ಶ್ರೀನಿವಾಸಪುರ : ಗೌನಿಪಲ್ಲಿ ಸತ್ಯಸಾಯಿ ಪ್ರೌಢಶಾಲಾವರಣದಲ್ಲಿ ಬುಧವಾರ ಶಾಲಾವರಣದಲ್ಲಿ ಇದ್ದ ಕೆಇಬಿ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡುತ್ತಿರುವ ಸಮಯದಲ್ಲಿ ಶಾಲೆಯ ವಿದ್ಯಾರ್ಥಿಗಳು ಶಾಲಾವರಣದಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದ ವೇಳೆ ಎರಡು ಕಂಬಗಳು ಮುರಿದ ಪರಿಣಾಮ ಶಾಲೆಯ 3 ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಮರಗಳ ಕೊಂಬೆಗಳನ್ನು ಕಡಿಯುತ್ತಿರುವ ವೇಳೆ ಶಾಲೆಯ 7 ನೇತರಗತಿ ವಿದ್ಯಾರ್ಥಿಗಳಾದ ದಿನೇಶ್ , ಭರತ್ , ಚರಣ್ ಗಾಯಗಳಾಗಿವೆ . ಕರಿಪಲ್ಲಿ ಗ್ರಾಮದ ದಿನೇಶ್ ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಗೆ ರವಾನಿಸಲಾಗಿದೆ . ಬಚ್ಚಿರೆಡ್ಡಿಗಾರಿಪಲ್ಲಿಯ ಗ್ರಾಮದ ಭರತ್ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಆಸತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು , ಬಚ್ಚಿರೆಡ್ಡಿಗಾರಿಪಲ್ಲಿ ಚರಣ್‌ಗೆ ಕಾಲಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಈ ಘಟನೆಗೆ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರಲ್ಲಿ ಮಾತು ಕೇಳಿಬರುತ್ತಿದೆ . ಸ್ಥಳಕ್ಕೆ ಶ್ರೀನಿವಾಸಪುರ ಎಇಇ ರಾಮತೀರ್ಥ , ಗೌನಿಪಲ್ಲಿ ವಲಯದ ಸರ್ಕಲ್ ಇನ್ಸಪೆಕ್ಟರ್ ಜಯಾನಂದ ಹಾಗೂ ಪಿಎಸ್‌ಐ ಮುನಿರತ್ನ ಸ್ಥಳಕ್ಕೆ ಬೇಟಿ ನೀಡಿ ಘಟನೆಯ ಪರಿಶೀಲಿಸಿದರು . ಗೌನಿಪಲ್ಲಿ ಠಾಣೆಯಲ್ಲಿ ಕೇಸು ದಾಖಲಾಗಿದ್ದು , ತನಿಖೆ ನಡೆಸುತ್ತಿದ್ದಾರೆ .