ಭಾರತ ಸೇನೆಯಲ್ಲಿ ಯುವಕರಿಗೆ ವಿಪುಲ ಅವಕಾಶ -ಡಾ| ಹೆರಾಲ್ಡ್ ಐವನ್ ಮೋನಿಸ್


ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ 23ನೇ ಕಾರ್ಗಿಲ್ ವಿಜಯ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು.
ನಮ್ಮ ಭಾರತಾಂಬೆಯ ರಕ್ಷಕರು ವೀರಯೋಧರರು. ಆಂತರಿಕ ಮತ್ತು ಬಾಹ್ಯ ರಾಷ್ಟ್ರ ಭದ್ರತೆಯನ್ನು ಯಶಸ್ವಿಯಾಗಿ ಕಾಪಾಡಲು ಸೇನಾ ತನ ನೆಲೆಯಲ್ಲಿ ತನ್ನ ಹದ್ದಿನ ಕಣ್ಣಿನ ಹಾಗೆ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ಸೈನಿಕರ ಸಾಹಸ ಮತ್ತು ಪ್ರಾಣ ತ್ಯಾಗ ಅವಿ ಸ್ಮರಣೀಯ. ಇಂದು ಯುವಕರು ನಮ್ಮ ದೇಶದ ಬೆಲೆ ಕಟ್ಟಲಾಗದ ಆಸ್ತಿ, ಹಾಗೂ ಶಿಸ್ತು ಬದ್ಧವಾದ ಜೀವನ ಅವರದಾಗಿದೆ. ದೇಶಕ್ಕೆ ಬಹು ದೊಡ್ದ ಕೊಡುಗೆ ಇವರ ಸೇವೆಯಲ್ಲಿ ಅವರ ಮನೆಯವರ ತ್ಯಾಗವು ಮಹತ್ವಪೂರ್ಣವಾದುದು. ಯಶಸ್ವಿನ ಉಪಾದಿಯನ್ನು ಪಡೆಯಲು ಯುವಕರಿಗೆ ಇಂದು ಸೇನಾ ನೆಲೆಯಲ್ಲಿ ಅನೇಕ ಅವಕಾಶಗಳಿವೆ ,ಉದಾಹರಣೆಗೆ ಎನ್.ಸಿ.ಸಿ ಮಾರ್ಗಗಳಿಂದ ದೇಶ ಸೇವೆ ಮಾಡಲು ಕೆಡೆಟ್ಗಳು ಮುಂದಾಗಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ,ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಭಾವಚಿತ್ರಕ್ಕೆ ನುಡಿ ನಮನ ಸಲ್ಲಿಸಿದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿಸಿದರು ಮತ್ತು ಶುಭ ಹಾರೈಸಿದರು.

ಆಕ್ರಮಣಕಾರಿ ಶತ್ರುಗಳ ವಿರುದ್ಧ ವಿಜಯ ಸಾಧಿಸಲು ಮುಂಚೂಣಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರ ಜೀವನವನ್ನು ಗೌರವಿಸಲು ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಜುಲೈ 26 ರಂದು ಭಾರತೀಯ ಸೇನೆಯು ಪಾಕಿಸ್ತಾನದ ಸೇನೆಯು ಆಕ್ರಮಿಸಿಕೊಂಡಿದ್ದ ಎಲ್ಲಾ ಭಾರತೀಯ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತು. ಅಂದಿನಿಂದ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರ ಶ್ರಮ ಮತ್ತು ತ್ಯಾಗವನ್ನು ಸ್ಮರಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಜೂನಿಯರ್ ಅಂಡರ್ ಆಫೀಸರ್ ಹರ್ಷಿತ ಈ ದಿನದ ಪ್ರಾಮುಖ್ಯತೆಯನ್ನು ಮತ್ತು ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮೂಡಬಿದ್ರೆಯ ಮಹಾವೀರ ಕಾಲೇಜಿನಲ್ಲಿ ನಡೆದ ಥಾಲ್ ಸೈನಿಕ್ ತರಬೇತಿಯಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಲೇಜಿನ ಕಿತಿ೯ಯನ್ನು ಉಜ್ವಲ ಗೊಳಿಸಿದ ವಿಜೇತರಾದ ಕೆಡೆಟ್ ಮೋಹಿತ ಎನ್ ಸಾಲಿಯಾನ, ಆಶಿಶ್ ಪ್ರಸಾದ್, ಧೀರಜ್ ಆಚಾರ್ಯ, ಪೂಜಾ, ವಾಣಿ ಯೂ ಸಾಲಿಯಾನ್, ಹುಲಿದ್ರ ಖುಷಿ, ಸೋನಾಲಿ ಕುಲಾಲ್, ಶೆಟ್ಟಿಗಾರ್ ಹೇಮಶ್ರೀ ಸುದರ್ಶನ್, ಆಶಿಕಾ, ಸುಶ್ಮಿತಾ ಎಸ್ ಅಮೀನ್, ಪ್ರಿಯಾಂಕ ಇವರನ್ನುಅಭಿನಂದಿಸಲಾಯಿತು.

ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎಲ್ಲಾ ಕೆಡೆಟ್‌ಗಳು ಉಪಸ್ಥಿತರಿದ್ದರು.ಕೆಡೆಟ್ ಅಲಿಸ್ಟರ್ ಸುಜಾಯ್ ಡಿಸೋಜಾ ಮತ್ತು ಅರುಣ್ ಸಹಕರಿಸಿದರು. ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ ಸರ್ವರನ್ನೂ ಸ್ವಾಗತಿಸಿ , ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ ವಂದಿಸಿದರು. ಕೆಡೆಟ್ ವರ್ಷಿತ ಮತ್ತು ಬಳಗ ಪ್ರಾರ್ಥಿಸಿ, ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್ ಕಾರ್ಯಕ್ರಮವನ್ನು ನಿರೂಪಿಸಿದರು.