ಕುಂದಾಪುರ, ಮೇ.23: ಯು.ಬಿ.ಎಮ್.ಸಿ. ಮತ್ತು ಸಿ.ಎಸ್.ಐ. ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ 2 ದಿವಸಗಳ ಕಾರ್ಯಾಗಾರವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ಶ್ರೀಮತಿ ಐರಿನ್ ಸಾಲಿನ್ಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಗಾರಕ್ಕೆ ಚಾಲನೆ ನೀಡಿದರು.
ಪ್ರಾಂಶುಪಾಲೆ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ, ಕುಮಾರಿ ದಿವ್ಯಾ ಮತ್ತು ಶ್ರೀಮತಿ ವಿಲ್ಮಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶ್ರೀಮತಿ ರಾಜೇಶ್ವರಿ ಅವರು ಪ್ರಾರ್ಥನಾ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಕೋರಿದರು.
ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಅವರು ಶಾಲೆಯಲ್ಲಿ ನಡೆಯಲಿರುವ ಕಾರ್ಯಾಗಾರದ ವಿಷಯಗಳ ಕುರಿತು ಶಿಕ್ಷಕರನ್ನು ಉದ್ದೇಶಿಸಿ ಮತ್ತು ಮುಂಬರುವ ಕಾರ್ಯಕ್ರಮಗಳು ಮತ್ತು ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ವಿವರವಾಗಿ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳು, ದಿವ್ಯಾ ಮತ್ತು ವಿಲ್ಮಾ ಶಿಕ್ಷಕರು ಶಿಕ್ಷಕರಿಗೆ ಕರಕುಶಲ ಚಟುವಟಿಕೆಯನ್ನು ಪ್ರದರ್ಶಿಸಿದರು. ಎಲ್ಲಾ ಶಿಕ್ಷಕರು ಅದ್ಭುತವಾದ ಕರಕುಶಲ ಚಟುವಟಿಕೆಗಳನ್ನು ಸಿದ್ಧಪಡಿಸಿದರು. ಶ್ರೀಮತಿ ಪವಿತ್ರಾ ಸಮಾರಂಭವನ್ನು ನಿರೂಪಿಸಿದರು.
A workshop series for teachers was conducted in UBMC & CSI Krupa English Medium school
kundapur, May.23: The event started with the INAUGURAL Ceremony. Mrs. Irene Salins was the chief guest and Inaugurator.
Mrs. Anita Alice Dsouza , Ms. Divya and Mrs. Vilma were the Resource Persons. Mrs. Rajeshwari invoked God ‘s blessings through a Prayer song.
The Principal, Mrs Anita Alice Dsouza addressed the teachers about the contents of the series of workshops to be held in school and explained in detail about the upcoming events and how to be prepared..
The Resource Persons, Divya and Vilma teachers demonstrated the craft activity to the teachers. All the teachers prepared wonderful craft activities. Mrs. Pavithra ,anchored the ceremony.