ಗಾಂಧಿನಗರ: ಬಿಸಿಲಿನ ತಾಪಕ್ಕೆ ಬೇಸತ್ತು ಗುಜರಾತಿನ ವಡೋದರಾ ಸಂಚಾರಿ ಪೊಲೀಸರು ಎಸಿ ಹೆಲ್ಮೆಟ್ನ್ನು ಕಂಡುಕೊಂಡಿದ್ದಾರೆ.. ಗುಜರಾತ್ ಪೊಲೀಸ್ ಇಲಾಖೆ ಸಂಚಾರಿ ಪೊಲೀಸರಿಗೆ ವಿಶೇಷ ಹವಾನಿಯಂತ್ರಿತ ಹೆಲ್ಮೆಟ್ ಗಳನ್ನು ಪರಿಚಯಿಸಿದೆ.
ಈ ಹೆಲ್ಮೆಟ್ 40-42 ಡಿಗ್ರಿ ಸೆಲ್ಸಿಯಸ್ನ ಗರಿಷ್ಠ ತಾಪಮಾನದಲ್ಲಿ ಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ಸಂಚಾರಿ ಪೊಲೀಸರಿಗೆ ತಣ್ಣನೆಯ ಅನುಭವ ನೀಡಲಿದೆ. ಈ ಹೆಲ್ಮೆಟ್ ಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಲು ಮುಖವಾಡ ಮತ್ತು ಇದಕ್ಕೆ ಚಾರ್ಜಿಂಗ್ ವ್ಯವಸ್ಥೆ ಇದ್ದು. ಪೂರ್ಣ ಚಾರ್ಜ್ನಲ್ಲಿ ಈ ಹೆಲ್ಕೆಟ್ಗಳು 8 ಗಂಟೆಗಳವರೆಗೆ ಕೆಲಸ ಮಾಡಲಿದೆ.
ಬಿಸಿಲಿನ ಹೊಡೆತಕ್ಕೆ ಸಿಕ್ಕು ಅಧಿಕಾರಿಗಳು ರಸ್ತೆಯಲ್ಲೇ ಮೂರ್ಛೆ ಹೋದ ನಿದರ್ಶನಗಳಿವೆ. ಇದರಿಂದಾಗಿ ಈ ಹೆಲ್ಮೆಟ್ಗಳನ್ನು ಪ್ರಾಯೋಗಿಕವಾಗಿ ನೀಡಲಾಗಿದೆ. ಇದು ಸಂಚಾರಿ ಪೊಲೀಸ್ ಸಿಬ್ಬಂದಿ, ತಮ್ಮಕರ್ತವ್ಯ ನಿರ್ವಹಣೆಯನ್ನು ಸರಾಗವಾಗಿ ಮಾಡಲು ಸಾಧ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ.
ಪೊಲೀಸ್ ಇಲಾಖೆಯ ಈ ನಡೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ. ಬಳಕೆದಾರರು ನಮ್ಮರಾಜ್ಯದಲ್ಲೂ ಪೊಲೀಸ್
ಇಲಾಖೆಯು ಇದೇ ರೀತಿಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಟ್ರಾಫಿಕ್ ವಿಭಾಗದ ಡಿಸಿಪಿ ಆರತಿ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, ನಗರದ ಆರು ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ಪ್ರಾಯೋಗಿಕವಾಗಿ ಹೆಲ್ಮೆಟ್ಗಳನ್ನು ನೀಡಲಾಗಿದ್ದು ಅದರ ಫಲಿತಾಂಶವೂ ಸಾಕಷ್ಟು ಯಶಸ್ವಿಯಾಗಿದೆ. ಶೀಘ್ರದಲ್ಲೇ ಈ ಎಸಿ ಹೆಲ್ಮೆಟ್ ನಗರದ ಇತರ ಭಾಗಗಳಲ್ಲಿ ನಿಯೋಜಿಸಲಾದ ಟ್ರಾಫಿಕ್ ಪೊಲೀಸರಿಗೂ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.