ಕೆಜಿಎಫ್ : ಮೇ. 17 ಸಿಇಎನ್ ಸೈಬರ್ ಕ್ರೈಂ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ರೂ: 10 ಲಕ್ಷ (ಹತ್ತು ಲಕ್ಷ ರೂಪಾಯಿಗಳು) ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಗಾರಪೇಟೆ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಾಕ್ಷಣ ಡಿವೈಎಸ್ಪಿ ಎಸ್.ಪಾಂಡುರಂಗ ನೇತೃತ್ವದಲ್ಲಿ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ ಮತ್ತು ಸಿಬ್ಬಂದಿಗಳು ಕೂಡಲೇ ಕಾರ್ಯಾಚರಣೆ ನಡೆಸಿ, ಬಂಗಾರಪೇಟೆ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಿಹಾರ ರಾಜ್ಯ ಬಕ್ಸಾರ್ ಜಿಲ್ಲೆ ಪುರಾವ ಗ್ರಾಮದ ಜಿತೇಂದ್ರಕುಮಾರ್ (30 ವರ್ಷ) ಎಂಬಾತನನ್ನು ಬಂಧಿಸಿ, ಆತನಿಂದ ಬಂಗಾರಪೇಟೆ ಮತ್ತು ನರಸಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಗಿರಾಕಿಗಳಿಗೆ ಗಾಂಜಾವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ರೂ: 10,00,000/- ಮೌಲ್ಯದ 05 ಕೆ.ಜಿ 175 ಗ್ರಾಂ ತೂಕದ ಒಣ ಗಾಂಜಾ ಮತ್ತು 04 ಕೆ.ಜಿ 730 ಗ್ರಾಂ ತೂಕದ ಗಾಂಜಾ ಭಾಂಗ್ ಚಾಪ್ಲೆಟ್ಗಳು ಮತ್ತು ಕೃತ್ಯಕ್ಕೆ ಬಳಸಿದ ಒಂದು ಟಿವಿಎಸ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ.
ಬಂಧಿತ ಆರೋಪಿ ಜಿತೇಂದ್ರಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಸಿಇಎನ್ ಸೈಬರ್ ಕೈಂ ಪೊಲೀಸರು ಪ್ರಕರಣದ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಾಂಜಾ ಆರೋಪಿಯನ್ನು ಬಂಧಿಸಿ, ರೂ: 10 ಲಕ್ಷ ಬೆಲೆಬಾಳುವ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಡಿವೈಎಸ್ಪಿ ಎಸ್.ಪಾಂಡುರಂಗ ನೇತೃತ್ವದಲ್ಲಿ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ, ಪಿಎಸ್ಐ ಶೋಭಾ ಮತ್ತು ಸಿಬ್ಬಂದಿಗಳಾದ ರಘುನಾಥ್, ಶೇಷಾದ್ರಿ, ಚೇತನ್ ಕುಮಾರ್, ಮಣಿಕಂಠ, ಚಾಲಕ ಶರಣ ಬಸಪ್ಪ ಅವರುಗಳ ಕಾರ್ಯವೈಖರಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.