ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ನೇತೃತ್ವದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರಲ್ಲಿ ಭಜನಾ ಮಂಡಳಿಯ ವಿಶೇಷ ಸಭೆ ಜರಗಿತು.
ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ತರಬೇತುದಾರರಾದ ರಾಜೇಂದ್ರ ಶೆಟ್ಟಿಗಾರ್‍ರವರು ಭಾಗವಹಿಸಿ ಮಾತನಾಡಿದವರು ಯಾವುದೇ ಜಾತಿ ಮತದ ಭೇದ ಭಾವವಿಲ್ಲದೇ ದೇವರನ್ನು ಒಲಿಸುವ ಭಕ್ತಿ ಶ್ರದ್ಧೆಯ ಮಾರ್ಗವೊಂದಿದ್ದರೆ ಅದುವೆ ಭಜನೆ. ಭಜನೆಯಿಂದ ಸಾಮಾಜಿಕ ಪರಿವರ್ತನೆ, ವ್ಯಸನಮುಕ್ತ ಸಮಾಜ, ಸಂಸ್ಕಾರಯುಕ್ತ ವ್ಯಕ್ತಿಗಳನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷರಾದ ಸುಲೋಚನಾ ಕೋಟ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ಕಾಸ್ರಬೈಲು ಸುರೇಶ್ ಭಜನಾ ಮಂಡಳಿಯ ಕಾರ್ಯದರ್ಶಿ ಹರಿಣಾಕ್ಷಿ ನಂದೀಶ್ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಸಂಘದ ಪೂರ್ವಾಧ್ಯಕ್ಷರಾದ ರಘುವೀರ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಸತೀಶ್ ಅಬ್ಬನಡ್ಕ, ಕೋಶಾಧಿಕಾರಿ ವೀಣಾ ಪೂಜಾರಿ, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ ಸದಸ್ಯರಾದ ಸುದರ್ಶನ್ ಸಾಲ್ಯಾನ್, ಹರಿಪ್ರಸಾದ್ ಆಚಾರ್ಯ, ಸುಲೋಚನಾ ಕೋಟ್ಯಾನ್, ಹರಿಣಿ ಪೂಜಾರಿ, ಪದ್ಮಶ್ರೀ ಪೂಜಾರಿ, ಆರತಿ ಕುಮಾರಿ, ಲೀಲಾ ಎನ್. ಪೂಜಾರಿ, ಕೀರ್ತನ್ ಕುಮಾರ್, ಹರಿಣಾಕ್ಷಿ ಪೂಜಾರಿ, ವೀಣಾ ಪೂಜಾರಿ ಅಶ್ವಿನಿ ಪ್ರಶಾಂತ್, ಮಂಜುನಾಥ ಆಚಾರ್ಯ, ಅಶ್ವಿನಿ ಪ್ರಭಾಕರ್, ಹರೀಶ್ ಪೂಜಾರಿ ಮೊದಲಾದವರಿದ್ದರು.