

ದಿನಾಂಕ 12.04.2023 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ದಕ್ಷಿಣ ರೈಲ್ವೇ/ಮಂಗಳೂರು ಜಂಕ್ಷನಿನ ರೈಲ್ವೇ ಸಂರಕ್ಷಣಾ ಪಡೆ ಪೋಸ್ಟ್ ಕಮಾಂಡರ್ ಅವರ ಕಚೇರಿಯಿಂದ. ಅನುಮಾನಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿದ್ದ ಯುವತಿಯನ್ನು ರಕ್ಷಿಸಿ,ಆರೈಕೆ ಮತ್ತು ಚಿಕಿತ್ಸೆ ನೀಡಲು ವಿನಂತಿಸಿ ಕರೆ ಬಂದಿತು. ಆಕೆ ತನ್ನ ಬ್ಯಾಗ್ ಮತ್ತು ದಾಖಲೆಗಳನ್ನು ಕಳೆದುಕೊಂಡು ಗಾಬರಿ ಮತ್ತು ಖಿನ್ನತೆಗೆ ಒಳಗಾಗಿದ್ದಳು. ಬ್ರದರ್ ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಂತೆ ಸ್ನೇಹಾಲಯ ತಂಡ ತೇಜಸ್ವಿನಿ ದೇವಾಸೆ ಯನ್ನು ರಕ್ಷಿಸಿತು ಮತ್ತು ವಿಚಾರಣೆಯ ನಂತರ ಅವಳು ನಾಗಪುರದವಳು ಮತ್ತು ಪೋಷಕರಿಗೆ ತಿಳಿಸದೆ ಮನೆಯಿಂದ ಹೊರಟು ಬಂದಿರುವುದಾಗಿ ತಿಳಿದು ಬಂದಿತು . ಆಕೆಗೆ ವಸತಿ ಮತ್ತು ಮಾನಸಿಕ ಬೆಂಬಲದ ಅಗತ್ಯವಿದ್ದ ಕಾರಣ ರೈಲ್ವೆ ಅಧಿಕಾರಿಗಳು ಆಕೆಯನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥ ರ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದರು.
ಸ್ನೇಹಾಲಯದಲ್ಲಿ ಆಕೆಯ ದಾಖಲಾತಿ ಮತ್ತು ಸಮಾಲೋಚನೆಯ ನಂತರ, ತಂಡವು ನಾಗ್ಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಆಕೆಯ ವಿವರಗಳನ್ನು ಹಂಚಿಕೊಂಡಿತು. ಮಾತ್ರವಲ್ಲದೆ ತಂಡವು ಆಕೆಯ ಕಾಲೇಜನ್ನು ಪತ್ತೆ ಹಚ್ಚಿ ಆಕೆಯ ಪೋಷಕರ ವಿವರಗಳನ್ನು ಪಡೆಯಲು ಪ್ರಯತ್ನಿಸಿತು . ಆಕೆಯ ತಂದೆಯ ಸಂಪರ್ಕ ವಿವರಗಳನ್ನು ಪಡೆದ ನಂತರ ತಂಡವು PW ಆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದ ಆಕೆಯ ತಂದೆ ಶ್ರೀ ರಮೇಶ್ ದೇವಾಸೆ ಅವರೊಂದಿಗೆ ದೂರವಾಣಿ ಸಂವಾದ ನಡೆಸಿತು. ತಂಡವು ಪೋಷಕರ ಸರಿಯಾದ ವಿವರಗಳನ್ನು ಖಚಿತಪಡಿಸಿ ಕೊಂಡಿತು ಮತ್ತು ಇಂದು ದಿನಾಂಕ 13.04.2023 ರಂದು ಅವರು ನಾಗಪುರದಿಂದ ಸ್ನೇಹಾಲಯಕ್ಕೆ ಬಂದರು.
ಶ್ರೀ ರಮೇಶ್ ದೇವಾಸೆರವರು 5 ದಿನಗಳಿಂದ ಕಾಣೆಯಾದ ತನ್ನ ಮಗಳನ್ನು ಸಂತೋಷದಿಂದ ಸ್ವೀಕರಿಸಿದರು. ತನ್ನ ಮಗಳನ್ನು ರಕ್ಷಿಸಿ ಆಕೆಯನ್ನು ಮತ್ತೆ ಆಕೆಯ ಕುಟುಂಬದೊಂದಿಗೆ ಒಂದುಗೂಡಿಸುವ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಸ್ನೇಹಾಲಯ ಮತ್ತು ರೈಲ್ವೆ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು.
ತನ್ನೆಲ್ಲ ವಸ್ತುಗಳನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ತೇಜಸ್ವಿನಿ ದೇವಾಸೆಯನ್ನು
ಸ್ನೇಹಾಲಯದ ಸಲಹೆಗಾರರು ಆಕೆಗೆ ಮತ್ತು ಆಕೆಯ ತಂದೆಗೆ ಪ್ರತ್ಯೇಕ ಕೌನ್ಸಿಲಿಂಗ್ ಸೆಷನ್ ಮತ್ತು ಕೌಟುಂಬಿಕ ಸಮಾಲೋಚನೆಯನ್ನೂ ನಡೆಸಿದರು. ಕೆಲವು ಅವಧಿಗಳಿಗಾಗಿ ಅವಳನ್ನು ಸಲಹೆಗಾರರ ಬಳಿಗೆ ಕರೆದೊಯ್ಯಲು ಅವಳ ತಂದೆಗೆ ಸಲಹೆ ನೀಡಲಾಯಿತು. ಶ್ರೀ ರಮೇಶ್ ಮತ್ತು ಅವರ ಕುಟುಂಬ ಸದಸ್ಯರು ತೇಜಸ್ವಿನಿ ದೇವಾಸೆ ಅವರನ್ನು ಸುರಕ್ಷಿತ ಮತ್ತು ಆರೋಗ್ಯಕರ ಸ್ಥಿತಿಯಲ್ಲಿ ಮರಳಿ ಪಡೆದಕ್ಕಾಗಿ ಸಂತೋಷಪಟ್ಟರು.



