ಸ್ಮಾರ್ಟ್ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಪ್ರವರ್ತಕ ಆವಿಷ್ಕಾರಗಳು ವಿಷಯದ ಕುರಿತು ವಿಶೇಷ ಭಾಷಣವನ್ನು MITK ಮೂಡ್ಲಕಟ್ಟೆಯಲ್ಲಿ ಸಂಸ್ಥೆಯ ಇನ್ನೋವೇಶನ್ ಮತ್ತು ಡೆವಲಪ್‌ಮೆಂಟ್ ಸೆಲ್ ವತಿಯಿಂದ ಏರ್ಪಡಿಸಲಾಗಿತ್ತು. ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠದ ಡಾ.ರಮೇಶ ಶಿವಸಾಮಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಡಾ. ರಮೇಶ್ ಶಿವಸಾಮಿ ಅವರು ತಮ್ಮ ಭಾಷಣದಲ್ಲಿ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಸೇರಿದಂತೆ ದೇಶಗಳು ಮತ್ತು ವಿಶ್ವಸಂಸ್ಥೆಯ ದಶಕಗಳ ಕೆಲಸದ ಮೇಲೆ ನಿರ್ಮಿಸಲಾದ 17 ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಕುರಿತು ಮಾತನಾಡಿದರು. ಅವರು ಯಾವುದೇ ಒಂದು ಅಥವಾ ಹೆಚ್ಚಿನ Sಆಉ ಗಳಲ್ಲಿ ಕೆಲಸ ಮಾಡಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಅವರು ಭಾರತ ಮತ್ತು ವಿದೇಶಗಳಲ್ಲಿ (ಚಿಲಿ, ದಕ್ಷಿಣ ಅಮೇರಿಕಾ) ಸಂಶೋಧನೆಯಲ್ಲಿ ಪಡೆದ ತಮ್ಮ ಅಪಾರ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು ಮತ್ತು ಹಿಂದೂಳಿದ ಪ್ರದೇಶ ಮತ್ತು ವಿನಮ್ರ ಹಿನ್ನೆಲೆಯಿಂದಲೂ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತಮ್ಮದೇ ಉದಾಹರಣೆಯನ್ನು ಉಲ್ಲೇಖಿಸಿ ವಿವರಿಸಿದರು. ಸಂಯೋಜಿತ ವಸ್ತುಗಳು ಮತ್ತು ಸೂಪರ್ ಕಂಡಕ್ಟರ್‌ಗಳ ಕ್ಷೇತ್ರದಲ್ಲಿ ಸಂಶೋಧನೆಯ ವ್ಯಾಪ್ತಿಯ ಬಗ್ಗೆಯೂ ಅವರು ಹೇಳಿದರು. ಸಂಸ್ಥೆಯ ಆವಿಷ್ಕಾರ ಮತ್ತು ಅಭಿವೃದ್ಧಿ ಕೋಶದ ಮುಖ್ಯಸ್ಥರು ಡಾ.ತಿಲಗ್ ರಾಜ್ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಬ್ರಾಂಡ್ ಬಿಲ್ಡಿಂಗ್, ಐಎಂಜೆ ಸಂಸ್ಥೆಗಳ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಸಿಬ್ಬಂದಿ ವರ್ಗ ಹಾಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.