JANANUDI.COM NETWORK

ಕುಂದಾಪುರ,ಜೂ.26: ಕುಂದಾಪುರ ಹೋಲಿ ರೋಜರಿ ಚರ್ಚಿನ “ಯಂಗ್ ಕಥೊಲಿಕ್ ಸ್ಟೂಡೆಂಟ್” ಸಂಘದಿಂದ ಚುನಾಯಿತರಾದ ಪದಾಧಿಕಾರಿಗಳ ಪ್ರತಿಜ್ನಾ ವಿಧಿ ಸ್ವೀಕಾರ ಕಾರ್ಯಕ್ರಮವು ಭಾನುವಾರದ (26-6-22) ಬಲಿದಾನದ ಬಳಿಕ ನಡೆಯಿತು. ಈ ಕಾರ್ಯಕ್ರಮವನ್ನು ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಪ್ರಜ್ವಲ್ ಪಾಯ್ಸ್, ಕಾರ್ಯದರ್ಶಿಯಾಗಿ ವೆನೀಶಾ ಡಿಸೋಜಾ, ಉಪಾಧ್ಯಕ್ಷರಾಗಿ ಪ್ರೀತೆಶ್ ಕರ್ವಾಲ್ಲೊ, ಬಾಲಾಕಿಯ ವಿಭಾಗದ ಅಧ್ಯಕ್ಷೆಯಾಗಿ ಸೊನಾಲ್ ಕ್ರಾಸ್ತಾ, ಖಜಾಂಚಿಯಾಗಿ ಎಲ್ರಿಕ್ ಕ್ರಾಸ್ತಾ, ಸಹಖಜಾಂಚಿಯಾಗಿ ಕ್ಲೆರೀಷಾ ಸಿಕ್ವೇರಾ, ಕ್ರೀಡಾ ಕಾರ್ಯದರ್ಶಿಯಾಗಿ ರೈಸನ್ ಡಿಸೋಜಾ, ವರದಿಗಾರ್ತಿಯಾಗಿ ಡಾಯ್ನ್ ಡಿಸೋಜಾ ಪ್ರತಿಜ್ನಾ ಸ್ವೀಕಾರ ಕೈಗೊಂಡರು. ಈ ಸಂದರ್ಭದಲ್ಲಿ ಸಂಘದ ಸಚೇತಕಿ ಶೈಲಾ ಡಿಆಲ್ಮೇಡಾ ಉಪಸ್ಥಿತರಿದ್ದರು.



