ಮೋದಿ ಬಗ್ಗೆ ಯು.ಎಸ್. ’ಮಾರ್ನಿಂಗ್ ಕನ್ಸಲ್ಟ್’ ನ ಗುಪ್ತಚರ ವರದಿ

JANANUDI.COM NETWORK

ನವದೆಹಲಿ ಮೇ.21: ಕರೋನಾ ವೈರಸ್ ಎರಡನೇ ಅಲೆಯನ್ನು ಎದುರಿಸಲು ದೇಶವು ಹೈರಾಣದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಕೆಳ ಮಟ್ಟಕ್ಕೆ ಹೋಗಿದೆಯೆಂದು ಯು.ಎಸ್. ಸಮೀಕ್ಷೆಯೊಂದು ಧ್ರಡ ಪಡಿಸಿದೆ.
ಮೂರು ದಶಕಗಳ ನಂತರ ಅತಿ ದೊಡ್ಡ ಜಯವನ್ನು ದಾಖಲಿಸಿ 2014 ರಲ್ಲಿ ಅಧಿಕಾರಕ್ಕೆ ಬಂದು ಇನ್ನೊಮ್ಮೆ 2019 ರಲ್ಲಿ ಮರು ಆಯ್ಕೆಯಾದ ನರೇಂದ್ರ ಮೋದಿಯು, ಪ್ರಬಲ ರಾಷ್ಟ್ರೀಯ ನಾಯಕ ಸ್ಥಾನವನ್ನು ಪಡೆದುಕೊಂಡಿದ್ದರು.
ಆದರೆ ಭಾರತದ ಕೋವಿಡ್ -19 ಪ್ರಕರಣವು ಈ ವಾರದಲ್ಲಿ 25 ಮಿಲಿಯನ್ ದಾಟಿದ್ದು, ಇದು ಭಾರತದಲ್ಲಿ ಕೋವಿಡ್ ಎರಡನೇಯ ಅಲೆಗೆ ಸಿದ್ಧತೆಯ ಕೊರತೆ ಮತ್ತು ನಿಭಾವಣೆಯ ಲೋಪದಿಂದ ಮೋದಿಯ ಜನಪ್ರಿಯತೆ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಜನ ಪ್ರಿಯತೆ ಗುಂದಿದೆಯೆಂದು ಗುಪ್ತಚರ ಕಂಪೆನಿ ’ಮಾರ್ನಿಂಗ್ ಕನ್ಸಲ್ಟ್’ ನ ಯುಎಸ್ ಡೇಟಾ ತಿಳಿಸಿದೆ.
ಹಲವು ಜಾಗತಿಕ ನಾಯಕರ ಪಟ್ಟಿಯಲ್ಲಿ ಈ ವಾರ ನರೇಂದ್ರ ಮೋದಿಯವರ ಒಟ್ಟಾರೆ ರೇಟಿಂಗ್ 63% ರಷ್ಟಿದ್ದು, ಇದು ಆಗಸ್ಟ್ 2019 ರಲ್ಲಿ ಯುಎಸ್ ಸಂಸ್ಥೆಯು ಅವರ ಜನಪ್ರಿಯತೆಯನ್ನು ಪತ್ತೆ ಹಚ್ಚಲು ಪ್ರಾರಂಭಿಸಿದ ನಂತರದ ಕನಿಷ್ಠ ಮಟ್ಟದು’ ಎಂದು ಮೇಲೆ ಹೇಳಿದ ಯುಎಸ್ ಗುಪ್ತಚರ ಸಂಸ್ಥೆ ಹೇಳಿದೆ.