ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ, ಹಸಿರು ಶಾಲು ಹಾಗೂ ರೈತ ಮುಖಂಡರ ಬಗ್ಗೆ. ಹಗುರವಾಗಿ ಮಾತನಾಡಿರುವ ಸಂಸದರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಗೇಟ್ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ ಇತ್ತೀಚಿಗೆ ಶಾಗೂತ್ತೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಹಸಿರು ಟವಾಲ್ ಬಗ್ಗೆ ಸಂಸದರಾದ ಎಸ್. ಮುನಿಸ್ವಾಮಿ ಆರೋಪ ಮಾಡಿರುವುದು ಸರಿಯಲ್ಲ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ಇವೆ ಅದರ ಬಗ್ಗೆ ಮಾತನಾಡದೆ ಪ್ರಚಾರಕ್ಕಾಗಿ ರೈತರ ಬಗ್ಗೆ ಅವಹೇಳನ ಹೇಳಿಕೆ ನೀಡಿರುವುದು ಖಂಡನೀಯ ನಿಮ್ಮ ವಿಚಾರಗಳು ನಮಗೆ ಗೊತ್ತಿದೆ ಯಾರ ಹೆಸರಿನಲ್ಲಿ ನೀವು ಎಲ್ಲಿ ಅಕ್ರಮವಾಗಿ ಅಸ್ತಿಯನ್ನು ಮಾಡಿದ್ದೀರಿ ಕಲ್ಲುಕ್ಯಾರಿ, ಯರ್ರಗೋಳ್ ಸಮೀಪ ರೆಸಾರ್ಟ್ ನಿರ್ಮಿಸುವುದು ಇನ್ನಿತರ ವಿಚಾರಗಳ ಬಗ್ಗೆ ನಮಗೆ ಗೊತ್ತಿದೆ. ಇದರ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾ ಕೂಡಲೆ ಕ್ಷೇಮೆಯಾಚಿಸಬೇಕೆಂದು ಅಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಎನ್. ಜಿ. ಶ್ರೀರಾಮರೆಡ್ಡಿ ಮಾತನಾಡಿ ರೈತ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಇವರಿಗೆ ಶೋಬೆ ತರವುದಿಲ್ಲ. ಹಸಿರು ಸಾಲು ಹಾಕಿಕೊಳ್ಳವವರು ರೈತರು ಅಲ್ಲ ಹೋರಾಟಗಾರರು ಹೊಲಗಳಿಗೆ ಹೋಗುವುದಿಲ್ಲ, ಕೆಲಸ ಮಾಡುವುದಿಲ್ಲ. ಕಛೇರಿಗೆಳಿಗೆ ಅಲೆದು ವೈಯುಕ್ತಿಕ ಕೆಲಸ ಮಾಡಿಕೊಳ್ಳುವುದರಲ್ಲಿ ನಿರತರಾಗಿತ್ತಾರೆ. ಎಂದಿರುವುದು ಖಂಡನೀಯ ಎಂದು ಕಿಡಿ ಕಾರಿದರು.
ನಮ್ಮ ರೈತ ಸಂಘಕ್ಕೆ ಇತಿಹಾಸ ಇದೆ 80 ರ ದಶಕದಿಂದ ನಮ್ಮ ಸಂಘ ಹೋರಾಟಗಳನ್ನು ಮಾಡಿಕೊಂಡು ರೈತರ ಸಮಸ್ಯೆಗಳ ಬಗ್ಗೆ ಹೋರಾಟಗಳನ್ನು ಮಾಡಿ ಬಂದಿದ್ದೇವೆ. ಸಂಸದರು ಸರಿಯಾಗಿ ಇತಿಹಾಸ ತಿಳಿದು ಮಾತನಾಡಲೀ ನಾವು ವ್ಯವಸಾಯ ಮಾಡಿಕೊಂಡೆ ಬಂದಿದ್ದೇವೆ. ಸಂದೇಹ ಇದ್ದರೆ ನಮ್ಮ ತೋಟಕ್ಕೆ ಬನ್ನಿ ಎಂದು ಸವಾಲನ್ನು ಹಾಕುತ್ತಾ ಸಂಸದರು ರೈತರಿಗೆ ಮತ್ತು ಸಂಘಕ್ಕೆ ಅವಮಾನದ ರೀತಿಯಲ್ಲಿ ಮಾತನಾಡಿದ್ದಾರೆ. ಕೂಡಲೆ ಇವರನ್ನು ಪಕ್ಷದಿಂದ ಉಚ್ಚಾಟಿಸಿ ಇವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು
ಇದೇ ಸಮಯದಲ್ಲಿ ಉಪತಹಶೀಲ್ದಾರ್‍ಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಪೆತ್ತಾಂಡ್ಲಾಹಳ್ಳಿ ಪಿ.ಎಸ್. ಗಂಗಾಧರ್, ಕಾರ್ಯದರ್ಶಿ ಹೆಬ್ಬಟ ರಮೇಶ್, ಪದಾಧಿಕಾರಿಗಳಾದ ಚಲ್ದಿಗಾನಹಳ್ಳಿ ಶ್ರೀಧರ್, ದೇವರಾಜ್, ರಾಜಣ್ಣ, ವೀರಪ್ಪರೆಡ್ಡಿ, ಪ್ರಧಾನ ಕಾರ್ಯದರ್ಶಿ ಅಸ್ಲಾಂ ಪಾಷಾ, ಸ ಕಾರ್ಯದರ್ಶಿ ರಾಮಕೃಷ್ಣ ಇನ್ನಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಸಂಸದರೇ ಈ ದೇಶಕ್ಕೆ ಅನ್ನ ನೀಡುವ ರೈತನ ಬಗ್ಗೆ ಮಾತನಾಡುವ ಹಕ್ಕು ನಿಮಗೆ ಇಲ್ಲ ದೆಹಲಿಯಲ್ಲಿ ನಿರಂತರವಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಸತ್‍ನಲ್ಲಿ ಒಂದು ಬಾರಿಯಾದರು ದ್ವನಿಯತ್ತಿದ್ದೀರಾ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮನೆಗೆ ಹಾಲು ಕೂಡುವ ರೈತರು ನಾವು ನಮ್ಮ ಬಗ್ಗೆ ಮಾತನಾಡುವ ಹಕ್ಕು ನಿಮಗೆ ಇಲ್ಲ ಕೇಂದ್ರ ಸರ್ಕಾರ ರೈತ ವಿರೋದಿ ಕಾಯೆಗಳನ್ನು ಜಾರಿಗೆ ತಂದು ರೈತರು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಇದರ ಬಗ್ಗೆ ನಿಮಗೆ ಅರಿವು ಇದಿಯೇ ವಿನಾಕಾರಣ ಸಭೆ ಸಮಾರಂಭಗಳಲ್ಲಿ ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ನಿಮ್ಮ ಘನತೆಗೆ ತಕ್ಕದ್ದಲ್ಲ ನೀವು ಯಾವ ರೀತಿ ರಾಜಕೀಯಕ್ಕೆ ಬಂದಿರಿ ನಮಗೆ ಗೊತ್ತಿದ್ದೆ ಇನ್ನಿತರ ವಿಚಾರಗಳ ಬಗ್ಗೆ ಮಾತನಾಡಬೇಕಾಗುತ್ತದೆ. ಈ ಜಿಲ್ಲೆಯ ಅಭಿವೃದ್ದಿ ಕಡೆ ಗಮನಹರಿಸುವುದನ್ನು ಬಿಟ್ಟು ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸುವ ಸಲುವಾಗಿ ರೈತರ ಮುಖಂಡರ ಬಗ್ಗೆ ಹಸಿರು ಶಾಲು ಹಾಕಿಕೊಳ್ಳುವುದರ ಬಗ್ಗೆ ಪದೇ ಪದೇ ಹಗುರವಾಗಿ ಮಾತನಾಡುತ್ತಿರುವುದು ನೋವು ತಂದಿದೆ ಎಂದು ಬೇಸರ ವ್ಯಕ್ಷಪಡಿಸುತ್ತಾ ಕೂಡಲೆ ಕ್ಷೇಮಯಾಚಿಸಬೇಕೆಂದು ಅಗ್ರಹಿಸಿದರು.
ಇದೇ ಸಮಯದಲ್ಲಿ ಉಪತಹಶೀಲ್ದಾರ್‍ಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಪೆತ್ತಾಂಡ್ಲಾಹಳ್ಳಿ ಪಿ.ಎಸ್. ಗಂಗಾಧರ್, ಕಾರ್ಯದರ್ಶಿ ಹೆಬ್ಬಟ ರಮೇಶ್, ಪದಾಧಿಕಾರಿಗಳಾದ ಚಲ್ದಿಗಾನಹಳ್ಳಿ ಶ್ರೀಧರ್, ದೇವರಾಜ್, ರಾಜಣ್ಣ, ವೀರಪ್ಪರೆಡ್ಡಿ, ಪ್ರಧಾನ ಕಾರ್ಯದರ್ಶಿ ಅಸ್ಲಾಂ ಪಾಷಾ, ಸ ಕಾರ್ಯದರ್ಶಿ ರಾಮಕೃಷ್ಣ ಇನ್ನಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.