ಕುಂದಾಪುರ : ಅಗಲಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೆಪಿಸಿಸಿ ಕಾರ್ಯಧ್ಯಕ್ಷರು,ಉಡುಪಿ ಜಿಲ್ಲೆಯ ಪಕ್ಷದ ಉಸ್ತುವಾರಿಗಳಾದ ಶ್ರೀ ಧ್ರುವನಾರಾಯಣ್ ರವರಿಗೆ ಶ್ರದ್ಧಾಂಜಲಿ ಸಭೆಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನೆರವೇರಿಸಲಾಯಿತು . ಆರ್ ದ್ರುವ ನಾರಾಯಣ್ ಓರ್ವ ಸಜ್ಜನ ರಾಜಕಾರಣಿ, ಮಿಗುತಾರೆಯಂತೆ ಎಲ್ಲರ ಮೆಚ್ಚುಗೆಯ ಪಾತ್ರರಾಗಿ, ಪಕ್ಷದ ಸಂಘಟನಾ ಚತುರರಾಗಿ, ಶಾಸಕರಾಗಿ ,ಸಂಸದರಾಗಿ ಅವರು ಬಿಟ್ಟು ಹೋಗಿರುವ ಹೆಜ್ಜೆಯ ಗುರುತು ಯಾರೂ ಮರೆಯುವಂತಿಲ್ಲ .ಸದಾ ಅಧ್ಯಯನಶೀಲರಾದ ಅವರು ಸಾಕಷ್ಟು ಜನಾನುರಾಗಿದ್ದರು. ಅವರ ಅಗಲುವಿಕೆಯಿಂದ ರಾಜ್ಯ ಒಬ್ಬ ಧಿಮಂತ ನಾಯಕನನ್ನು ಕಳೆದುಕೊಂಡಿದೆ’ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಅವರು ನುಡಿ ನಮನ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ, ವಿಧಾನಸಭೆಯ ಚುನಾವಣೆ ಆಕಾಂಕ್ಷಿಗಳಾದ ಶಾಮಲಾ ಭಂಡಾರಿ ,ಮೊಳಹಳ್ಳಿ ದಿನೇಶ ಹೆಗ್ಡೆ ,ಅಶೋಕ ಪೂಜಾರಿ, ಜಿಲ್ಲಾ ವಕ್ತಾರ ವಿಕಾಸ ಹೆಗ್ಡೆ ಶ್ರದ್ಧಾಂಜಲಿಯ ಮಾತುಗಳನ್ನು ಆಡಿದರು.
ಸಭೆಯಲ್ಲಿ ಹಿರಿಯರಾದ ಸತೀಶ್ ಕಿಣಿ, ಮಹಿಳಾ ಅಧ್ಯಕ್ಷೇ ದೇವಕಿ ಸಣ್ಣಯ್ಯ, ಯುವ ಅಧ್ಯಕ್ಷ ಇಶ್ಚಿತಾರ್ಥ ಶೆಟ್ಟಿ , ಜಿಲ್ಲಾ ಸೋಷಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ, ಪುರಸಭಾ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಪ್ರಭಾವತಿ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಶಿವಕುಮಾರ್,ರಾಕೇಶ ಶೆಟ್ಟಿ,ಅಶ್ವತ್ ಕುಮಾರ್, ಸುಜನ್ ಶೆಟ್ಟಿ, ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ, ವಿಜಯದರ್ ಕೆ ವಿ, ಭಾಸ್ಕರ ಶೆಟ್ಟಿ ,ಕಾಳಪ್ಪ ಪೂಜಾರಿ, ಎಚ್ ಗಂಗಾಧರ ಶೆಟ್ಟಿ, ಸುಭಾಶ ಪೂಜಾರಿ, ರಾಮಕೃಷ್ಣ ಭಟ್, ಅಭಿಜಿತ್ ಪೂಜಾರಿ ,ಶಶಿ ರಾಜ್ ಪೂಜಾರಿ, ಆಶಾ ಕರ್ವಾಲೋ ,ಎನ್ ರೇವತಿ ಶೆಟ್ಟಿ ,ವಾಣಿ ಆರ್ ಶೆಟ್ಟಿ, ಕೋಡಿ ಸುನಿಲ್ ಪೂಜಾರಿ ,ಕೇಶವ್ ಭಟ್, ಬಿ ಗಿರಿಜಾ ಶಂಕರ್, ಮೆಬಲ್ ಡಿಸೋಜಾ, ವೇಲ ಬ್ರಗಾಂಜಾ , ಜೋಸೆಫ್ ರೆಬೆಲ್ಲೋ, ಜೊಯ್ಸಟನ್ ಡಿಸೋಜಾ, ಕೃಷ್ಣ ಮೊಗವೀರ ,ಸಂಪತ್ ಶೆಟ್ಟಿ, ವೇಣುಗೋಪಾಲ್, ಸಚಿನ್ ಕುಮಾರ್, ಕಡಗಿ ಪ್ರಭಾಕರ್, ಗುರುರಾಜ್ ಹಲಸನಾಡು, ಪುರಂದರ ಶೆಟ್ಟಿ, ಸಂಗೀತ ಇನ್ನಿತರರು ಉಪಸ್ಥಿತರಿದ್ದರು.
ಕೋಣಿ ನಾರಾಯಣಚಾರ್ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಅಶೋಕ್ ಸುವರ್ಣ ವಂದಿಸಿದರು.