ಹೆತ್ತವರಿಗೆ ಎಚ್ಚರದ ಕರೆ ಗಂಟೆ, ಅಪ್ರಾಪ್ತ ವಯ್ಸಕರಿಗೆ ವಾಹನ ಚಲಾಯಿಸಲು ನೀಡಿದರೆ ಹೆತ್ತವರಿಗೆ ದಂಡ ಶಿಕ್ಷೆ

JANANUDI.COM NETWORK


ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅಂದರೆ ಓಡಿಸಲು ಅವಕಾಶ ನೀಡುವ ಪೆÇೀಷಕರು ಎಚ್ಚರ ವಹಿಸ ಬೇಕಾದ ಅವಶ್ಯಕತೆ ಇದೆ. ಅಪ್ರಾಪ್ತ, ಚಿಕ್ಕ ವಯಸ್ಸಿನಲ್ಲೆ ತನ್ನ ಮಗ ವ ಮಗಳು ಚೆನ್ನಾಗಿ ವಾಹನ ಓಡಿಸುತ್ತಾಳೆ ಎಂದು ಗರ್ವದಿಂದ, ಮೊಂದು ಧೈರ್ಯ ಮಾಡಿ ವಾಹನ ಚಲಾಯಿಸಲು ನೀಡಿದರೆ, ಭಾರಿ ಮೊತ್ತದ ದಂಡ ಮತ್ತು ಶಿಕ್ಷೆ ಹೆತ್ತವರು ಅನುಭವಿಸ ಬೇಕಾಗುತ್ತದೆ.
ಸುಳ್ಯದಲ್ಲಿ ಅಪ್ರಾಪ್ತ ಮಗ ಕಾನೂನು ಉಲಂಘಿಸಿ ದ್ವಿ ಚಕ್ರ ವಾಹನ ಓಡಿಸಿದ್ದು ಸಾಬಿತಾದ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ನ್ಯಾಯಲಯ ಮಗನಿಗೆ ದ್ವಿ ಚಕ್ರ ವಾಹನ ಓಡಿಸಲು ಕೊಟ್ಟಿದಕ್ಕೆ 10,000 ರೂಪಾಯಿ ದಂಡ ವಿಧಿಸಲಾಗಿದೆ.
ತಾಲೂಕಿನ ದೇವಚಳ್ಳ ಗ್ರಾಮದ ಸುರೇಶ್ ಎ0ಬಾತ ತನ್ನ ದ್ವಿಚಕ್ರ ವಾಹನವನ್ನು ತನ್ನ ಅಪ್ರಾಪ್ತ ಮಗನಿಗೆ ಓಡಿಸಲು ಕೊಟ್ಟಿದ್ದ. ಅಪ್ರಾಪ್ತನು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದುದನ್ನು ಗಮನಿಸಿದ ಸುಬ್ರಹ್ಮಣ್ಯ ಪೆÇಲೀಸರು ಆತನನ್ನು ತಡೆದು ಪ್ರಕರಣ ದಾಖಲಿಸಿದ್ದರು. ನ0ತರ, ಇದೀಗ ನ್ಯಾಯಾಲಯ ಪೆÇೀಷಕರಿಗೆ ದಂಡ ವಿಧಿಸಿ ತೀರ್ಪು ಪ್ರಕಟಿಸಲಾಗಿದೆ. ಅಪ್ರಾಪ್ತರು ವಾಹನ ಓಡಿಸಿ ಅನಾಹುತ ಆದಲ್ಲಿ ಪೆÇೀಷಕರಿಗೆ ಶಿಕ್ಷೆ ನೀಡಲಾಗುತ್ತದೆ. ಸುರಕ್ಷತೆ ದ್ರಷ್ಟಿಯಿಂದ ಅಪ್ರಾಪ್ತ ಮಕ್ಕಳಿಗೆ ವಾಹನ ಓಡಿಸಲು ಕೊಡಬಾರದೆಂಬುದು ಪೆÇೀಷಕರು ಮನಗಾಣಬೇಕು.