JANANUDI.COM NETWORK
ರಿಯಾದ್ : ವಿದೇಶಗಳಿ೦ದ ಬರುವ ಜನರಿಗೆ ಸೌದಿ ಅರೇಬಿಯಾಕ್ಕೆ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇನ್ನು ಮು೦ದೆ ಲಸಿಕ ಪ್ರಮಾಣಪತ್ರದ ಅಗತ್ಯವಿಲ್ಲ ಎ೦ದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ದೇಶದಲ್ಲಿ ಲಸಿಕೆ ಪ್ರಮಾಣ ಶೇ.99ರಷ್ಟಿದ್ದು, ಪಾಸಿಟಿವಿಟಿ ದರ ಶೇ.4ಕ್ಕಿ೦ತ ಕಡಿಮ ಇರುವುದರಿಂದ ನಿರ್ಬಂಧಗಳಲ್ಲಿ ಸಡಿಲಿಕೆ ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾವನ್ನು ಪ್ರವೇಶಿಸಲು ಇನ್ನು ಮುಂದೆ ಲಸಿಕೆ ಪ್ರಮಾಣಪತ್ರದ ಅಗತ್ಯವಿಲ್ಲ, ಕೋವಿಡ್ -19 ಪರೀಕ್ಷೆ ಅಥವಾ ಯಾವುದೇ ರೀತಿಯ ಕ್ವಾರ್ಟಾಯ್ನ್ ಇಲ್ಲ ಎ೦ಬುದು ಮೂರು ಹೊಸ ಅಧಿಕೃತ ಘೋಷಣೆಗಳಾಗಿವೆ. ಅದೇ ಸಮಯದಲ್ಲಿ, ಮುಖಿಮ್ ನೋಂದಣಿಯನ್ನು ಕಡ್ಮಾಯಗೊಳಿಸಲಾಗಿದೆ.