

ಭಾರತೀಯ ಜೇಸಿಐನ ವಲಯ 15ರ ಪ್ರತಿಷ್ಠಿತ ಘಟಕ ಜೇಸಿಐ ಬೆಳ್ಮಣ್ಣಿನ 43ನೇ ವರ್ಷದ ನೂತನ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ವಿಂಶತಿ ವರ್ಷದ ಅಧ್ಯಕ್ಷರಾಗಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಇಟ್ಟಮೇರಿ ಲಿಟ್ಲ್ ಫ್ಲವರ್ ಫ್ರೆಂಡ್ಸ್‍ನ ಕಾರ್ಯದರ್ಶಿಯಾಗಿ, ಅಬ್ಬನಡ್ಕ ಕ್ರಿಕೆಟ್ ತಂಡದ ನಾಯಕರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸದಸ್ಯರಾಗಿ ಪರಿಸರದ ಹಲವಾರು ಸಂಘ – ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಇತರೆ ಪದಾಧಿಕಾರಿಗಳು:
ನಿಕಟ ಪೂರ್ವಾಧ್ಯಕ್ಷರು – ವೀಣೇಶ್ ಅಮೀನ್
ಉಪಾಧ್ಯಕ್ಷರುಗಳು – ದೀಕ್ಷಿತ್ ದೇವಾಡಿಗ (ಘಟಕ), ಜಯಶ್ರೀ ಪ್ರಕಾಶ್ ಪೂಜಾರಿ (ತರಬೇತಿ), ಅವಿನಾಶ್ ಪೂಜಾರಿ (ಕಾರ್ಯಕ್ರಮ), ಅಶ್ವಥ್ ಶೆಟ್ಟಿ (ಸಮುದಾಯ ಅಭಿವೃದ್ಧಿ), ಅಮಿತಾ ರವಿರಾಜ್ ಶೆಟ್ಟಿ (ವ್ಯವಹಾರ)
ಕಾರ್ಯದರ್ಶಿ – ಸರಿತಾ ದಿನೇಶ್ ಸುವರ್ಣ
ಜೊತೆ ಕಾರ್ಯದರ್ಶಿ – ಹರಿಪ್ರಸಾದ್ ನಂದಳಿಕೆ
ಕೋಶಾಧಿಕಾರಿ – ಲಿತಿಶಿಯಾ
ನಿದೇರ್ಶಕರುಗಳು – ರಾಜೇಶ್ ಕುಲಾಲ್, ಸುಧೀರ್ ಕಾಮತ್, ಡೆನ್ಜಿಲ್ ಪೆರ್ನಾಂಡೀಸ್, ಜೆಸಿಂತಾ ಡಿಸೋಜಾ, ಅನ್ನಪೂರ್ಣ ಕಾಮತ್
ಯುವ ಜೇಸಿ ಅಧ್ಯಕ್ಷರು – ಕೀರ್ತನ್ ಪೂಜಾರಿ
ಯುವ ಜೇಸಿ ನಿದೇರ್ಶಕರು – ವೈಶಾಖ್ ಹೆಬ್ಬಾರ್
ಲೇಡಿ ಜೇಸಿ ನಿದೇರ್ಶಕರು – ಸೌಜನ್ಯ ಸತೀಶ್ ಕೋಟ್ಯಾನ್
ವಿಕಾಸ ಗೃಹ ಪತ್ರಿಕೆ ಸಂಪಾದಕರು – ಸತ್ಯನಾರಾಯಣ ಭಟ್