ಬೆಂಗಳೂರು: ದಿನಾಂಕ 26-08-2023 ರಂದು ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೈಂಟ್ ಜೋಸೆಫ್ ಸಿಬಿಎಸ್ಇ ಶಾಲೆಯಲ್ಲಿ ವಿಜ್ಞಾನ ವಸ್ತು ಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸದಾ ತರಗತಿಗಳಲ್ಲಿ ಪೆನ್ನು ಹಿಡಿಯುತ್ತಿದ್ದ ವಿದ್ಯಾರ್ಥಿಗಳ ಕೈಗಳು ವಿವಿಧ ಬಗೆಯ ವಿಜ್ಞಾನದ ಮಾದರಿಗಳನ್ನು ತಯಾರಿಸಿ ಅಚ್ಚರಿ ಸೃಷ್ಟಿಸಿದ್ದರು. ಪ್ರತಿವರ್ಷವೂ ಶಾಲೆಯೂ ಕೇವಲ ತರಗತಿ ಕೊಠಡಿಯೊಳಗಿನ ಪಠ್ಯ ಪುಸ್ತಕ ಕಲಿಕೆಗೆ ಮಾತ್ರ ಒತ್ತು ನೀಡದೆ, ಮಕ್ಕಳ ಬೌದ್ಧಿಕ ಕೌಶಲ್ಯಗಳ ಜೊತೆಗೆ ವೈಜ್ಞಾನಿಕ ಮತ್ತು ತಾಂತ್ರಿಕ ಅರಿವುಗಳ ಬಾಹ್ಯ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕ ಅನುಭವವನ್ನು ಕಟ್ಟಿಕೊಡುವ ಸಲುವಾಗಿ ‘ಸೈಪ್ಲೋರ್ ’ ಎಂಬ ಹೆಸರಿನಲ್ಲಿ ವಿಜ್ಞಾನ ವಸ್ತುಕಲಾ ಪ್ರದರ್ಶನವನ್ನು ಆಯೋಜಿಸುತ್ತಾ ಬಂದಿದೆ. ಪ್ರತಿನಿತ್ಯ ಟೆಸ್ಟ್, ಹೊಂವರ್ಕ, ಅಸೈಮೆಂಟ್ ಎನ್ನುತ್ತಿದ್ದ ಮಕ್ಕಳು , ನವ ನವೀನ ವಿಜ್ಞಾನದ ಮಾದರಿಗಳನ್ನು ತಯಾರಿಸುವುದರ ಜೊತೆಗೆ ವೈಜ್ಞಾನಿಕ ಕಾರಣಗಳನ್ನು ವಿವರಣಾತ್ಮಕ ಕೌಶಲದೊಂದಿಗೆ ವಿವರಿಸುವುದರ ಮೂಲಕ ತಮ್ಮ ಕನಸಿಗೆ ಜೀವ ತುಂಬಿ ಖುಷಿ ಪಟ್ಟರು. ವಿವಿಧ ಬಗೆಯ ವಿಜ್ಞಾನದ, ಮಾದರಿ, ವಿನ್ಯಾಸಗಳು, ವಿದ್ಯಾರ್ಥಿಗಳ ತರ್ಕಿಸುವ ಪ್ರತಿಭೆಯ ಕೌಶಲ್ಯಕ್ಕೆ ಹೊಸ ಚೈತನ್ಯದ ಹುರುಪು ನೀಡಿತು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಲು ಇಂತಹ ಕಾರ್ಯಕ್ರಮಗಳು ಅಗತ್ಯವಾದದ್ದು, ಕಲಿಕೆ ಎನ್ನುವುದು ಸದಾ ಪ್ರಾಯೋಗಿಕವಾಗಿರಬೇಕು ಮಕ್ಕಳ ಕಲಿಕೆಗೆ ನೈಜ ಅನುಭವ ಸಿಕ್ಕಾಗುವಂತಾಗಬೇಕು ಈ ನಿಟ್ಟಿನಲ್ಲಿ ಶಾಲೆಯು ನಡೆಸುತ್ತಿರುವ ಇಂತಹ ಕಾರ್ಯಕ್ರಮ ಪ್ರಶಂಸನೀಯ. ಈ ಕಾರ್ಯ ಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿವೃತ್ತ ಸಲಹೆಗಾರರಾದ ಡಾ.ವಿಜಯ್ ಚಂದ್ರು, ಅವರು ಕಾರ್ಯಕ್ರಮ ವನ್ನು ಉದ್ಘಾಟಿಸುವ ಮೂಲಕ ನ್ಯಾಸದ ಕುರಿತು ಮಾತನಾಡುತ್ತಾ , ಮಕ್ಕಳು ತಯಾರಿಸಿದ್ದ ವಿಜ್ಞಾನ ಮಾದರಿಗಳನ್ನು ಕುರಿತು ಪ್ರಶಂಸೆ ವ್ಯಕ್ತ ಪಡಿಸಿದರು. ಶಾಲಾ ಮುಖ್ಯಸ್ಥರಾದ ಫಾದರ್ ಜೋಸೆಫ್ ಡಿಸೋಜ ಎಸ್ ಜೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನುಡಿಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತುಂಬಿದರು. ಶಾಲೆಯ ಪ್ರಾಶುಂಪಾಲರಾದ ಫಾದರ್ ರೋಹನ್ ಡಿ’ ಅಲ್ಮೇಡಾ ಎಸ್ ಜೆ ಅವರು ಮಾತನಾಡುತ್ತಾ ವೈಜ್ಞಾನಿಕತೆ, ಕ್ರಿಯಾತ್ಮಕತೆ, ಹಾಗೂ ಮಾನವೀಯತೆ ಸಮ್ಮಿಲನದಿಂದ ಉತ್ತಮ ಜ್ಞಾನವರ್ಧನೆ ಸಾಧ್ಯ ಎಂದು ಹೇಳಿದರು. ಈ ಕಾರ್ಯ ಕ್ರಮದಲ್ಲಿ ಖಜಾಂಚಿಯಾದ ಫಾದರ್ ಜಾನ್ ಲ್ಯಾಗ್ ಬಾಸ್ಕೊ ಎಸ್ ಜೆ ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ , ಪೋಷಕ ಸಭೆಯ ಉಪಾಧ್ಯಕ್ಷ ರಾದ ಕಮಲ್ , ಲೊಯೋಲ ಶಾಲೆಯ ಪ್ರಾಂಶುಪಾಲರಾದ ಫಾದರ್ ಆಲ್ವಿನ್ ಡಿಸೋಜ, ಹರಿಹರದ ಮ್ಯಾನೇಜರ್ ಮತ್ತು ಸಂಯೋಜಕರಾದ ಫಾದರ್ ಹೆರಿಕ್ ಮ್ಯಾಥ್ಯೂಸ್ ಶಾಲೆಯ ಸಂಯೋಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.