[ಕೆ.ಪಿ.ಸಿ.ಸಿ. ಕಾರ್ಯದರ್ಶಿ ಕಿರಣ್ ಜಿತ್ ರವರು ಬೆಳಗಾವಿಯ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಸತೀಶ್ ಜಾರಕಿ ಹೋಳಿಯ ಆತ್ಮೀಯ ಮಿತ್ರರು. ಸತೀಶ್ ಜಾರಕಿ ಹೋಳಿಯವರು ಜೀವನದಲ್ಲಿ ತಮ್ಮದೆ ಆದ ಆದರ್ಶ ತತ್ವಗಳನ್ನು ಅಳವಡಿಸಿಕೊಂಡವರು, ಅವರು ಮೌಢ್ಯವನ್ನು ನಂಬುವುದಿಲ್ಲಾ, ಅವರು ಗಳಿಗೆಯನ್ನು ನಂಬುದಿಲ್ಲಾ, ಅವರು ಬೆಳಗಾವಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ಪತ್ರವನ್ನು ಸಲ್ಲಿಸುವಾಗ ಬೇಕಂತ್ತಲೇ ಅತ್ಯಂತ ಕೆಟ್ಟ ಗಳಿಗೆಯಲ್ಲಿ ನೀಡಿದ್ದರು, ಕಾರಣ ಇಂತಹ ಮೌಢ್ಯಗಳನ್ನು ಅವರು ನಂಬುದಿಲ್ಲವೆಂದು, ಇದು ಡಾ| ಕಿರಣ್ ಜಿತ್ ತಿಳಿಸಿದ ವಿಷಯವಾಗಿದೆ. ಡಾ|ಕಿರಣ್ ಜಿತ್ ಕೆ.ಪಿ.ಸಿ.ಸಿ. ಕೊಟ್ಟ ಜವಾಬ್ದಾರಿಯಂತೆ ಬೆಳಗಾವಿಯಲ್ಲಿ ಸುಮಾರು 10 ದಿವಸಗಳು ಸತೀಶ್ ಜಾರಕಿ ಹೋಳಿಯ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಇವರ ಪ್ರಕಾರ ಸತೀಶ್ ಜಾರಕಿ ಹೋಳಿಯವರು ಅಗಾಧ ಅಂತರದಲ್ಲಿ ಗೆಲ್ಲಬೇಕಿತ್ತು,ಆದರೆ ಕೊನೆಗಳಿಗೆಯಲ್ಲಿ ಬಿಜೆಪಿ ಯವರ ಹಣದೋಕುಳಿ ಹಾಗೂ ಹೆಂಡದೋಳೆಯಂತಹ ಆಮಿಷಗಳಿಂದ ಮತ್ತು ಅನುಕಂಪದಲ್ಲಿ ಬಿ.ಜೆ.ಪಿ. ಗೆಲುವು ಸಿಕ್ಕಿತು, ಈ ಬಗ್ಗೆ, ಕುಂದಾಪುರದ ಅಳಿಯನಾಗಿರುವ ಡಾ|ಕಿರಣ್ ಜಿತ್ ಅವರ ಅಭಿಪ್ರಾಯವನ್ನು ನೀಡಲಾಗಿದೆ. ಡಾ|ಕಿರಣ್ ಜಿತ್ ಯುವ ಸಮಾಜದ ಮೇಲೆ ಪ್ರಭಂದ ಮಂಡನೆ ಮಾಡಿ ಡಾಕ್ಟರೇಟ್ ಪಡೆವರಾಗಿದ್ದಾರೆ]
ಬೆಂಗಳೂರು,ಮೇ.2 : ಬೆಳಗಾವಿ ಲೋಕಸಭಾ ಉಪಚುನಾವಣೆಯ ಪಲಿತಾಂಶ ಪ್ರಕಟಗೋಂಡಿದ್ದು, ನಮ್ಮ ನಾಯಕರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೋಳಿ ಮತ್ತು ಕಾಂಗ್ರೇಸ್ ಪಕ್ಷಕ್ಕೆ ಸುಮಾರು 4,35087 ಮತಗಳನ್ನು ನೀಡಿದ ಬೆಳಗಾವಿ ಜಿಲ್ಲಾ ಮತದಾರರುಗಳಿಗೆ ಧನ್ಯವಾದಗಳು.
ಸುಮಾರು 4 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದ ಪಕ್ಷವನ್ನ ಕೇವಲ ನಾಲ್ಕೇ ಸಾವಿರ ಅಂತರಗಳಿಗೆ ಸೀಮಿತಗೋಳಿಸಿದ ನೀವೂ ಬಿಜೆಪಿ ಯವರ ಹಣದೋಕುಳಿ ಹಾಗೂ ಹೆಂಡದೋಳೆಯಂತಹ ಆಮಿಷಗಳ ನಡುವೆಯೂ ಮೌಲ್ಯಾಧಾರಿತ ಮತ್ತು ಸೈದ್ಧಾಂತಿಕ ರಾಜಕಾರಣವನ್ನ ಗೆಲ್ಲಿಸಿದ್ದೀರಿ.
ಆಮಿಷಗಳನ್ನೂಡ್ಡಿ ಮತದಾರರನ್ನು ಹಿಯಾಳಿಸದೆ ಸಂಸಧೀಯ ಪ್ರಜಾಪ್ರಭುತ್ವದಲ್ಲಿ ಅಂಕಿ ಅಂಶಗಳನ್ವಯ ನಮಗೆ ಹಿನ್ನಡೆಯಾಗಿರಬಹುದು ಆದರೆ ಚುನಾವಣಾ ರಾಜಕೀಯವನ್ನ ಕಲುಶಿತಗೋಳಿಸದೆ ಸಾಂವಿಧಾನಿಕ ಆಶಯಗಳನ್ನ ಏತ್ತಿ ಹಿಡಿದ ನಿಮಗೆ ಧನ್ನವಾದಗಳು.
ಸೋಲು ಗೆಲುವುಗಳನ್ನು ಲೆಕ್ಕಿಸದೆ, ಮೌಲ್ಯಾಧಾರಿತ ಚುನಾವಣೆಯೂ ತೃಪ್ತಿದಾಯಕ ಏಂಬ ಸಂದೇಶವನ್ನು ಈಡೀ ರಾಜ್ಯಕ್ಕೆ ಸಾರಿ ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿಯಾಕಿದ್ಧೀರಿ, ಇದು ಭ್ರಷ್ಟ ಮನುವಾದಿಗಳ ಎದೆಯಲ್ಲಿ ನಡುಕವೆಬ್ಬಿಸಿರುವುದಂತೊ ಐತಿಹಾಸಿಕ.
Dr. Kiran jith
Secretary K.P.C.C.