯಕ್ತಿಯಾಗಲಿ ಮೂರು ತಿಂಗಳಿಗೊಮ್ಮೆ ರಕ್ತವನ್ನ ಬದಲಾಯಿಸಿಕೊಳ್ಳುತ್ತಿರಬೇಕು. ಇದು ಪೋಷಕರಿಗೂ ಹೊರೆಯಾಗುತ್ತದೆ. ಅಲ್ಲದೆ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಇಂತಹ ಕಾಯಿಲೆ ಬಂದಾಗ ಸೂಕ್ತ ಸಂದರ್ಭದಲ್ಲಿ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಅಥವಾ ಸಲಹೆ ಪಡೆದುಕೊಂಡಾಗ ಥಲಸ್ಸಮಿಯಾ ಕಾಯಿಲೆಯಿಂದ ಹೊರಬರಲು ಸಾಧ್ಯವಾಗುತ್ತದೆ.
ಥಲಸ್ಸಮಿಯಾ ಕಾಯಿಲೆಯಿಂದ ಗುಣಮುಖರಾದ ನಂತರ ಮಗು ನಗುಮುಖದೊಂದಿಗೆ ಎಲ್ಲರೊಂದಿಗೂ ಸಂತೋಷದಿಂದ ಇದ್ದಾಳೆ. ಇದೀಗ ಆ ಮಗು ಎಲ್ಕರಂತೆ ಶಾಲೆಗೆ ಹೋಗುತ್ತಿದ್ದಾಳೆ. ಇದನ್ನ ನೋಡಿ ಪೋಷಕರು ಕಣ್ಣು ತುಂಬಿಸಿಕೊಂಡು ಡಾ.ವೈ.ಸಿ.ಬೀರೇಗೌಡರು ಹಾಗೂ ಅವರ ಸ್ನೇಹಿತ ವೈದ್ಯರ ಸೇವೆಯನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ರೇಡಿಯಾಲಿಜಿಸ್ಟ್ ಮಂಜುನಾಥ ಅವರ ಸಹಕಾರವೂ ಇದೆ.
ಥಲಸ್ಸಮಿಯಾ.. ಎಂದರೆ ಇದೊಂದು ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದೊಂದು ಅನುವಂಶಿಕವಾಗಿ ತಂದೆ-ತಾಯಿಯಿಂದ ಮಕ್ಕಳಿಗೆ ಬರುವ ರಕ್ತದ ಕಾಯಿಲೆಯಾಗಿದೆ. ಈ ರೋಗದ ಪರಿಣಾಮದಿಂದ ಮಗುವಿನ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆ ಸರಿಯಾಗಿ ಆಗದೆ ಈ ಜೀವಕೋಶಗಳ ಜೀವಿತಾವಧಿಯೂ ಬಹಳ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಮಕ್ಕಳಿಗೆ ಪ್ರತಿ 21 ದಿನಗಳ ನಂತರ ಕನಿಷ್ಠ ಒಂದು ಯೂನಿಟ್ ರಕ್ತದ ಅಗತ್ಯವಿರುತ್ತದೆ. ಆದರೆ ಈ ಕಾಯಿಲೆ ಇರುವ ಮಕ್ಕಳು ಬಹಳ ದಿನ ಬದುಕುವುದಿಲ್ಲ. ಕೆಲವರು ಬದುಕುಳಿದರೂ, ಅವರು ಆಗಾಗ್ಗೆ ಕೆಲವು ಕಾಯಿಲೆಗಳಿಂದ ಬಳಲುತ್ತಾರೆ. ಹಾಗಾಗಿ ಅವರಿಗೆ ಬೇರೆ ಮಕ್ಕಳು ಬೆಳೆದಂತೆ ಸಂತೋಷದಿಂದ ಬಾಲ್ಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ.ಥಲಸ್ಸೆಮಿಯಾ ಹೊಂದಿರುವ ವ್ಯಕ್ತಿಗಳು ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ, ಮಸುಕಾದ ಚರ್ಮ ಮತ್ತು ಕಾಮಾಲೆಯಂತಹ ರಕ್ತಹೀನತೆಯ ರೋಗಲಕ್ಷಣಗಳನ್ನು ಅನುಭವಿಸಬಹುದು. ತೀವ್ರ ಪ್ರಕರಣಗಳಲ್ಲಿ, ಥಲಸ್ಸೆಮಿಯಾ ಮೂಳೆ ವಿರೂಪಗೊಳ್ಳುವುದು, ಹಿಗ್ಗಿರುವ ಗುಲ್ಮ ಮತ್ತು ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು. ಈ ರೋಗನಿರ್ಣಯವು ಕ್ಲಿನಿಕಲ್ ರೋಗಲಕ್ಷಣಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳನ್ನು ಆಧರಿಸಿದೆ. ಇದು ಎಚ್ಪಿಎಲ್ಸಿ ಅಥವಾ ಎಲೆಕ್ಟ್ರೋಫೆÇೀರೆಸಿಸ್ನಲ್ಲಿ ಎಚ್ಬಿಎಫ್ (ಭ್ರೂಣದ ಹಿಮೋಗ್ಲೋಬಿನ್) ಅನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಕೆ ಡಿ ಎ ಪಿ ಕೋಲಾರ ಜಿಲ್ಲೆಯ ಅಧ್ಯಕ್ಷರಾದ ಡಾ.ವೈ ಸಿ ಬೀರೇಗೌಡ ರವರ ಉದ್ದೇಶ ಥೆಲಸೆಮಿಯ ಕುರಿತಾಗಿ ಕೆಡಿಎಪಿ ವತಿಯಿಂದ ಈಗಾಗಲೇ ಈ ಕುರಿತ ಮಾಹಿತಿ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸಾ ವಿಧಾನದಿಂದ ಈ ಕಾಯಿಲೆನ ಸಂಪೂರ್ಣವಾಗಿ ಗುಣಮುಖಗೊಳಿಸಬಹುದು ಎಂದು ಈ ಘಟನೆಯಿಂದ ತಿಳಿಯಬಹುದಾಗಿದೆ ವೈದ್ಯಕೀಯ ಲೋಕದ ಅಚ್ಚರಿಗಳಲ್ಲಿ ಇದು ಕೂಡ ಒಂದಾಗಿದೆ.