ಶ್ರೀನಿವಾಸಪುರ : ಪಟ್ಟಣದ ನೌಕರರ ಭವನದಲ್ಲಿ ಶುಕ್ರವಾರ ನೌಕರರ ಚುನಾವಣೆಯ ಬಗ್ಗೆ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಜನಾರ್ಧನ್ ಮಾತನಾಡಿ 2024-29 ರ ಸಾಲಿನ ಚುನಾವಣೆಯ ರಾಜ್ಯ ನೌಕರರ ಚುನಾವಣಾ ಅಧಿಕಾರಿ ಎಸ್.ಹನುಮನರಸಯ್ಯ ರವರು ಅದಿಸೂಚನೆಯನ್ನು ಹೊರಡಿಸಿದ್ದು, ತಾಲೂಕು ಶಾಖೆಯಿಂದ 9-10-24 ರಂದು ನಾಮಪತ್ರ ಸಲ್ಲಿಕೆ, 21-10-24 ಉಮೇದುವಾರಿಕೆಯನ್ನು ವಾಪಸ್ಸು ಪಡೆಯುವುದು 28-10 -24 ನಿರ್ದೇಶಕರ ಚುನಾವಣೆ ನಡೆಯಲಿದೆ. ಚುನುವಾಣಾಧಿಕಾರಿಯಾಗಿ ನಿವೃತ್ತ ಮುಖ್ಯ ಶಿಕ್ಷಕ ಐಮಾರೆಡ್ಡಿ ನೇಮಕಮಾಡಲಾಗಿದೆ ಚುನಾವಣೆಯ ಪಕ್ರಿಯೆಯನ್ನು ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಚುನಾವಣೆಯ ನೀತಿ , ನಿಯಮಗಳನ್ನು ಎಲ್ಲಾ ಸರ್ಕಾರಿ ನೌಕರರು ಪಾಲಿಸುವಂತೆ ಮನವಿ ಮಾಡಿದರು.
ನೌಕರರ ಸಂಘದ ತಾಲೂಕು ಖಜಾಂಚಿ ಹೆಚ್.ವಿ.ಅಶೋಕ್ಕುಮಾರ್ ಮಾತನಾಡಿ ಶ್ರೀನಿವಾಸಪುರ ಶಾಖೆಯ ಕಾರ್ಯಕಾರಿ ಸಮಿತಿ ಚುನವಾಣೆಯನ್ನು ರಾಜ್ಯ ನೌಕರರ ಚುನಾವಣಾ ಅಧಿಕಾರಿ ಎಸ್.ಹನುಮನರಸಯ್ಯ ಹಮ್ಮಿಕೊಂಡಿದ್ದು, ಇದೇ ತಿಂಗಳು ಸರ್ಕಾರಿ ಎಲ್ಲಾ ಇಲಾಖೆಗಳ ನೌಕರರ ಚುನಾವಣೆ ನಡೆಯಿಲಿದೆ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಎಲ್ಲಾ ಇಲಾಖೆಯ ನೌಕರರು ಅರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
4, ಎಸ್ವಿಪುರ್ : ಪಟ್ಟಣದ ನೌಕರರ ಭವನದಲ್ಲಿ ನೌಕರರ ಚುನಾವಣೆಯ ಪತ್ರಿಕಾ ಗೋಷ್ಟಿಯಲ್ಲಿ ಎಸ್.ವಿ.ಜನಾರ್ಧನ್, ಹೆಚ್.ವಿ.ಅಶೋಕ್ಕುಮಾರ್ ಮಾತನಾಡಿದರು.