ಕುಂದಾಪುರ ಐತಿಹಾಸಿಕ ರೋಜರಿ ಮಾತಾ ಚರ್ಚಿನ 450 ವರ್ಷಗಳ ಸಮಾರೋಪ ಸಮಾರಂಭದ ಪತ್ರಿಕಾ ಗೋಷ್ಟಿ

JANANUDI.COM NET WORK


ಕುಂದಾಪುರ,ಅ.5.ಕುಂದಾಪುರ ಐತಿಹಾಸಿಕ ರೋಜರಿ ಮಾತಾ ಚರ್ಚಿನ 450 ವರ್ಷಗಳ ಸಮಾರೋಪ ಸಮಾರಂಭದ ಪತ್ರಿಕಾ ಗೋಷ್ಟಿಯು ಕುಂದಾಪುರ ಚರ್ಚಿನ ಸಭಾ ಬವನದಲ್ಲಿ ನಡೆಯಿತು.
ಪತ್ರಿಕಾ ಗೋಷ್ಟಿಯಲ್ಲಿ ಚರ್ಚಿನ ರಿತ್ರೆಯನ್ನು ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂದಿಸ್ ವಿವರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಚರ್ಚಿನ ಚರಿತ್ರೆಯ ಲೇಕನ
ನೀಡಲಾಯಿತು. ಸಮಾರೋಪ ಸಮಾರಂಭವು ಅಕ್ಟೋಬರ್ 7 ರಂದು ನಡೆಯಲಿದ್ದು ಅಹ್ವಾನ ಪತ್ರವನ್ನು ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಗಣ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಬಿಶಪ್ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ, ಶಿವಮೊಗ್ಗ ಧರ್ಮಪ್ರಾಂತ್ಯದ ಬಿಶಪ್ ಅ|ವಂ|ಡಾ| ಫ್ರಾನ್ಸಿಸ್ ಸೆರಾವೊ, ಉಡುಪಿ ಧರ್ಮಪ್ರಾಂತ್ಯದ ಅ|ವಂ| ಮೊನ್ಸಿಜೆಂರ್ ಬ್ಯಾಪ್ಟಿಸ್ಟ್ ಡಯಾಸ್, ವಂ|ಸಿಸ್ಟರ್ ಮರಿಯಾ ಶಮಿತಾ, ಪೆÇ್ರವಿನ್ಸಿಯಲ್ ಸುಪೀರಿಯರ್, ಶಾಶಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ 40 -45 ಧರ್ಮಗುರುಗಳು ಪವಿತ್ರ ಬಲಿದಾನದಲ್ಲಿ ಭಾಗವಸುರೆಂದು ತಿಳಿಸಿದರು

ಸಹಾಯಕ ಧರ್ಮಗುರು ವಂ|ವಿಜಯ್ ದಿಸೋಜಾ, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಆರ್ಥಿಕ ಮಂಡಳಿಯ ಜೋನ್ಸನ್ ಡಿಆಲ್ಮೇಡಾ, ಡಾ|ಸೋನಿ ಡಿಕೋಸ್ತಾ, ಒಸ್ವಲ್ಡ್ ಕರ್ವಾಲ್ಲೊ, ಶಾಂತಿ ಬಾರೆಟ್ಟೊ, ಶಾಲೆಟ್ ರೆಬೆಲ್ಲೊ, ಜೊಯ್ ಕರ್ವಾಲ್ಲೊ. ವಿಕ್ಟರ್ ಡಿಸೋಜ, ಡೊಮಿನಿಕ್ ಬ್ರಗಾಂಜಾ, ಶಾಂತಿ ಕರ್ವಾಲ್ಲೊ, ಎಲ್ಡ್ರಿನ್ ಡಿಸೋಜಾ, ಪ್ರೀತಿ ಕ್ರಾಸ್ತಾ ಮುತಾಂದ ಪ್ರಚಾರ ಸಮಿತಿಯ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಪಿ.ಆರ್. ರಾಮಯ್ಯ ಪ್ರಶಸ್ತಿ ಭಾಜನರಾದ ಪಂಚ ಗಂಗಾವಳಿ ಅಭಿವ್ರದ್ದಿಯ ಕನಸುಗಾರ ಪತ್ರಕರ್ತ ಯು.ಎಸ್.ಶೆಣ್ಯ ಅವರಿಗೆ ಗೌರವಿಸಲಾಯಿತು.
ಪ್ರಚಾರ ಸಮಿತಿಯ ಸಂಚಾಲಕ ಬರ್ನಾಡ್‍ಡಿಕೋಸ್ತಾ ಸ್ವಾಗತಿಸಿದರು. 450 ವರ್ಷಗಳ ಸಮಾರೋಪ ಸಂಭ್ರಮದ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ವಂದಿಸಿದರು
.