ಲಂಡನ್: ಜರ್ಮನಿಯಿಂದ ಈಜಿಪ್ಟ್ಗೆ 3 ಸಾವಿರ ಕಾರುಗಳನ್ನು ಹೊತ್ತು ಸಾಗುತಿದ್ದ ಸರಕು ಸಾಗಣೆ ಹಡಗಿಗೆ ನೆದರ್ಲೆಂಡ್ಸ್ ಸಮುದ್ರ ತೀರದಲ್ಲಿ ಬೆಂಕಿ ಬಿದ್ದಿದ್ದು, ಅದರಲ್ಲಿದ್ದ ಭಾರತ ಮೂಲದ ನಾವಿಕ ಸಿಬ್ಬಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಜುಲಾಯ್ 26 ಬುದವಾರದಂದು ನಡೆದ ಈ ಘಟನೆಯಲ್ಲಿ ಹಡಗಿನಲ್ಲಿ ಬೆಂಕಿಯ ತೀವ್ರತೆ ಹೆಚ್ಚಿದಂತೆ ಕೆಲವು ಸಿಬ್ಬಂದಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಹಡಗಿನ ಡೆಕ್ನಿಂದ ಜಿಗಿದರು. ಲೈಫ್ಬೋಟ್ನಿಂದ ಅವರನ್ನು ಎತ್ತಿಕೊಂಡು ಹೋಗಲಾಯಿತು ಎಂದು ಲೈಫ್ಬೋಟ್ನ ಕ್ಯಾಪ್ಟನ್ ಡಚ್ ಬ್ರಾಡ್ಕಾಸ್ಟರ್ ಎನ್ಒಎಸ್ಗೆ ತಿಳಿಸಿದರು, ಎಂದು ಎಪಿ ವರದಿ ಮಾಡಿದೆ. ಕೆಲವು ಸಿಬ್ಬಂದಿಗಳಿಗಳು ಮೂಳೆ ಮುರಿತಗಳಿಂದ, ಸುಟ್ಟಗಾಯ ಮತ್ತು ಉಸಿರಾಟದ ತೊಂದರೆಗಳನ್ನು ಅನುಭವಿಸಿದರು ಮತ್ತು ಅವರನ್ನು ಉತ್ತರ ನೆದರ್ಲ್ಯಾಂಡ್ಸ್ನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ತುರ್ತು ಸೇವೆಗಳು ತಿಳಿಸಿವೆ.
ಈ ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡಿದ್ದು, ಹಡಗಿಗೆ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಕೆಲವು ದಿನಗಳ ತನಕ ಉರಿಯಲಿದೆ ಎಂದು ಡಚ್ ಕರಾವಳಿ ಕಾಪಲು ಪಡೆ ತಿಳಿಸಿದೆ.ಭಾರತ ಮೂಲದ ನಾವಿಕ ಸಿಬ್ಬಂದಿಯೊಬ್ಬರು ಮೃತಪಟ್ಟಿರುವುದಾಗಿ ನೆದರ್ಲೆಂಡ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಪ್ರಕಟಿಸಿ ಮಾಹಿತಿ ನೀಡಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ತಲುಪಿಸಲು ಎಲ್ಲ ಪ್ರಯತ್ನ ನಡೆಸುತ್ತಿರುವುದಾಗಿ ಅದು ಹೇಳಿಕೊಂಡಿದೆ.